ಪ್ರಕೃತಿ ವಿಕೋಪಕ್ಕೆ ಕುಸಿದ ಮನೆ ದುರಸ್ತಿ ಮಾಡದ ಗ್ರಾಪಂ
1 min readಪ್ರಕೃತಿ ವಿಕೋಪಕ್ಕೆ ಕುಸಿದ ಮನೆ ದುರಸ್ತಿ ಮಾಡದ ಗ್ರಾಪಂ
ಐದು ವರ್ಷಗಳೇ ಕಳೆದರೂ ಮನೆ ಮಂಜೂರು ಮಾಡಿಲ್ಲ
ಜೊಪಡಿಯಲ್ಲಿಯೇ ವಾಸ, ಪಕ್ಕದ ಮನೆಯಲ್ಲಿ ಅಡುಗೆ ತಯಾರಿ
ಬಡವರಿಗೆ ಸೂರು ಕಲ್ಪಿಸೋ ಅನೇಕ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತಂದಿವೆ, ಆದರೆ ಅವು ಸಮರ್ಪಕವಾಗಿ ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಮಾತ್ರ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದಕ್ಕೆ ಈ ಸ್ಟೋರಿ ನಿದರ್ಶನ. ವಸತಿ ರಹಿತರಿಗೆ ವಸತಿ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದು, ಮನೆ ಬಿದ್ದು ನಾಲ್ಕು ವರ್ಷ ಕಳೆದರೂ ಮನೆ ನಿರ್ಮಿಸಿಕೊಡಲು ಅಧಿಕಾರಿಗಳು ಮುಂದಾಗಿಲ್ಲ, ಹಾಗಾದರೆ ವಸತಿ ರಹಿತನ ಸ್ಥಿತಿ ಅನ್ನೋದನ್ನ ನೋಡಿ.
ಆತ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವೊಂದರ ನಿವಾಸಿ. ಪಿತ್ರಾರ್ಜಿತವಾಗಿ ಬಂದಿರೋ ಒಂದು ಸಣ್ಣ ಮನೆ. ಅದೂ ಅತಿಯಾಗಿ ಸುರಿದ ಮಳೆಗೆ ನೆಲಕಟ್ಟಿದೆ. ಮನೆ ನಿರ್ಮಿಸಿಕೊಳ್ಳಲು ಶಕ್ತಿ ಇಲ್ಲದ ಆತ ಕಂಡ ಕಂಡವರ ಕಾಲಿಗೆ ಬಿದ್ದು ಮನೆ ಕೊಡಿಸಲು ಬೇಡಿಕೊಂಡ. ಚುನಾವಣೆಗಳ ವೇಳೆ ಈತ ಜೋಪಡಿಗೆ ಬಂದ ನಾಯಕರು ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು. ಆದರೆ ಮನೆ ಬಿದ್ದು ನಾಲ್ಕು ವರ್ಷ ಕಳೆದರೂ ಆತನಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು. ಆದರೆ ವರ್ಷಗಳು ಉರುಳಿದರೂ ಮನೆ ಮಾತ್ರ ಆಗಿಲ್ಲ.
ಈ ಘಟನೆ ನಡೆದಿರೋದು ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಪೈಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಲಿಗೇನಹಳ್ಳಿಯಲ್ಲಿ. ಗ್ರಾಮದ ನಿವಾಸಿ ವೆಂಕಟರಾಯಪ್ಪ ಎಂಬಪುವರ ಮನೆ ಅತಿಯಾದ ಮಳೆಗೆ ಉರುಳಿ ಬಿದ್ದಿದೆ. ಹಾಗೆ ಮನೆ ಬಿದ್ದು
ಬರೋಬ್ಬರಿ ಐದು ವರ್ಷ ಕಳೆದಿದ್ದು, ಐದು ವರ್ಷಗಳಿಂದ ಕಣ್ಣಿದ್ದು ಕುರುಡರಾಗಿರೋ ಗ್ರಾಮ ಪಂಚಾಯತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮನೆ ನಿರ್ಮಿಸಿ ಕೊಡದೆ ಈ ಕುಟುಂಬದವರನ್ನ ಬೀದಿಪಾಲು ಮಾಡಿರುವುದು ವಿಪರ್ಯಾಸ.
ಈ ಕುಟುಂಬದ ಸದಸ್ಯರು ಕುಸಿದ ಮನೆಯಲ್ಲೇ ಅಂಗೈಯಲ್ಲಿ ಜೀವ ಹಿಡಿದು ಬದುಕುತ್ತಿದ್ದಾರೆ. ಕುಸಿದ ಮನೆ ಕಂಡ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ಮನೆಯ ಜೊತೆಗೆ ಬೆಳಕೂ ಮಾಯವಾಗಿ ಕತ್ತಲಿನಲ್ಲಿಯೇ ಬದುಕುತ್ತಿದ್ದಾರೆ, ಪಕ್ಕದ ಮನೆಗೆ ಹೋಗಿ ಅಡುಗೆ ಮಾಡಿಕೊಳ್ಳೋ ಸ್ಥಿತಿ ಅವರಿಗೆ ಎದುರಾಗಿದ್ದು, ಆಶ್ರಯ ಯೋಜನೆಯಡಿ ಮನೆ ಮಂಜೂರು ಮಾಡಿಕೊಡುವಂತೆ ಗ್ರಾಮಪಂಚಾಯತಿನಲ್ಲಿ ಮನವಿ ಸಲ್ಲಿದಿದ್ದರೆ, ಪಂಚಾಯತಿಯವರ ನಿರ್ಲಕ್ಷ್ಯ ದಿಂದ ಅದು ಇಂದಿಗೂ ಈಡೇರಿಲ್ಲ. ಸಾಲ ಮಾಡಿ ಹೊಲದಲ್ಲಿ ಪಾಯ ಹಾಕಿ ಮನೆ ಮಂಜೂರಾತಿ ನೀಡಿ ಅಂತಾ ಪಂಚಾಯತಿ ಕದ ತಟ್ಟಿದ್ದು ಪ್ರಯೋಜನವಾಗಿಲ್ಲವಂತೆ 10 ಸಾವಿರ ಲಂಚ ಪಡೆದ ಅಧಿಕಾರಿಗಳು ಸಹಾಯ ಮಾಡಿಲ್ಲ ಅಂತಾರೆ ವೆಂಕಟರಾಯಪ್ಪ.
ಇಷ್ಟೆಲ್ಲಾ ಸಮಸ್ಯೆ ಹೊತ್ತು ಸ್ಥಳೀಯವಾಗಿ ಆಯ್ಕೆಯಾದ ಶಾಸಕ, ಪಂಚಾಯಿತಿ ಸದಸ್ಯರಿಂದ ಹಿಡಿದು ಎಲ್ಲಾ ಸರ್ಕಾರಿ ಕಚೇರಿಗಳ ಬಳಿ ಬಡ ಕುಟುಂಬ ಅಲೆದು-ಅಲೆದು ಸುಸ್ತಾಗಿದ್ದಾರೆ. ಯಾರೊಬ್ಬರು ಇವರ ಬೆನ್ನಿಗೆ ನಿಂತಿಲ್ಲ.ಇನ್ನಾದರೂ ಸಂಬ0ಧ ಪಟ್ಟವರು ಈ ಅನ್ಯಾಯ ಸರಿಪಡಿಸಲು ಮುಂದಾಗಬೇಕಿದೆ. ಈ ವೃದ್ಧ ದಂತಿಗಳಿಗೆ ನ್ಯಾಯ ದೊರಕಿಸಿಕೊಡಬೇಕಿದೆ. ಆದರೆ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಅದು ನೆರವೇರಲಿದೆಯಾ, ಗೊತ್ತಿಲ್ಲ.