ಬಾಗೇಪಲ್ಲಿಯಲ್ಲಿ ಪಾಳು ಬಿದ್ದ ಪ್ರಚಾರ ಫಲಕಗಳು
1 min readಬಾಗೇಪಲ್ಲಿಯಲ್ಲಿ ಪಾಳು ಬಿದ್ದ ಪ್ರಚಾರ ಫಲಕಗಳು
ಬಾಗೇಪಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಫಲಕಗಳು
ಬಾಗೇಪಲ್ಲಿ ಪಟ್ಟಣದ ಬಹಳಷ್ಟು ಸರಕಾರಿ ಕಚೇರಿಗಳ ಮುಂದೆ ಸರ್ಕಾರದ ಯೋಜನೆಗಳ ಕುರಿತು ಪ್ರಚಾರ ಮಾಡುವ ಪ್ರಚಾರದ ಫಲಕಗಳು ತುಕ್ಕು ಹಿಡಿದು ಪಾಳು ಬಿದ್ದಿವೆ. ಇದರಿಂದಾಗಿ ಸರ್ಕಾರದ ಯೋಜನೆಗಳ ಕುರಿತು ಪ್ರಚಾರ ಮಾಡಬೇಕಿದ್ದ ಸ್ಟಿಕ್ಕರ್‌ಗಳನ್ನು ಅದರ ಮೇಲೆ ಅಂಟಿಸದೆ ಹಾಗೆ ಬಿಡಲಾಗಿದೆ.
ಬಾಗೇಪಲ್ಲಿ ಪಟ್ಟಣದ ಬಹಳಷ್ಟು ಸರಕಾರಿ ಕಚೇರಿಗಳ ಮುಂದೆ ಸರ್ಕಾರದ ಯೋಜನೆಗಳ ಕುರಿತು ಪ್ರಚಾರ ಮಾಡುವ ಪ್ರಚಾರದ ಫಲಕಗಳು ತುಕ್ಕು ಹಿಡಿದು ಪಾಳು ಬಿದ್ದಿವೆ. ಇದರಿಂದಾಗಿ ಸರ್ಕಾರದ ಯೋಜನೆಗಳ ಕುರಿತು ಪ್ರಚಾರ ಮಾಡಬೇಕಿದ್ದ ಸ್ಟಿಕ್ಕರ್‌ಗಳನ್ನು ಅದರ ಮೇಲೆ ಅಂಟಿಸದೆ ಹಾಗೆ ಬಿಡಲಾಗಿದೆ. ಬಹುತೇಕ ಗ್ರಾಮ ಪಂಚಾಯಿತಿ ಕಚೇರಿಗಳ ಮುಂದೆ ಇರುವ ಪ್ರಚಾರದ ಫಲಕಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಇದಕ್ಕೆ ಸಂಬoಧಪಟ್ಟoತೆ ಅಧಿಕಾರಿಗಳು ನಿತ್ಯವೂ ನೋಡುತ್ತಿದ್ದರು,ಅದರ ಬಗ್ಗೆ ಗಮನವೇ ಹರಿಸುತ್ತಿಲ್ಲ.
ಇಂತಹ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಪ್ರಚಾರದ ಫಲಕಗಳನ್ನು ನಿರುಪಯುಕ್ತವಾಗಿ ಬಿಟ್ಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗುತ್ತಿದೆ. ಇದಕ್ಕೆ ಸಂಬoಧಪಟ್ಟoತೆ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ಲಭ್ಯವಾಗದೆ ಗೊಂದಲಕ್ಕೀಡಗಿದ್ದಾರೆ. ಇರುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಜನರಿಗೆ ಮಾಹಿತಿ ನೀಡಬಹುದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಈ ಹಿಂದೆ ಶಿಕ್ಷಣ ಇಲಾಖೆ ಕಚೇರಿ ಮುಂಭಾಗದಲ್ಲಿ ತಿಂಗಳ ತಿರುಳು, ಮತದಾನ ಜಾಗೃತಿ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತಿತ್ತು. ಅದೇ ರೀತಿಯಲ್ಲಿ ಆಸ್ಪತ್ರೆಗಳ ಮುಂಭಾಗದಲ್ಲಿ ಯಾವ ದಿನಾಂಕ, ವಾರದಲ್ಲಿ ಏನೆಲ್ಲ ಆರೋಗ್ಯ ಇಲಾಖೆ ಕಾರ್ಯಕ್ರಮಗಳು, ದಿನಾಚರಣೆಗಳ ಕುರಿತು ಮಾಹಿತಿ ಪ್ರದರ್ಶಿಸಲಾಗುತ್ತಿತ್ತು. ಆದರೆ ಪ್ರಸ್ತುತ ಪ್ರಚಾರದ ಫಲಕಗಳು ತುಕ್ಕು ಹಿಡಿದು, ಯಾವಾಗ ಯಾರ ಮೇಲೆ ಬೀಳುತ್ತ ವೆಯೊ? ಎಂಬ ಆತಂಕ ಸೃಷ್ಟಿಸುತ್ತಿವೆ.
ಇನ್ನು ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿ, ಪುರಸಭೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಂಭಾಗ ಅಳವಡಿಸಿರುವ ಫಲಕಗಳಂತು ಖಾಸಗಿ ಪ್ರಚಾರಕ ಕರಪತ್ರಗಳನ್ನು ಅಂಟಿಸಲು, ಯಾವುದಾದರೂ ನಾಟಕ, ಡ್ರಾಮ ಮತ್ತಿತರ ಕಾರ್ಯಕ್ರಮಗಳ ಭಿತ್ತಿ ಪತ್ರಗಳನ್ನು ಅಂಟಿಸಲು ಸೀಮಿತವಾಗಿವೆ.
ಈ ಹಿಂದೆ ಕಾಲೇಜಿಗೆ ಹೋಗುತ್ತಿದ್ದಾಗ ಸರಕಾರಿ ಕಚೇರಿಗಳ ಮುಂಭಾಗದಲ್ಲಿ ಅಳವಡಿಸಿರುವ ಫ್ಲಕ್ಸ್ ನೋಡಿ, ಮುಂದಿನ ವಾರ ಇಂತಹ ದಿನಾಚರಣೆ ಬರುತ್ತದೆ. ಅಂತಹ ಮಹನೀಯರ ಮಾಹಿತಿ ಸಿಗುತ್ತದೆ. ಹಾಗೇಯೇ ವಿಶೇಷ ದಿನಗಳ ವೈಶಿಷ್ಟದ ಬಗ್ಗೆ ಅರಿತುಕೊಳ್ಳುತ್ತಿದ್ದೆ. ಆದರೆ ಈಗ ಅಂತಹ ಮಾಹಿತಿ ಫಲಕಗಳೂ ಇಲ್ಲ, ಫ್ಲಕ್ಸ್ಗಳೂ ಕಾಣಿಸುವುದಿಲ್ಲ ಎಂದು ಪಟ್ಟಣದ ನಿವಾಸಿ ಹರೀಶ್ ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಯೋಜನೆಗಳ ಕುರಿತು ಪ್ರಸ್ತುತ ಪಡಿಸುವ ಕಾರ್ಯಕ್ರಮಗಳ ಮಾಹಿತಿಯ ಫ್ಲಕ್ಸ್ಗಳನ್ನು ಸಂಬoಧಪಟ್ಟ ಗ್ರಾಮ ಪಂಚಾಯತಿಗಳ ಮುಂಭಾಗದ ಫಲಕಗಳ ಮೇಲೆ ಬಿತ್ತರಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ ಗ್ರಾಮೀಣ ಜನತೆಗೆ ಸುಲಭವಾಗಿ ಮಾಹಿತಿ ತಿಳಿಯಲು ಸಹಕಾರಿಯಾಗುತ್ತದೆ. ಆದ್ದರಿಂದ ಇದಕ್ಕೆ ಸಂಬAಧಪಟ್ಟ ಅಧಿಕಾರಿಗಳು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.