ಹಳೇ ಕಾಮಗಾರಿಗೆ ಮತ್ತೆ ಬಿಲ್ ಪಡೆದ ಆರೋಪ
1 min readಹಳೇ ಕಾಮಗಾರಿಗೆ ಮತ್ತೆ ಬಿಲ್ ಪಡೆದ ಆರೋಪ
ನರೇಗಾ ಕಾಮಗಾರಿಗೆ ಶಾಸಕರ ಅನುದಾನದಲ್ಲಿ ಬಿಲ್
ಸೂಕ್ತ ತನಿಖೆ ನಡೆಸಿ, ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆಗ್ರಹ
ಮಹಾತ್ಮ ಗಾಂಧಿ ರಾಷ್ಟಿಯ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿರುವ ಕಾಮಗಾರಿಗೆ ಶಾಸಕರ ಅನುದಾನದಲ್ಲಿ ೫ ಲಕ್ಷ ಹಣ ಪಡೆದಿರುವ ಆರೋಪ ಕೋಲಾರ ಜಿ¯್ಲೆ ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಮಾಕಲಪಲ್ಲಿ ಗ್ರಾಮದಲ್ಲಿ ಕೇಳಿಬಂದಿದೆ .
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ನಾರಮಾಕಲಪಲ್ಲಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟಿಯ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿರುವ ಕಾಮಗಾರಿಗೆ ನರೇಗಾದಿಂದ ಬಿಲ್ ಪಡೆದಿದ್ದು, ಅದೇ ಕಾಮಗಾರಿಗೆ ಮತ್ತೆ ಶಾಸಕರ ಅನುದಾನದಿಂದ ೫ ಲಕ್ಷ ಪಡೆದಿರುವ ಆರೋಪ ಕೇಳಿಬಂದಿದೆ. ಅರಣ್ಯ ದಿಂದ ಕೆರೆಯ ತನಕ ಮುಂದುವರಿದ ಕಾಮಗಾರಿಯನ್ನು 2021-22 ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಮಾಡಲಾಗಿದ್ದು, ಅದೇ ಕಾಮಗಾರಿಗೆ ಶಾಸಕರ ಅನುದಾನದಡಿ ಗುತ್ತಿಗೆದಾರ ವಳಗೇರನಹಳ್ಳಿ ಶಿವಾರೆಡ್ಡಿ ಎಂಬುವರು ಕಾಮಗಾರಿ ಮಾಡದೇ ನರೇಗಾ ಕಾಮಗಾರಿಯನ್ನೇ ಬಳಕೆ ಮಾಡಿಕೊಂಡು ಹೆಸರು ಬದಲಿಸಿ ನಾರಮಾಕಲಪಲ್ಲಿ ಗ್ರಾಮದ ಊರು ಮುಂದೆ ಕೆರೆ ಕಾಲುವೆ ನಿರ್ವಹಣಾ ಕಾಮಗಾರಿ ಎಂದು ಹೆಸರು ನಮೂದಿಸಿ ಪ್ರಸ್ತುತ ಸಾಲಿನ ಫೆಬ್ರವರಿ 20ರಂದು 5 ಲಕ್ಷ ಬಿಲ್ ಪಡೆದಿದ್ದಾರೆ.
ಶಾಸಕರಿಂದ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂದು ನಾರಮಾಕಲಹಳ್ಳಿ ಗ್ರಾಮದ ವೆಂಕಟರಾಮರೆಡ್ಡಿ ಆರೋಪಿಸಿದ್ದು, ಕೂಡಲೇ ಸಂಬ0ಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರನ ಲೈಸೆನ್ಸ್ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.