ಶಾಲೆಯಲ್ಲಿ ತರ್ಲೆ ಮಾಡಿದ ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿ
1 min readಶಾಲೆಯಲ್ಲಿ ತರ್ಲೆ ಮಾಡಿದ ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿ
ಬಾಸುಂಡೆ ಬರುವಂತೆ ಬಾರಿಸಿದ ಜಿಲ್ಲಾ ಉತ್ತಮ ಶಿಕ್ಷಕಿ
ಪೋಷಕರು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಗೆ ಬಹಿಷ್ಕಾರ
ಶಾಲೆಯಲ್ಲಿ ತರ್ಲೆ ಮಾಡಿದ ಎಂಬ ಕಾರಣಕ್ಕೆ ಮೈಮೇಲೆ ಬಾಸುಂಡೆ ಬರುವಂತೆ ಬಾರಿಸಿರುವ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪೆಡದ ಶಿಕ್ಷಕಿ, ಮಗುವಿಗೆ ಹೊಡೆದಿರುವುದನ್ನು ಪೋಷಕರು ಪ್ರಶ್ನಿಸಿದರು ಎಂಬ ಕಾರಣಕ್ಕೆ ತರಗತಿಯಲ್ಲಿ ವಿದ್ಯಾರ್ಥಿಗೆ ಬಹಿಷ್ಕಾರ ಹಾಕಿ ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ತರಲೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಮೈಮೇಲೆ ಬಾಸುಂಡೆ ಬರುವ ರೀತಿಯಲ್ಲಿ ಶಿಕ್ಷಕಿ ಹೊಡೆದಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಗೋಪಸಂದ್ರ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಚಿಂತಾಮಣಿ ತಾಲ್ಲೂಕಿನ ಹಂದಿಜೋಗಿಗಡ್ಡ ಗ್ರಾಮದ ಗುರುಪ್ರಸಾದ್ ಎಂಬ 7ನೇ ತರಗತಿ ವಿದ್ಯಾರ್ಥಿಗೆ ಗೋಪಸಂದ್ರ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿ ಪ್ರಮೀಳಾ ಎಂಬುವರು ಮನಬಂದ0ತೆ ಬಾರಿಸಿದ್ದು, ಶಿಕ್ಷಕಿಯನ್ನು ಅಮಾನತ್ತು ಮಾಡುವಂತೆ ವಿದ್ಯಾರ್ಥಿಯ ಪೋಷಕರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿ ಗುರು ಪ್ರಸಾದ್ ಪುಸ್ತಕದಲ್ಲಿನ ಎರಡು ಸಾಲು ಪಾಠ ಓದಿಲ್ಲ ಎಂಬ ಕಾರಣಕ್ಕೆ ಸೀಬೆ ಗಿಡದ ರೆಂಬೆ ಕಿತ್ತು ತಂದು ಮನಬಂದAತೆ ಮೇಡಂ ಬಾರಿಸಿದ್ದಾರೆ ಎಂದು ವಿದ್ಯಾರ್ಥಿ ಗುರುಪ್ರಸಾದ್ ಅಳಲು ತೋಡಿಕೊಂಡಿದ್ದೇನೆ. ಅಲ್ಲದೆ, ಪೋಷಕರು ಹೋಗಿ ಶಿಕ್ಷಕಿಯನ್ನು ಪ್ರಶ್ನಿಸಿದ ಕಾರಣಕ್ಕೆ ಶಾಲೆಯಲ್ಲಿರುವ ಇತರೆ ಮಕ್ಕಳು ಗುರುಪ್ರಸಾದ್‌ನೊಂದಿಗೆ ಮಾತನಾಡದಂತೆ, ಬೆರೆಯದಂತೆ ಮತ್ತು ತರಗತಿಯಲ್ಲಿ ಒಬ್ಬಂಟಿಯಾಗಿ ಕೂರುವಂತೆ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಇದರಿಂದ ಏಟು ತಿಂದ ವಿದ್ಯಾರ್ಥಿ ಶಾಲೆಯಲ್ಲಿ ಪ್ರಮೀಳಾ ಮೇಡಂ ಇದ್ದರೆ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿರುವುದಾಗಿ ಆರೋಪಿಸಲಾಗಿದೆ.
ಘಟನೆ ಕುರಿತು ಮಾತನಾಡಿರುವ ಶಿಕ್ಷಕಿ ಪ್ರಮೀಳಾ, ವಿದ್ಯಾರ್ಥಿ ಗುರುಪ್ರಸಾದ್ ಶಾಲೆಯ ಕೆಲ ವಿದ್ಯಾರ್ಥಿಗಳಮೇಲೆ ದಬ್ಬಾಳಿಕೆ ಮಾಡಿ ಶೌಚಾಲಯದ ಒಳಗೆ ಹಾಕಿ ಕೆಲ ವಿದ್ಯಾರ್ಥಿಗಳನ್ನು ಹೊಡೆಯುತ್ತಿರುವುದಾಗಿ ಪೊಷಕರು ತಿಳಿಸಿದ್ದಾರೆ, ಈ ಸಂಬ0ಧ ತಮಗೆ ದೂರು ನೀಡಿದ್ದು, ಶಾಲೆಯ ಬಳಿ ಗಲಾಟೆ ಮಾಡುವುದಾಗಿ ಎಚ್ಚರಿಸಿದ್ದರು. ಇದರಿಂದ ವಿದ್ಯಾರ್ಥಿಗಳನ್ನು ಹೊಡೆಯುತ್ತಿದ್ದ ವಿಚಾರ ಗುರುಪ್ರಸಾದ್ ಪೋಷಕರಿಗೆ ತಿಳಿಸಿ, ಶಾಲೆಗೆ ಬರುವಂತೆ ಹೇಳಿದಾಗ ಹೊಡೆದು ಬುದ್ದಿವಾದ ಹೇಳುವಂತೆ ತಿಳಿಸಿದ್ದರು, ಇದರಿಂದ ತಾವು ವಿದ್ಯಾರ್ಥಿಯನ್ನು ಹೊಡೆದಿರುವುದಾಗಿ ಶಿಕ್ಷಕಿ ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೆ ವಿದ್ಯಾರ್ಥಿಯನ್ನು ಮನಬಂದ0ತೆ ಥಳಿಸಿದ ಶಿಕ್ಷಕಿ ವಿದ್ಯಾರ್ಥಿ ಮನೆಗೆ ಹೋಗಿ ಪೋಷಕರಿಗೆ ಕ್ಷಮೆಯಾಚಿಸಿ ಬಂದಿರುವುದಾಗಿ ತಿಳಿದು ಬಂದಿದೆ.