ಪ್ರಶಾಂತ ನಗರದಲ್ಲಿ ಮೊದಲ ಬಾರಿಗೆ ಊರಜಾತ್ರೆ
1 min readಪ್ರಶಾಂತ ನಗರದಲ್ಲಿ ಮೊದಲ ಬಾರಿಗೆ ಊರಜಾತ್ರೆ
ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಪ್ರದೇಶವಾದ ಪ್ರಶಾಂತನಗರದಲ್ಲಿ ಮೊದಲ ಬಾರಿಗೆ ಊರಜಾತ್ರೆ
ಊರ ಜಾತ್ರೆಗೆ ಹರಿದು ಬಂದ ಜನಸಾಗರ
ಚಿಕ್ಕಬಳ್ಳಾಪುರ ನಗರ ಉಪವಿಭಾಗದಿಂದ ಜಿಲ್ಲಾ ಕೇಂದ್ರವಾಗಿ ಪರಿವರ್ತನೆಯಾಗುವುದಕ್ಕೂ ಮೊದಲೇ ಪ್ರತಿಷ್ಠಿತ ಬಡಾವಣೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಪ್ರಶಾಂತನಗರದಲ್ಲಿ ಮೊದಲಬಾರಿಗೆ ಊರ ಜಾತ್ರೆ ಮಾಡಲಾಗಿದೆ. ಸ್ಥಳೀಯ ದೇವತೆಗಳಾದ ಚೌಡಮ್ಮ ಗಂಗಮ್ಮ ಹಾಗು ಮುತ್ಯಾಲಮ್ಮ ಶಕ್ತಿ ದೇವತೆಗಳಿಗೆ ದೀಪಬೆಳಗಿಸಿ, ಉತ್ತಮ ಮಳೆಯಾಗಿ ಜನರು ಸಮೃದ್ಧಿಯಿಂದ ಜೀವಿಸಲಿ ಎಂದು ಪ್ರಾರ್ಥಿಸಲಾಯಿತು.

ಜಿಲ್ಲಾ ಕೇಂದ್ರವಾಗಿ ಚಿಕ್ಕಬಳ್ಳಾಪುರ ರೂಪಗೊಂಡ ಮೇಲೆ ನಗರ ಬೃಹದಾಕಾರವಾಗಿ ಬೆಳೆಯುತ್ತಿದೆ. ಅದಕ್ಕೂ ಮೊದಲೆ ಪ್ರತಿಷ್ಠಿತ ಬಡಾವಣೆ ಎಂದೆ ಖ್ಯಾತಿ ಪಡೆದಿದ್ದ ಪ್ರಶಾಂತ ನಗರ ಚಿಕ್ಕಬಳ್ಳಾಪುರ ದೊಡ್ಡ ಜನ ನಿಬಿಡ ನಗರವಾಗಿ ಹೊರಹೊಮ್ಮಿತ್ತು. ಅಂದಿನಿoದಲೂ ಇಡೀ ನಗರ ಒಟ್ಟಾಗಿ ಊರ ಜಾತ್ರೆ ಹಬ್ಬ ಮಾಡಿರಲಿಲ್ಲ. ಈ ವರ್ಷ ಮೊದಲಬಾರಿಗೆ ಊರ ಜಾತ್ರೆ ಮಾಡಿ ಗ್ರಾಮದೇವತೆಗಳಾದ ಚೌಡಮ್ಮ, ಗಂಗಮ್ಮ ಮತ್ತು ಮುತ್ಯಾಲಮ್ಮ ದೇವರ ಮೆರವಣಿಗೆ ಮಾಡಿ, ಎಲ್ಲ ದೇವರಿಗೆ ತಂಬಿಟ್ಟು ದೀಪ ಬೆಳೆಗಿದರು.
ಆಕರ್ಷಕ ದೀಪ ಹೊತ್ತು ಸಾಗಿದ ಸುಮಂಗಳಿಯರು ತಮ್ಮ ಮನೆಗಳಿಂದ ತಂದಿದ್ದ ದೀಪಗಳನ್ನ ದೇವರಿಗೆ ಸಮರ್ಪಿಸಿದರು. ಪ್ರಶಾಂತ ನಗರದ ನಗರಸಭಾ ಸದಸ್ಯ ಗಜೇಂದ್ರ ಮಾತನಾಡಿ, ಇದೆ ಮೊದಲಬಾರಿಗೆ ಪ್ರಶಾಂತ ನಗರದಲ್ಲಿ ಊರ ಜಾತ್ರೆ ಮಾಡುತಿದ್ದು, ದೇವರು ಜನರಿಗೆ ಒಳ್ಳೆಯದು ಮಾಡಿ, ಈ ಜಾತ್ರಾ ಮಹೋತ್ಸವ ಪ್ರತಿವರ್ಷ ನಡೆಯುವಂತೆ ನೋಡಿಕೊಳ್ಳಲಿ ಮತ್ತು ಪ್ರತಿವರ್ಷ ಜಾತ್ರೆ ಮಾಡುವ ಅವಕಾಶವನ್ನು ದೇವರು ಕಲ್ಪಿಸಲಿ, ಈ ಬಾರಿ ಜಾತ್ರೆಗೆ ಸಹಕಾರ ನೀಡಿದ ನಗರದ ಹಿರಿಯರು ಕಿರಿಯರಿಗೂ ಅಭಿನಂದನೆ ಸಸಲ್ಲಿಸುವುದಾಗಿ ಹೇಳಿದರು.