ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಂದ ಕೃಷಿ ಮೇಳ
1 min read
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಂದ ಕೃಷಿ ಮೇಳ
ಜಿಕೆವಿಕೆ ಅಂತಿಮ ಕೃಷಿ ವಿದ್ಯಾರ್ಥಿಗಳಿಂದ ರೈತರಿಗೆ ಕಾರ್ಯಾಗಾರ
ಕೃಷಿ ಬೃಂದಾವನದಲ್ಲಿ ಹತ್ತಾರು ಮಿಶ್ರ ಬೆಳೆ ಬೆಳೆದು ಪ್ರದರ್ಶನ
ಕೃಷಿ ಬೃಂದಾವನಕ್ಕೆ ಭೇಟಿ ನೀಡಿ ಬೆಳೆಗಳ ಬಗ್ಗೆ ಮಾಹಿತಿ ಪಡೆದ ರೈತರು
ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಒಬ್ಬ ರೈತ ಯಾವ ಬೆಳೆ ಜಾಸ್ತಿ ಹಾಕ್ತಾನೋ ಅದೇ ಬೆಳೆ ಬೆಳೆಯಲು ಅನೇಕ ರೈತರು ಉತ್ಸುಕರಾಗ್ತಿದ್ದಾರೆ. ಒಂದೇ ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಎಲ್ಲರಿಗೂ ಬೆಲೆ ಸಿಗದೇ ರೈತ ನಷ್ಟ ಅನುಭವಿಸ್ತಿದ್ದಾನೆ. ಹೀಗಾಗಿ ಜಿಕೆವಿಕೆ ವಿದ್ಯಾರ್ಥಿಗಳು ಸಾವಯವ ಕೃಷಿ ಮಿಶ್ರ ಬೇಸಾಯ ಮಾಡಿ ಲಾಭಗಳಿಸೋದು ಹೇಗೆ ಅನ್ನೋದರ ಕುರಿತು ಗ್ರಾಮೀಣ ರೈತರಿಗೆ ತೋರಿಸಿಕೊಟ್ಟಿದ್ದಾರೆ.
ರೈತರ ಭೂಮಿಯಲ್ಲಿ ವಿದ್ಯಾರ್ಥಿಗಳಿಂದ ಬೆಳೆದಿರೋ ಮಿಶ್ರ ಬೆಳೆಗಳು, ಹತ್ತಾರು ಬೆಳೆಗಳನ್ನ ಒಂದೇ ಜಾಗದಲ್ಲಿ ಹೇಗೆ ಬೆಳೆಯಬೇಕು ಅಂತಾ ತೋರಿಸಿಕೊಟ್ಟಿರೋ ಕೃಷಿ ವಿದ್ಯಾರ್ಥಿಗಳು, ಮಿಶ್ರ ಸಾವಯವ ಕೃಷಿ ಬೆಳೆಗಳನ್ನ ವೀಕ್ಷಣೆ ಮಾಡ್ತಿರೋ ಶಾಲಾ ಮಕ್ಕಳು ಹಾಗೂ ಗ್ರಾಮೀಣ ರೈತರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಮೇಳ ಆಯೋಜನೆ ಮಾಡಿದ್ದರು.
ಅಂದಹಾಗೆ ಇದೇ ಗ್ರಾಮದಲ್ಲಿ ಕಳೆದ 90 ದಿನಗಳಿಂದ ಕೃಷಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳು ಮಿಶ್ರ ಬೇಸಾಯವನ್ನ ಮಾಡಿದ್ರೆ ಲಾಭಗಳಿಸೋದು ಹೇಗೆ ಅನ್ನೋದರ ಕುರಿತು ರೈತರಿಗೆ ತಿಳಿಸಿಕೊಟ್ಟಿದ್ದಾರೆ. ಒಬ್ಬ ರೈತ ಒಂದು ಬೆಳೆಯನ್ನ ಬೆಳೆದು ನಷ್ಟ ಅನುಭವಿಸದೇ ಮಿಶ್ರ ಬೆಳೆಗಳನ್ನ ಬೆಳೆದು ಹೇಗೆ ರೈತ ಮೇಲೆ ಬರಬೇಕು ಅನ್ನೋದರ ಕುರಿತು ಸ್ವತಃ ವಿದ್ಯಾರ್ಥಿಗಳೇ ಹಲವು ಬೆಳೆಗಳನ್ನ ತೋಟದಲ್ಲಿ ಬೆಳೆದು ಹೇಗೆ ನಿರ್ವಹಣೆ ಮಾಡಬೇಕು ಅನ್ನೋದರ ಕುರಿತು ರೈತರಿಗೆ ತೋರಿಸಿಕೊಟ್ಟಿದ್ದಾರೆ.
ರೈತ ಬೆಳೆಯುವ ಬೆಳೆಗೆ ರೋಗ ಬರೋ ಮೊದಲೇ ಔಷದಿಗಳನ್ನ ಸಿಂಪಡಿಸಿ ಅದರ ಗುಣಮಟ್ಟವನ್ನ ಕಳೆದುಕೊಳ್ಳೊದರ ಜೊತೆಗೆ ಖರ್ಚು ಜಾಸ್ತಿ ಬರ್ತಿದೆ. ಹೀಗಾಗಿ ಇದೇ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ರೈತರು ಯಾವ ಬೆಳೆ ಹೇಗೆ ಬೆಳೆದರೇ ಉತ್ತಮ, ಜೊತೆಗೆ ಯಾವ ಸಂದರ್ಭದಲ್ಲಿ ಯಾವ ಬೆಳೆಯನ್ನ ತೋಟಕ್ಕೆ ಇಡಬೇಕು, ರೋಗ ತಡೆಯೋದು ಹೇಗೆ ಅನ್ನೋದರ ಕುರಿತು ಕಾರ್ಯಾಗಾರ ಮಾಡಿದ್ದಾರೆ. ಜೊತೆಗೆ ಗ್ರಾಮೀಣ ಕೃಷಿ ಮೇಳದಲ್ಲಿ ವಿದ್ಯಾರ್ಥಿಗಳು ೧೦ ಗುಂಟೆ ಜಾಗದಲ್ಲಿ ಅನೇಕ ಮಿಶ್ರ ಬೆಳೆ, ಕೈ ತೋಟ, ತರಕಾರಿ ಬೆಳೆಗಳನ್ನ ಬೆಳೆದು ಪ್ರದರ್ಶನಕಕೆ ಇಟ್ಟಿದ್ದು, ಶಾಲಾ ಮಕ್ಕಳು ಸೇರಿದಂತೆ ರೈತರು ಕೃಷಿ ಬೃಂದಾವನಕ್ಕೆ ಭೇಟಿಯನ್ನ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಇದನ್ನ ನೋಡಿದ ರೈತರು ಸಂತಸ ವ್ಯಕ್ತಪಡಿಸಿದ್ದು, ರೈತರಾದ ನಾವು ಎಲ್ಲಿ ಬೆಳೆ ಇಡುವುದರಲ್ಲಿ ಎಡುವುತ್ತಿದ್ದೇವೆ ಅನ್ನೋದನ್ನ ನೋಡಿ ಸರಿಪಡಿಸಿಕೊಳ್ಳಲು ಸಹರಿಯಾಗುತ್ತೆ ಎಂದಿದ್ದಾರೆ.
ಒಟ್ಟಾರೇ ಸಮುದಾಯ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕ್ತಿದ್ದು, ಒಂದೇ ಬೆಳೆ ಬೆಳೆದು ಅದಕ್ಕೆ ಬೆಲೆ ಸಿಗದೇ ರೈತ ಕೈ ಸುಟ್ಟುಕೊಳ್ತಿದ್ದಾನೆ. ಹೀಗಾಗಿ ಗ್ರಾಮೀಣ ಭಾಗದ ರೈತರಿಗೆ ಅರಿವಿನ ಜೊತೆಗೆ ಮಿಶ್ರ ಬೆಳೆಗಳನ್ನ ಬೆಳೆದು ಹೇಗೆ ವ್ಯವಸಾಯದಲ್ಲಿ ಸೈ ಎನ್ನಿಸಿಕೊಳ್ಳಬೇಕು ಅನ್ನೋದನ್ನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.