ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ
1 min readವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ
ಪಿಪಿಎಚ್‌ಎಸ್ ಶಾಲೆ ವಿದ್ಯಾರ್ಥಿಗಳಿಗೆ ಜಾಗೃತಿ
ರಾಜ್ಯ ರಸ್ತೆ ಸಾರಿಗೆ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಪಂಚಗಿರಿ ಬೋಧನಾ ಪ್ರೌಢಶಾಲೆ ಆಶ್ರಯದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಸಾಚರಣೆ ಕಾರ್ಯಕ್ರಮವನ್ನು ಇಂದು ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಚಿಕ್ಕಬಳ್ಳಾಪುರದ ಪಿಪಿಎಚ್‌ಎಸ್ ಶಾಲೆಯಲ್ಲಿ ಇಂದು ವಾಯು ಮಾಲಿನ್ಯ ನಿಯಂತ್ರಣಾ ಸಾಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಆರ್‌ಟಿಒ ಅಧಿಕಾರಿ ವಿವೇಕಾನಂದ ಮಾತನಾಡಿ, 18 ವರ್ಷ ವಯಸ್ಸಾಗುವವರೆಗೂ ವಾಹನ ಚಲಾಯಿಸಬಾರದು, ಹೆಚ್ಚು ಹೊಗೆ ಬಿಡುವ ವಾಹನಗಳನ್ನು ನಿಲ್ಲಿಸಬೇಕು, ಪೆಟ್ರೋಲ್ ವಾಹನಗಳಿಗಿಂತ ಡೀಸೆಲ್ ವಾಹನ ಉತ್ತಮ, ಸಿಗ್ನಲ್‌ನಲ್ಲಿ ವಾಹನ ಮಾಡಬೇಕು ಎಂದು ಹೇಳಿದರು.
ನವೆಂಬರ್ ತಿಂಗಳು ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಹಾಸಾಚರಣೆಯಾಗಿದೆ. ಮುಂದಿನ ತಿಂಗಳು ವಾಹನ ತಪಾಸಣೆ ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳು ವಾಹನ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಪ್ರತಿ ಶಾಲೆಯಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಎಸ್‌ಎಲ್‌ವಿ ಡ್ರೆವಿಂಗ್ ಶಾಲೆ ಮುಖ್ಯಸ್ಥ ನವಮೋಹನ್ ಮಾತನಾಡಿ, ವಾಯುಮಾಲಿನ್ಯಕ್ಕೆ ಸಂಬ0ಧಿಸಿದ ಚಿತ್ರಗಳನ್ನು ಉತ್ತಮವಾಗಿ ಬಿಡಿಸಿ, ನಿಮ್ಮಲ್ಲಿರುವ ಕಲೆ ಪ್ರದರ್ಶಿಸಿದ್ದೀರಿ, ಅದು ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.
ಪರಿಸರ ಮಾಲಿನ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ತೀವ್ರ ಸಮಸ್ಯೆಯಾಗಿ ಕಾಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಎಲ್ಲರೂ ಕೈ ಜೋಡಿಸಬೇಕಿದೆ. ಗಿಡ ನೆಟ್ಟು ಪೋಷಣೆ ಮಾಡುವ ಮೂಲಕ ಪ್ರತಿಯೊಬ್ಬರೂ ಪರಿಸರ ಕಾಳಜಿ ತೋರಬೇಕು. ಇದರಿಂದ ಪರಿಸರ ಸಮತೋಲನ ಸಾಧ್ಯವಾಗಲಿದೆ. ವಾಹನಗಳಿಂದ ಆಗುವ ಮಾಲಿನ್ಯ ನಿಯಂತ್ರಣ ತಡೆಯಲು ಮಕ್ಕಳು ಜಾಗೃತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪಿಪಿಎಚ್‌ಎಸ್ ಶಾಲೆಯ ಮುಖ್ಯ ಶಿಕ್ಷಕ ಎಂ ನಾರಾಯಣಸ್ವಾಮಿ ಮಾತನಾಡಿ, ನಿಮ್ಮಲ್ಲಿರುವ ಪ್ರತಿಭಯನ್ನ ಗುರುತಿಸಿದ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು. ೧೮ ವರ್ಷ ಮೇಲ್ಪಟ್ಟ ನಂತರ ವಾಹನ ಚಲಾಯಿಸಿ, ನಿಮ್ಮ ಪೋಷಕರಿಗೂ ಇದರ ಬಗ್ಗೆ ಅರಿವು ಮೂಡಿಸಿ ಎಂದು ಕಿವಿಮಾತು ಹೇಳಿದರು. ಪರಿಸರದ ಬಗ್ಗೆ ಉತ್ತಮ ಚಿತ್ರ ಬರೆದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಪ್ರಮಾಣ ಪತ್ರ ನೀಡಲಾಯಿತು. ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಶಿಕ್ಷಕ ಗುಂಪು ಮರದ ಆನಂದ್ ಮಾತನಾಡಿ, ಇಂದಿನ ಗಿಡ ನಾಳೆ ಮರವಾಗುತ್ತೆ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ನಿಮ್ಮಲ್ಲಿರುವ ಚಿತ್ರಕಲೆ ಮುಂದಿನ ದಿನಗಳಲ್ಲಿ ಕೀರ್ತಿ ತರಲಿ ಎಂದು ಹಾರೈಸಿದರು.