ಚಿಕ್ಕಬಳ್ಳಾಪುರದವರೇ ಚುನಾವಣಾಧಿಕಾರಿಯಾಗಿ ಬೇಕು ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಎಂಎ0 ನಂದಿ ಬಾಷಾ ಆಗ್ರಹ
1 min readವಿವಾದಕ್ಕೀಡಾದ ಜಮಾ ಅತೆ ಅಹಲೆ ಇಸ್ಲಾಂ ಸಂಘಟನೆ ಚುನಾವಣೆ
ಚಿಕ್ಕಬಳ್ಳಾಪುರದವರೇ ಚುನಾವಣಾಧಿಕಾರಿಯಾಗಿ ಬೇಕು
ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಎಂಎ0 ನಂದಿ ಬಾಷಾ ಆಗ್ರಹ
ಜಮಾ ಅತೆ ಅಹಲೆ ಇಸ್ಲಾಂ ಸಂಘಟನೆ ಚುನಾವಣೆ ವಿಚಾರದಲ್ಲಿ ಒತ್ತಡಕ್ಕೆ ಮಣಿದು ಚುನಾವಣಾಧಿಕಾರಿಯಾಗಿ ಚಿಕ್ಕಬಳ್ಳಾಪುರದವರನ್ನೇ ನೇಮಿಸಲಾಗಿದ್ದು, ಅವರು ಒಂದು ವರ್ಗಕ್ಕೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುವ ಶಂಕೆಯಿ0ದ ನ್ಯಾಯಾಸಯದ ಮೊರೆ ಹೋಗುವಂತಾಗಿದೆ ಎಂದು ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಎಂ ಎಂ ನಂದಿ ಬಾಷಾ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಎಂ ಎಂ ನಂದಿ ಬಾಷಾ ಸೇರಿದಂತೆ ಸಮುದಾಯದ ಪ್ರಮುಖರು ಮಾತನಾಡಿ, ಜಮಾ ಅತೆ ಅಹಲೆ ಇಸ್ಲಾಂ ಸಂಘಟನೆ ವಕ್ಫ್ ಸಂಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಿಯಮಗಳನ್ನು ಗಾಳಿಗೆ ತೂರಿ 7 ವರ್ಷಗಳ ಕಾಲ ಒಬ್ಬರೇ ಅಧ್ಯಕ್ಷರಾಗಿ ಮುಂದುವರಿದಿರುವುದು ಕಾನೂನು ವಿರೋಧಿಯಾಗಿದೆ ಎಂದರು.
ಅಲ್ಲದೆ ಕೋವಿಡ್ ಸಮಯದಲ್ಲಿ ಚುನಾವಣೆ ನಡೆಸಲು ಮುಂದಾಗಿದ್ದು, ಆ ಸಮಯದಲ್ಲಿ 60 ವರ್ಷ ಮೇಲ್ಪಟ್ಟವರು ಹೊರ ಬಾರದಂತೆ ಸರ್ಕಾರ ನಿಯಮ ವಿಧಿಸಿತ್ತು. ಹಾಗಾಗಿ ಚುನಾವಣೆ ನಡೆಯಲಿಲ್ಲ. ಇದೀಗ ಸರ್ವೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಿಕ್ಕಬಳ್ಳಾಪುರದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರನ್ನು ಚುನಾವಣಾಧಿಕಾರಿಯಾಗಿ ನೇಮಿಸಿದ್ದು, ಅವರು ಒಂದು ವರ್ಗದ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಮಾ ಅತೆ ಅಹಲೆ ಇಸ್ಲಾಂ ಸಂಘಟನೆಯಲ್ಲಿ 10 ಸಾವಿರ ಮಂದಿಗೆ ಸದಸ್ಯತ್ವ ನೀಡಲು ಅವಕಾಶವಿದ್ದು, ಕೇವಲ 4 ಸಾವಿರ ಮಂದಿ ಸದಸ್ಯರನ್ನಿಟ್ಟಿಕೊಂಡು ಚುನಾವಣೆಗೆ ಹೋಗಲು ಮುಂದಾಗಿದ್ದಾರೆ. ಹಾಗಾಗಿ ಈ ಕ್ರಮಗಳನ್ನು ಖಂಡಿಸಿ ನ್ಯಾಯಾಲಯದ ಮೊರೆ ಹೋಗಲಾಗಿದೆ. ಇದೀಗ ನೂತನ ಸದಸ್ಯತ್ವ ಮಾಡಬೇಕು, ನಂತರ ಮತ್ತೊಬ್ಬ ಚುನಾವಣಾಧಿಕಾರಿಯನ್ನು ನೇಮಿಸಿ ಚುನಾವಣೆ ನಡೆಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಂಸ್ಥೆಯ ಬೈಲಾ ನಿಯಮಗಳನ್ನು ಗಾಳಿಗೆ ತೂರಿ, ಅವರಿಗೆ ಬೇಕಾದ ರೀತಿಯಲ್ಲಿ ಅವರಿಗೆ ಮತ ಹಾಕುವವರಿಗೆ ಮಾತ್ರ ಸದಸ್ಯತ್ವ ಮಾಡಿಸುತ್ತಾ, ಅಧಿಕಾರ ಅನುಭವಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸಮುದಾಯದ ಹಿತ ಗಾಳಿಗೆ ತೂರಿ ಭ್ರಷ್ಟಾಚಾರ ನಡೆಸುತ್ತಾ ಇರುವ ವ್ಯಕ್ತಿಗಳನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಬಾರದು, ಚುನಾವಣೆ ಪಾರದರ್ಶಕವಾಗಿ ನಡೆಯಲು ನಿಷ್ಠಾವಂತ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಮುಖ್ಯವಾಗಿ ಸಂಘದ ಸದಸ್ಯತ್ವ ಶುಲ್ಕ ೫೦ ರುಪಾಯಿಯಿಂದ ಏಕಾಏಕಿ 250 ರುಪಾಯಿಗೆ ಏರಿಸಲಾಗಿದೆ. ಇದರಿಂದ ಬಡವರು ಸದಸ್ಯತ್ವ ಮಾಡಿಸಲು ಹಿಂದೇಟು ಹಾಕುವಂತಾಗಿದೆ. ಬಡವರಿಗೆ ಸಂಸ್ಥೆಯ ಯಾವುದೇ ಅಭಿವೃದ್ಧಿ ಯೋಜನೆಗಳು ದೊರೆಯಬಾರದು ಎಂಬ ದುರುದ್ದಶದಿಂದ ಸದಸ್ಯತ್ವ ಶುಲ್ಕ ಏರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಮನುಲ್ಲಾ ಸಾಹೇಬ್, ಇಬ್ರಾಹಿಂ, ಹಶೀಮ್ ಬನ್ನೂರ್, ಅಬೂಬಕರ್, ಝವುಲ್ಲಾ, ನವಾಜ್, ಅಬ್ಬಾಸ್ ಇದ್ದರು.