ದೆಹಲಿಯಲ್ಲಿ ಮತ್ತಷ್ಟು ಹದಗೆಟ್ಟ ವಾಯು ಗುಣಮಟ್ಟ; ಟ್ರಕ್ಗಳಿಗೆ ನಿರ್ಬಂಧ, ವರ್ಕ್ ಫ್ರಂ ಹೋಮ್ ಮೊರೆ
1 min readದೆಹಲಿ ವಾಯು ಗುಣಮಟ್ಟ ದಿನ ದಿನಕ್ಕೆ ಹದಗೆಡುತ್ತಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ನವದೆಹಲಿ: ದೆಹಲಿ ಮತ್ತು ಎನ್ಸಿಆರ್ನಲ್ಲಿ ಮಾಲಿನ್ಯ ಮಟ್ಟ ಭಾನುವಾರ ರಾತ್ರಿ ಮತ್ತಷ್ಟು ಬಿಗಾಡಾಯಿಸಿದೆ.
ವಾಯು ಗುಣಮಟ್ಟ ಸೂಚ್ಯಂಕ 471ರಷ್ಟು ದಾಖಲಾಗಿದೆ. ಹೀಗಾಗಿ, ವಾತಾವರಣ ದಟ್ಟ ಹೊಗೆಯಿಂದ ಕೂಡಿದೆ ಎಂದು ವಾಯು ಗುಣಮಟ್ಟ ವ್ಯವಸ್ಥೆ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (ಎಸ್ಎಎಫ್ಎಆರ್) ದತ್ತಾಂಶದ ವರದಿಯಲ್ಲಿ ತಿಳಿಸಿದೆ. ರಾಷ್ಟ್ರ ರಾಜಧಾನಿಯ ಆನಂದ್ ವಿಹಾರ್ ಸ್ಟೇಷನ್ ಅತ್ಯಂತ ಕಳಪೆ ವಾಯುಗುಣ ಹೊಂದಿದ್ದು, ಪಿಎ2.5 ವರದಿಯಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ.
ಟ್ರಕ್ಗಳಿಗೆ ನಿರ್ಬಂಧ: ದೆಹಲಿ, ಎನ್ಸಿಆರ್ನಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಯಕ್ಷನ್ ಪ್ಲಾನ್ (ಜಿಆರ್ಎಪಿ) 4ನೇ ಹಂತ ಜಾರಿಗೆ ತರಲು ವಾಯುಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಕೆಲವು ಕ್ರಮಕ್ಕೆ ಮುಂದಾಗಿದೆ. ಅದರನುಸಾರ, ಟ್ರಕ್ಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ಜನರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.
ನಾಲ್ಕನೇ ಹಂತ ಅತಿ ಹೆಚ್ಚು ವಾಯು ಮಾಲಿನ್ಯಕ್ಕೆ ಒಳಗಾಗಿದ್ದು ಈ ಸಂಬಂಧ ಎಚ್ಚರಿಕೆ ನೀಡಲಾಗಿದೆ. ಜಿಆರ್ಎಪಿಯ ನಾಲ್ಕನೇ ಹಂತದ ಪ್ರಕಾರ, 8 ಅಂಶಗಳ ಕ್ರಿಯಾ ಯೋಜನೆಯು ಎನ್ಸಿಆರ್ನಲ್ಲಿ ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದರಡಿ ದೆಹಲಿಗೆ ಟ್ರಕ್ಗಳ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಆದಾಗ್ಯೂ ಕೆಲವು ಅಗತ್ಯ ವಸ್ತು, ಸೇವೆಗಳನ್ನು ನೀಡುವ ವಾಹನ, ಎಲ್ಎನ್ಜಿ, ಸಿಎನ್ಜಿ ಮತ್ತು ಎಲೆಕ್ಟ್ರಿಕ್ ಟ್ರಕ್ಗಳಿಗೆ ದೆಹಲಿ ಪ್ರವೇಶಕ್ಕೆ ಅನುಮತಿ ಇದೆ. ದೆಹಲಿ ರಿಜಿಸ್ಟರ್ನ ಡೀಸೆಲ್-ಚಾಲಿತ ಮಧ್ಯಮ ಸರಕುಗಳ ವಾಹನಗಳು (ಎಂಜಿವಿ) ಭಾರಿ ಸರಕುಗಳ ವಾಹನಗಳು (ಎಚ್ಜಿವಿ) ಅಗತ್ಯ ಸರಕು-ಸೇವೆ ನೀಡುವ ವಾಹನಗಳಿಗೂ ಪ್ರವೇಶ ನಿರ್ಬಂಧವಿದೆ.