ಚಿಕ್ಕಬಳ್ಳಾಪುರ ಕೆಳಗಿನ ತೋಟದ ಬಳಿ ಕಾರು ಭೀಕರ ಅಪಘಾತ,ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು.
1 min readಚಿಕ್ಕಬಳ್ಳಾಪುರದ ಬಳಿ ಕಾರು ಭೀಕರ ಅಪಘಾತ.
ರಾಷ್ರೀಯ ಹೆದ್ದಾರಿ 7ರಲ್ಲಿ ಭೀಕರ ಅಪಘಾತ ನಡೆದಿದ್ದು, ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಬೈಪಾಸ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಮೃತರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಬೆಂಗಳೂರು ಕಡೆಯಿಂದ ಅತಿ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬ್ರಿಡ್ಜ್ ಕೆಳಗೆ ಉರುಳಿಬಿದ್ದಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರದ ಬೈಪಾಸ್ ರಸ್ತೆಯಿಂದ ನಗರದ ಕೆಳಗಿನ ತೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ಅಂಜನೇಯ ಸ್ವಾಮಿ ದೇವಾಲಯದ ಎದುರು ಘಟನೆ ನಡೆದಿದೆ.
ಅತಿ ವೇಗದಿಂದ ಬಂದು ರಸ್ತೆ ಬದಿಯ ನೀರಿಗೆ ಬಿದ್ದಿರೋ ಸ್ವಿಫ್ಟ್ ಕಾರು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು.
ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಗುಂಡಿಯೊಳಗೆ ಸಂಪೂರ್ಣ ಮುಳುಗಿ ಹೋಗಿರೋ ಸ್ವಿಫ್ಟ್ ಕಾರು. ಕಾರಿನಲ್ಲೇ ಜಲಸಮಾಧಿಯಾಗಿರುವ ನಾಲ್ವರು ಯುವಕರು.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಭೇಟಿ ನೀಡಿ, ಗುಂಡಿಯಿಂದ ಕಾರು ಹೊರ ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಬೇಕಿದೆ.
ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು.
ಚಿಕ್ಕಬಳ್ಳಾಪುರದ ಬೈಪಾಸ್ ಕೆಳಗಿನ ತೋಟದ ಬಳಿಯ ಅಂಜನೇಯ ಸ್ವಾಮಿ ದೇವಾಲಯದ ಎದುರು ಘಟನೆ.
ಅತಿ ವೇಗದಿಂದ ರಸ್ತೆ ಬದಿಯ ನೀರಿಗೆ ಬಿದ್ದಿರೋ ಸ್ವಿಫ್ಟ್ ಕಾರು
ಸ್ವಿಪ್ಟ್ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು.
ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಗುಂಡಿಯೊಳಗೆ ಸಂಪೂರ್ಣ ಮುಳುಗಿ ಹೋಗಿರೋ ಸ್ವಿಫ್ಟ್ ಕಾರು..
ಕಾರಿನಲ್ಲೇ ಜಲಸಮಾಧಿಯಾಗಿರೊ ನಾಲ್ವರು ಯುವಕರು.
ಶನಿವಾರ ರಾತ್ರಿ ಕಾರು ಬಿದ್ದು ಮೃತಪಟ್ಟ ನಾಲ್ಕು ಮಂದಿಯಲ್ಲಿ ಮೂವರು ಚಿಕ್ಕಬಳ್ಳಾಪುರ ಮತ್ತು ಒಬ್ಬರು ಚಿಂತಾಮಣಿಯವರಾಗಿದ್ದಾರೆ.
ವಸಂತ್, ಪವನ್, ಠ್ಯಾಗೂರ್ ಚಿಕ್ಕಬಳ್ಳಾಪುರದವರಾಗಿದ್ದು ಆರ್ಯನ್ ಚಿಂತಾಮಣಿಯವರಾಗಿದ್ದಾರೆ.
ನಾಲ್ಕು ಮಂದಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 44ರಿಂದ ನಗರದ 22ನೇ ವಾರ್ಡ್ ನ ಎಚ್.ಎಸ್.ಗಾರ್ಡನ್ ಗೆ ತಿರುವು ಪಡೆಯಬಹುದು. ಹೆದ್ದಾರಿಯಿಂದ ಎಚ್.ಎಸ್.ಗಾರ್ಡನ್ ರಸ್ತೆಗೆ ತಿರುವು ಪಡೆಯುವಾಗ ನಿಯಂತ್ರಣ ತಪ್ಪಿ ಕೆರೆಗೆ ಕಾರು ಉರುಳಿದೆ.
ಅತಿವೇಗದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ ಎಂದು ಚಿಕ್ಕಬಳ್ಳಾಪುರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಶವಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.