ಸರ್ಕಾರಿ ಶಾಲೆಗೆ ಹೈಟೆಕ್ ಕಟ್ಟಡ ಕೊಡುಗೆ ಕೊಟ್ಟ ಯುವ ಉದ್ಯಮಿ..!
1 min readಸರ್ಕಾರಿ ಶಾಲೆಗೆ ಹೈಟೆಕ್ ಕಟ್ಟಡ ಕೊಡುಗೆ ಕೊಟ್ಟ ಯುವ ಉದ್ಯಮಿ..!
ಗೌರಿಬಿದನೂರು ಆಂಧ್ರ ಗಡಿಭಾಗದಲ್ಲಿ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಕಿರಣ್…!
ಆಂಧ್ರದಲ್ಲಿ ಜನನ ಬೆಂಗಳೂರಲ್ಲಿ ಕೆಲಸ ಗೌರಿಬಿದನೂರಿನಲ್ಲಿ ಶಾಲೆ ನಿರ್ಮಾಣ..
ಸರ್ಕಾರಿ ಶಾಲೆಗಳು ಅಂದರೆ ಸಾಮಾನ್ಯವಾಗಿ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತೆ.. ಅದರಲ್ಲೂ ಗ್ರಾಮಾಂತರ ಭಾಗದ ಶಾಲೆಗಳ ಮಾತು ಹೇಳಲೇಬೇಕಾಗಿಲ್ಲ.. ಅಂತದ್ರಲ್ಲಿ ಶಾಲಾಮಕ್ಕಳು ಕೊಠಡಿಗಳಿಲ್ಲದೆ ಬಿಸಿಲಿನಲ್ಲಿ ಪಾಠ ಕೇಳುತ್ತಿರೋದನ್ನ ಕಂಡ ಯುವಉದ್ಯಮಿಯೋರ್ವ ಹಿಂದು ಮುಂದೆ ನೋಡದೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶಾಲೆಗೆ ಸುಸಜ್ಜಿತ ಹೈಟೆಕ್ ಕಟ್ಟಡವೊಂದನ್ನ ಕಟ್ಟಿಸಿ ದೊಡ್ಡತನ ಮೆರೆದಿದ್ದಾರೆ.. ಅಷ್ಟಕ್ಕೂ ಅದೆಲ್ಲಿ ಅದ್ಯಾರು ಅಂತೀರಾ ಈ ಸ್ಟೋರಿ ನೋಡಿ..
ಹೀಗೆ…ಆಂಧ್ರ ಗಡಿ ಭಾಗದಲ್ಲಿನ ಹಳ್ಳಿಯೊಂದರಲ್ಲಿ ಸಿನಿ ತಾರೆಯರು, ಸಾಮಾಜಿಕ ಕಾರ್ಯಕರ್ತರು ಒಂದೆಡೆ ಸೇರಿ ಸರ್ಕಾರಿ ಶಾಲೆ ಆವರಣದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತವಾಗಿ ಕಟ್ಟಡದ ಲೋಕಾರ್ಒಣೆ ಮಾಡ್ತಿರೋದು…ಇನ್ನೂ ಸರ್ಕಾರಿ ಶಾಲೆಯನ್ನ ತಳಿರು ತೋರಣಗಳಿಂದ ಸಿಂಗರಿಸಿ ಹೂವಿನ ಅಲಂಕಾರ ಮಾಡಿ ಹಬ್ಬದ ವಾತಾವರಣ ನಿರ್ಮಾಣವಾಗಿರೋದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಹಳೇಊರು ಗ್ರಾಮದಲ್ಲಿ. ಹೌದು ಅತ್ಯಂತ ಹಿಂದುಳಿದ ಹಳೆ ಊರು ಗ್ರಾಮದಲ್ಲಿ ಶಾಲೆಗೆ ಸರಿಯಾದ ಕೊಠಡಿಗಳಿಲ್ಲದೆ ಬಯಲಿನಲ್ಲಿ ಬಿಸಿಲು ಮಳೆಯಲ್ಲೇ ಪಾಠ ಕಲಿಯುತ್ತಿದ್ದ ದೃಶ್ಯ ಕಂಡ ಬೆಂಗಳೂರಿನ ಉದ್ಯಮಿ ಕಿರಣ್ ಈ ಶಾಲೆಗೆ ಒಂದು ಕಟ್ಟಡ ನಿರ್ಮಿಸಿಬೇಕು ಅಂತ ಒಂದು ವರ್ಷದ ಹಿಂದೆ ನಿರ್ಧರಿಸಿದ್ದರಂತೆ.. ಅದರಂತೆ ತನ್ನ ಮಕ್ಕಳು ಓದುತ್ತಿರುವ ಖಾಸಗ ಶಾಲೆಯ ಕಟ್ಟದದ ಮಾದರಿಯನ್ನ ಇಟ್ಟುಕೊಂಡು ಸರ್ಕಾರಿ ಶಾಲೆಗೆ ಇದೀಗ ಸುಸಜ್ಜಿತ ಕಟ್ಟಡ ನಿರ್ಮಿಸಿ ಅದರಲ್ಲಿ ಮಕ್ಕಳು ಕುಳಿತುಕೊಳ್ಳಲು ಬೇಕಾಗುವ ಡೆಸ್ಕ್ ಗಳು ಸೇರಿದಂತೆ ಮೂಲ ಸೌಕರ್ಯವನ್ನ ಕಲ್ಪಿಸಿಕೊಟ್ಟಿದ್ದಾರೆ.
ಇನ್ನೂ ಉದ್ಯಮಿ ಕಿರಣ್ ನಿರ್ಮಿಸಿಕೊಟ್ಟ ಸುಸಜ್ಜಿತ ಕಟ್ಟಡವನ್ನ ಗೌರಿಬಿದನೂರು ಶಾಸಕ ಕೆ.ಹೆಚ್.ಪುಟ್ಟಸ್ವಾಮಿ ಗೌಡ ಉದ್ಘಾಟಿಸಿದ್ರು.. ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಉದ್ಘಾಟನಾ ಕಾರ್ಯಕ್ರದಲ್ಲಿ ನಟ ಹಾಗೂ ಬಿಗ್ ಬಾಸ್ ಸ್ಪರ್ದಿ ಒಳ್ಳೆಯ ಹುಡುಗ ಪ್ರಥಮ್, ವಾಗ್ಮಿ ಆರಿಕಾ ಮಂಜುನಾಥ್, ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಾಮಾಜಿಕ ಕಾಯಕ ಮಾಡುವ ಅನು ಸೇರಿದಂತೆ ಸಾಮಾಜಿಕ ಸೇವಕ ಆಪ್ತ ಸಮಾಲೋಚಕ ಬಳ್ಳಾರಿ ಗುರುರಾಜ್ ಸೇರಿ ಹಲವು ಸಮಾನ ಮನಸ್ಕರು ಭಾಗಿಯಾಗಿದ್ರು, ಈ ವೇಳೆ ಕಿರಣ್ ಕುಮಾರ್ ಅವರ ಕಾರ್ಯವನ್ನು ಮುಕ್ತ ಕಂಠದಿAದ ಶ್ಲಾಘಿಸಿದರು.
ಈಗಿನ ಕಾಲದಲ್ಲಿ ತಾನು ಉದ್ದಾರೆ ಆದ್ರೆ ಸಾಕು ಯಾರು ಎಲ್ಲಾದ್ರೂ ಹೋಗಲಿ ಅನ್ನೋ ಜನ ಇರೋವಾಗ ತಾನು ದುಡಿದು ಸಂಪಾದಿಸಿದ ಹಣದಲ್ಲಿ ಸಂಕಷ್ಟದಲ್ಲಿರುವ ಸರ್ಕಾರಿ ಶಾಲೆ ಮಕ್ಕಳಿಗೆ ಒಳ್ಳೆಯದಾಗಲಿ ಅಂತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಿಕೊಟ್ಟಿರುವ ಉದ್ಯಮಿ ಕಿರಣ್ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು..ಕಿರಣ್ ಅವರ ಈ ಕಾರ್ಯ ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ ಅನ್ನೋದೆ ನಮ್ಮ ಆಶಯ.
ಸಿ ನ್ಯೂಸ್ ಬ್ಯೂರೋ. ಸಿ ಬಿ ಪುರ್