ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ-ಲಾರಿ ಹಾಗೂ ಆಟೋ ನಡುವೆ ಡಿಕ್ಕಿ. ಗೌರಿಬಿದನೂರು
1 min readಬೆಳ್ಳಂಬೆಳಿಗ್ಗೆ ಆಟೋ ಹಾಗೂ ಕಂಬಿ ಸಾಗಿಸುವ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು ೧೧ ಮಂದಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ್ ನಾಗಪ್ಪ ಬ್ಲಾಕ್ ಸರ್ಕಲ್‌ನಲ್ಲಿ ನಡೆದಿದೆ. ದೊಡ್ಡಕುರುಗೋಡು ಗ್ರಾಮದಿಂದ ಗೌರಿಬಿದನೂರು ನಗರದ ಮುನಿಸಿಪಲ್ ಕಾಲೇಜಿಗೆ ಬರ್ತಿದ್ದ ವಿದ್ಯಾರ್ಥಿಗಳು ಇದ್ದ ಆಟೋ ಲಾರಿಗೆ ಡಿಕ್ಕಿಯಾಗಿದೆ. ಆಟೋ ಚಾಲಕ ಹಾಗೂ ೧೦ ಮಂದಿ ವಿದ್ಯಾರ್ಥಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಕೂಡಲೇ ಗೌರಿಬಿದನೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು ಆಟೋ ಚಾಲಕ ಹಾಗೂ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗಾಯಾಳುಗಳ ವಿವರ
1) ವನುಜಾ ಬಿನ್ ಮುನಿಕೃಷ್ಣಪ್ಪ, 18 ವರ್ಷ, ದ್ವಿತೀಯ ಪಿ.ಯು.ಸಿ, ವಾಸ ಗೌಡಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು.
2) ಮೇಘನ ಬಿನ್ ನಾಗರಾಜಪ್ಪ, 16 ವರ್ಷ,ಪ್ರಥಮ ಪಿ.ಯು.ಸಿ. ವಾಸ ದೊಡ್ಡಕುರುಗೋಡು ಗ್ರಾಮ, ಗೌರಿಬಿದನೂರು ತಾ/,
3) ಲೋಕೇಶ್, ಸು 20 ವರ್ಷ, ಚಿಕ್ಕಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು.
4) ಶ್ರೀನಿವಾಸ, ಆಟೋ ಡ್ರೈವರ್, ವಾಸ ಚಿಕ್ಕಕುರುಗೋಡು.
5) ತಸೀನಾ ಬಿನ್ ಬಾಬಾಜಾನ್, 16 ವರ್ಷ, ಪ್ರಥಮ ಪಿ.ಯು.ಸಿ, ಕಲ್ಲೂಡಿ ಗ್ರಾಮ,
6) ತನುಜಾ ಬಿನ್ ರಾಮಕೃಷ್ಣಪ್ಪ, 17 ವರ್ಷ, ದ್ವಿತೀಯ ಪಿ.ಯು.ಸಿ, ದೊಡ್ಡಕುರುಗೋಡು ಗ್ರಾಮ,
7) ದೀಪಿಕಾ ಬಿನ್ ಗಂಗಾಧರಪ್ಪ, 17 ವರ್ಷ, ಪ್ರಥಮ ಪಿ.ಯು.ಸಿ ದೊಡ್ಡಕುರುಗೋಡು,
8) ಪವಿತ್ರ ಬಿನ್ ಗಂಗಾಧರಫ್ಪ, ಪ್ರಥಮ ಪಿ.ಯುಸಿ, 17 ವರ್ಷ, ದೊಡ್ಡಕುರುಗೋಡು,
9) ತ್ರಿವೇಣಿ ಬಿನ್ ಮಂಜುನಾಥ, 17 ವರ್ಷ, ದ್ವಿತೀಯ ಪಿ.ಯು.ಸಿ, ದೊಡ್ಡಕುರುಗೋಡು,
10) ವೆನ್ನಲ ಬಿನ್ ನಾಗರಾಜು, 17 ವರ್ಷ, ದ್ವಿತೀಯ ಪಿ.ಯು.ಸಿ ದೊಡ್ಡಕುರುಗೋಡು.
11) ಸಹನಾ ಬಿನ್ ನಾಗರಾಜು, 17 ವರ್ಷ, ದ್ವಿತೀಯ ಪಿ.ಯು.ಸಿ, ದೊಡ್ಡಕುರುಗೋಡು,
12) ರೋಷಿಣಿ ಬಿನ್ ಹುಸೇನ್, 16 ವರ್ಷ, ಪ್ರಥಮ ಪಿ.ಯು.ಸಿ ಕದಿರೇನಹಳ್ಳಿ ಗ್ರಾಮ,
13) ನಳಿನಿ ಬಿನ್ ನರಸಿಂಹರೆಡ್ಡಿ, 17 ವರ್ಷ, ದ್ವಿತೀಯ ಪಿ.ಯು.ಸಿ, ಗೌಡಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು.