ಬಡ ಮಕ್ಕಳ ವಿಮಾನಯಾನದ ಕನಸು ನನಸಾಗಿಸಿದ ಶಿಕ್ಷಕ
1 min readಬಡ ಮಕ್ಕಳ ವಿಮಾನಯಾನದ ಕನಸು ನನಸಾಗಿಸಿದ ಶಿಕ್ಷಕ
ಶಾಲಾ ಮಕ್ಕಳನ್ನು ಉಚಿತವಾಗಿ ವಿಮಾನದಲ್ಲಿ ಕರೆದೊಯ್ದ ಶಿಕ್ಷಕ
ತನ್ನ ಸಂಬಳದಲ್ಲಿ 51 ಮಕ್ಕಳ ವಿಮಾನಯಾನದ ಭತ್ಯೆ ಭರಿಸಿದ ಶಿಕ್ಷಕ
ವಿಮಾನದಲ್ಲಿ ಹಾರಾಡುವ ಕನಸು ಕಂಡಿದ್ದ ಶಾಲಾ ಮಕ್ಕಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಹಾರಾಷ್ಟ ಪ್ರವಾಸಕ್ಕೆ ವಿಮಾನದಲ್ಲಿ ಕರೆದೊಯ್ಯುವ ಮೂಲಕ ಗ್ರಾಮೀಣ ಬಡ ಮಕ್ಕಳ ಕನಸನ್ನು ಶಿಕ್ಷಕರೊಬ್ಬರು ನನಸಾಗಿಸಿದ್ದಾರೆ. ಈ ಮೂಲಕ ಮಕ್ಕಳ ಪ್ರವಾಸವನ್ನು ಸ್ಮರಣಿಯವಾಗಿಸಿದ್ದಾರೆ.
ಹಳ್ಳಿಯೊಂದರ ಬಡ ಶಾಲಾ ಮಕ್ಕಳನ್ನು ಮುಖ್ಯ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಪ್ರವಾಸ ಕರೆದೊಯ್ದಿದ್ದಾರೆ. ಅದು ಬಸ್‌ನಲ್ಲಿ ಅಲ್ಲ, ರೈಲಿನಲ್ಲಿಯೂ ಅಲ್ಲ, ಬಡವರಿಗೆ, ಬಹುತೇಕ ಮಧ್ಯಮ ವರ್ಗದವರಿಗೆ ಕೈಗೆಟುಕದ, ತೀರಾ ದುಬಾರಿಯಾದ ವಿಮಾನದಲ್ಲಿ. ಒಟ್ಟು ಐದು ದಿನಗಳ ಶಾಲೆಯ ಶೈಕ್ಷಣಿಕ ಪ್ರವಾಸವನ್ನು ಅವಿಸ್ಮರಣೀಯಗೊಳಿಸಿ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ಪ್ರವಾಸವನ್ನಾಗಿಸಿದ್ದಾರೆ.
ಹರಳೂರು ಗ್ರಾಮದ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ವೀರಭದ್ರೇಶ್ವರ ಗ್ರಾಮಾಂತರ ಅನುದಾನಿತ ಶಾಲೆಯ ಮುಖ್ಯಶಿಕ್ಷಕ ರಾಜಣ್ಣ, ತಮ್ಮ ಶಾಲೆಯ ಮಕ್ಕಳಿಗೆ ಉಚಿತ ವಿಮಾನ ಪ್ರಯಾಣ ಮಾಡಿಸಿದ ಮಾದರಿ ಶಿಕ್ಷಕ. ಅವರ ಈ ಅಮೋಘ ಸೇವೆಗೆ ಗ್ರಾಮೀಣ ಶಾಲಾ ಮಕ್ಕಳು ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾನು ಕೆಲಸ ನಿರ್ವಹಿಸುವ ಶಾಲೆಯ 57 ಮಕ್ಕಳನ್ನು ಮತ್ತು7 ಶಾಲಾ ಸಿಬ್ಬಂದಿ ಸೇರಿ ೫೮ ಮಂದಿಯನ್ನು ಶಿಕ್ಷಕ ರಾಜಣ್ಣ ತಮ್ಮ ಸ್ವಂತ ಹಣದಲ್ಲಿ ವಿಮಾನ ಪ್ರಯಾಣ ಮಾಡಿಸಿದ್ದಾರೆ. ಈ ಮೂಲಕ ಅನೇಕ ಶಿಕ್ಷಕರಿಗೆ ಮಾದರಿ ಶಿಕ್ಷಕರೆನಿಸಿದ್ದಾರೆ. ಈ ಐದು ದಿನಗಳ ಪ್ರವಾಸದಲ್ಲಿ ಶಾಲೆಯ ೫೧ಮಕ್ಕಳು, ಐವರು ಶಿಕ್ಷಕರು, ಇಬ್ಬರು ಅಡುಗೆ ಸಿಬ್ಬಂದಿ ಸೇರಿ ಒಟ್ಟು 58 ಮಂದಿಗೆ ಶಿಕ್ಷಕ ರಾಜಣ್ಣ ಅವರು ಬುಧವಾರ ಮೊದಲ ಬಾರಿಗೆ ಮಹಾರಾಷ್ಟçದ ಪುಣೆಗೆ ವಿಮಾನದಲ್ಲಿ ಪ್ರವಾಸಕ್ಕಾಗಿ ಕರೆದೊಯ್ದಿದ್ದಾರೆ. ಪ್ರಯಾಣದ ವೆಚ್ಚ ಒಬ್ಬರಿಗೆ 4,675 ರು.ಗಳಂತೆ ಒಟ್ಟು 2,71,150 ರು.ಗಳ ವೆಚ್ಚ ಮಾಡಿದ್ದಾರೆ.
ತಾವು ಚಿಕ್ಕಂದಿನಲ್ಲಿ ಆಗಸದಲ್ಲಿ ಹಾರುವ ವಿಮಾನ ಕಂಡ ಕನಸನ್ನು ಮಕ್ಕಳಿಗೆ ನನಸು ಮಾಡಲು, ತಮ್ಮ ಸಂಬಳದ ಉಳಿತಾಯದ ಹಣದಲ್ಲಿ ಕನ್ನಡ ಮಾಧ್ಯಮದ 8, 9, 10 ನೇ ತರಗತಿಯ ಮಕ್ಕಳನ್ನು ಸದಾ ಸ್ಮರಣೆಯಲ್ಲಿ ಉಳಿಯುವ ವಿಮಾನ ಪ್ರವಾಸಕ್ಕೆ ಕರೆದೊಯ್ದು ಮಕ್ಕಳ ಪಾಲಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದಾರೆ.