ಸಾಮಾನ್ಯರಿಗೆ ನ್ಯಾಯ ದೊರಕಿಸದ ಪೊಲೀಸರ ವಿರುದ್ಧ ಆರೋಪ
1 min read
ಸಾಮಾನ್ಯರಿಗೆ ನ್ಯಾಯ ದೊರಕಿಸದ ಪೊಲೀಸರ ವಿರುದ್ಧ ಆರೋಪ
ಸತತ ದೂರು ನೀಡಿದರೂ ಕ್ರಮ ಕೈಗೊಳ್ಳದ ಬಾಗೇಪಲ್ಲಿ ಪೊಲೀಸರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ನ್ಯಾಯ ಕೇಳುತ್ತಿರುವ ವ್ಯಕ್ತಿ
ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ತಪ್ಪು ಮಾಡಿದ ಆರೋಪಿಗಳ ಪರ ನಿಂತರೆ ಸಾಮಾನ್ಯ ಜನರ ಸ್ಥಿತಿ ಏನಾಗಲಿದೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ತಪ್ಪು ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರಾಜಿ ಪಂಚಾಯಿತಿ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಪೊಲೀಸರೇ ಒತ್ತಡ ಹಾಕುತ್ತಿರುವುದಾಗಿ ಇಲ್ಲೊಬ್ಬರು ಅಳವತ್ತುಕೊಡಂಇದ್ದಾರೆ.
ಕಾನೂನು ರಕ್ಷಣೆ ಮಾಡುವುದಕ್ಕಾಗಿ ಪೊಲೀಸ್ ವ್ಯವಸ್ಥೆ ನಮ್ಮ ಸಮಾಜದಲ್ಲಿದೆ. ಯಾರೇ ತಪ್ಪು ಮಾಡಿದರೂ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ನ್ಯಾಯಾಲಯದ ಮೂಲಕ ಶಿಕ್ಷೆಗೆ ಗುರಿಪಡಿಸುವ ಜವಾಬ್ದಾರಿಯೂ ಪೊಲೀಸರಿಗೆ ಸಲ್ಲುತ್ತದೆ. ಹಾಗಾಗಿಯೇ ಜನಸಾಮಾನ್ಯರ ರಕ್ಷಣೆಗೆ ಪೊಲೀಸರು ಸದಾ ನಿಲ್ಲಬೇಕು ಎಂಬುದು ನಿಯಮ. ಆದರೆ ಇಲ್ಲಿ ಆಗಿರುವುದೇ ಬೇರೆ. ನೊಂದವರ ಪರ ನಿಲ್ಲಬೇಕಾದ ಪೊಲೀಸರು ಆರೋಪಿಗಳ ಪರ ನಿಂತು ಸೆಟಲ್ಮೆಂಟ್ ಮಾಡಿಕೊಳ್ಳಿ ಎಂದು ಒತ್ತಡ ಹಾಕುತ್ತಿದ್ದು ಇದರಿಂದ ಬೇಸತ್ತ ವ್ಯಕ್ತಿಯೊಬ್ಬ ತನಗೆ ನ್ಯಾಯ ಕೊಡಿಸುವಂತೆ ಮಾಧ್ಯಮಗಳ ಮೊರೆ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಬಾಗೇಪಲ್ಲಿ ಮೂಲದ ಶ್ರೀನಿವಾಸ ರೆಡ್ಡಿ ಎಂಬುವರು ಬಾಗೇಪಲ್ಲಿ ತಾಲೂಕಿನ ಪರಗೂಡು ವ್ಯಾಪ್ತಿಯ ಸೋಲ ಮಾಕಲಪಲ್ಲಿಯಲ್ಲಿ ಮೂರು ವರ್ಷಗಳ ಹಿಂದೆ ಗುತ್ತಿಗೆ ಆಧಾರದ ಮೇಲೆ ಗೋಶಾಲೆ ನಡೆಸುತ್ತಿದ್ದರಂತೆ. ಸುಮಾರು ೫೦ಕ್ಕೂ ಹೆಚ್ಚು ಹಸುಗಳ ಲಾಲನೆ ಪಾಲನೆ ಮಾಡುತ್ತಿದ್ದ ಶ್ರೀನಿವಾಸ ರೆಡ್ಡಿಗೆ ಇದೀಗ ಬಹುದೊಡ್ಡ ಸಂಕಷ್ಟ ಎದುರಾಗಿದೆ.
ಗೋ ಶಾಲೆ ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆಯೇ ಸತೀಶ್ ಎಂಬುವರಿಗೆ ಶ್ರೀನಿವಾಸ್ ರೆಡ್ಡಿ ಅವರು ಸುಮಾರು 90 ಟ್ರಾಕ್ಟರ್ ಲೋಡಿನ ಸಗಣಿಯ ಹಣ ಮತ್ತು ಮುಂಗಡವಾಗಿ ನೀಡಿದ್ದ 5 ಲಕ್ಷ ಹಣವನ್ನು ಹಿಂತಿರುಗಿಸುವAತೆ ಕೇಳಿದ್ದಾರೆ. ಇದರಿಂದ ಸತೀಶ್ ಮತ್ತು ಬೆಂಬಲಿಗರು ಗೋಶಾಲೆಗೆ ಬರುವ ಮೇವಿನ ಲಾರಿಗಳು ಮತ್ತು ಕೆಲಸಗಾರರ ಮೇಲೆ ದಬ್ಬಾಳಿಕೆ ನಡೆಸಿ ಪುಂಡಾಟಿಕೆ ಮೆರೆದಿರುವ ವಿಚಾರಕ್ಕೆ ಸಂಬAಧಿಸಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಶ್ರೀನಿವಾಸರೆಡ್ಡಿಯವರ ಆರೋಪವಾಗಿದೆ.ಸ
ಸಾಕಷ್ಟು ಬಾರಿ ಪೊಲೀಸ್ ಠಾಣೆಗೆ `ಭೇಟಿ ನೀಡಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದರು ಪೊಲೀಸರು ಮಾತ್ರ ಯಾವುದೇ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಶ್ರೀನಿವಾಸ್ ರೆಡ್ಡಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳನ್ನು `ಭೇಟಿ ಮಾಡಿ ದೂರು ನೀಡಿದ್ದಾರೆ. ಈ ಮಾಹಿತಿ ಸಂಗ್ರಹಿಸಿದ ಪೊಲೀಸರು ನೀನು ಎಲ್ಲೆಲ್ಲೂ ಹೋಗಿದ್ದೀಯಾ, ಅಲ್ಲೆ ಕೆಲಸ ಮಾಡಿಸಿಕೋ ಎಂದು ನಿಂದಿಸಿ ಯಾವುದೇ ಸಹಕಾರ ನೀಡುತ್ತಿಲ್ಲವಂತೆ. ಸದ್ಯ ಇದರಿಂದ ಬೇಸತ್ತ ಶ್ರೀನಿವಾಸ ರೆಡ್ಡಿ ನನಗೆ ನ್ಯಾಯ ದೊರಕಿಸಿಕೊಟ್ಟು ನನ್ನ ಮತ್ತು ಮೂಕ ಪ್ರಾಣಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ರಕ್ಷ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.
ಒಟ್ಟಾರೆ ಜನಸಾಮಾನ್ಯರಿಗೆ ನ್ಯಾಯ ಮತ್ತು ರಕ್ಷ ಣೆ ಕಲ್ಪಿಸಿ ಕೊಡಬೇಕಿದ್ದ ಪೊಲೀಸರು ಬಲಾಢ್ಯರ ನೆರವಿಗೆ ನಿಂತಿರುವುದು ವಿಪರ್ಯಾಸವೇ ಆಗಿದ್ದು, ಈ ಪ್ರಕರಣಕ್ಕೆ ಸಂಬಧಿಸಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.