ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಯಶಸ್ವಿಯಾದ ಚಿಕ್ಕಬಳ್ಳಾಪುರ ನಗರಸಭೆ ಬಜೆಟ್

1 min read

ಸದಸ್ಯರ ಗೈರಿನಿಂದ ಮುಂದೂಡಲಾಗಿದ್ದ ಚಿಕ್ಕಬಳ್ಳಾಪುರ ನಗರಸಭೆ ಬಜೆಟ್ ಪೂರ್ವಭಾವಿಸಭೆ ಇಂದು ಯಶಸ್ವಿಯಾಗಿ ನಡೆಯಿತು. ಅಲ್ಲದೆ, ಕಳೆದ 10 ತಿಂಗಳಿನ ನಂತರ ಇದೇ ಮೊದಲ ಬಾರಿಗೆ ಸಭೆ ನಡೆದ ಕಾರಣ ಸದಸ್ಯರಿಂದ ಸಮಸ್ಯೆಗಳ ಮಹಾಪೂರವೇ ಹರಿದು ಬಂದಿದ್ದು, ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ನೀಡಿದರು.

ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳ ಕ್ರಮ ವಿರೋಧಿಸಿ ಜನವರಿ 29 ರಂದು ಕರೆದಿದ್ದ ಸಭೆಗೆ ಬಹಿಷ್ಕಾರ ಹಾಕಿದ್ದ ನಗರಸಭಾ ಸದಸ್ಯರು ಇಂದಿನ ಸಭೆಗೆ ಪಕ್ಷಾತೀತವಾಗಿ ಆಗಮಿಸುವ ಜೊತೆಗೆ ಅಧಿಕಾರಿಗಳ ತಪ್ಪುಗಳನ್ನು ಜಿಲ್ಲಾಧಿಕಾರಿಗಳ ಮುಂದೆ ತೆರೆದಿಡುವ ಕೆಲಸ ಮಾಡಿದರು. ವಾರ್ಡುಗಳಲ್ಲಿ ಚರಂಡಿ, ರಸ್ತೆ, ಯುಜಿಡಿ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದ ಬಗ್ಗೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲಾ, ಕಾಮಗಾರಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಗುತ್ತಿಗೆದಾರರಿಗೆ ಹಣ ಮಂಜೂರು ಮಾಡಿದ ಕಾರಣ ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರು ನಾಪತ್ತೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಅಧಿಕಾರಿಗಳ ಸೋಗಲಾಡಿ ತನವನ್ನು ಬಹಿರಂಗ ಮಾಡುವ ಕೆಲಸ ಮಾಡಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಬಜೆಟ್ ಪೂರ್ವಭಾವಿಸಬೆಯಲ್ಲಿ ಸದಸ್ಯರು ನಗರೋತ್ಥಾನ ಅನುದಾನ ನಗರದ ಹೊರಗೆ ನೀಡಿರುವ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕ್ರಮಕ್ಕೆ ಒಗ್ಗಟ್ಟಿನ ವಿರೋಧ ವ್ಯಕ್ತವಾಯಿತು. 5ನೇ ವಾರ್ಡಿನ ಸದಸ್ಯ ನಾಗರಾಜ್ ಜೆ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಬಡವರು ಮೃತಪಟ್ಟಾಗಿ ಅವರನ್ನು ಮುಕ್ತಿಧಾಮದ ವರೆಗೂ ಸಾಗಿಸಲು ವಾಹನವಿಲ್ಲದೆ ಸಮಸ್ಯೆ ಆಗುತ್ತಿದೆ. ಈಗಾಗಲೇ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯಲ್ಲಿ ಶಾಂತಿಧಾಮದ ವಾಹನ ಇದ್ದು, ಜಿಲ್ಲಾ ಕೇಂದ್ರದ ನಗರಸಭೆಯಲ್ಲಿಯೂ ಅಂತಹ ಕಪ್ಪು ವಾಹನ ಖರೀದಿಸಬೇಕು ಎಂದು ಕೋರಿದರು.
ಅಲ್ಲದೆ ನಗರಸಭೆ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮೃತಪಟ್ಟಾಗ, ಅಂತ್ಯ ಸಂಸ್ಕಾರಕ್ಕೂ ಪರದಾಡುವ ಸ್ಥಿತಿ ಇದ್ದು, ಅಂತಹವರಿಗೆ ನಗರಸಭೆಯಿಂದ ಕನಿಷ್ಠ 5 ಸಾವಿರವಾದರೂ ನೀಡಬೇಕೆಂದು ಮನವಿ ಮಾಡಿದರು. ಜೊತೆಗೆ ನಗರಸಭೆಯಿಂದಲೇ ವಿತರಿಸಿರುವ ಐಡಿಎಎಸ್‌ಎಂಟಿ ಬಡಾವಣೆ ನಿವೇಶನಗಳಿಗೆ ಖಾತೆ ನೀಡುವಂತೆ ಮನವಿ ಮಾಡಿದರು. ಅಲ್ಲದೆ ಅಗಲಗುರ್ಕಿ, ತಿಪ್ಪೇನಹಳ್ಳಿ, ಮುಸ್ಟೂರು ಸೇರಿದಂತೆ ಇತರೆ ಗ್ರಾಮ ಪಂಚಾಯಿತಿಗಳಿ0ದ ನಗರಸಭೆ ಸೇರಿದ ಆಸ್ತಿಗಳಿಗೆ ಖಾತೆ ನೀಡುವಂತೆಯೂ ಅವರು ಕೋರಿದರು.
18ನೇ ವಾರ್ಡಿನ ಸದಸ್ಯ ಎ.ಬಿ. ಮಂಜುನಾಥ್ ಮಾತನಾಡಿ, ನಗರೋತ್ಥಾನ ಯೋಜನೆಯ ಅನುದಾನ ನಗರದ ಅಭಿವೃದ್ಧಿಗೆ ವೆಚ್ಚ ಮಾಡದೆ ನಗರದ ಹೊರ ಭಾಗಕ್ಕೆ ಮೀಸಲಿಟ್ಟು, ನಗರದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದರು. ಅಲ್ಲದೆ ನಗರ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಐದಾರು ಅಂತಸ್ತು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಚರಂಡಿಗಳನ್ನು ಒತ್ತುವರಿ ಮಾಡಲಾಗುತ್ತಿದೆ. ಕಾಮಗಾರಿ ಮಾಡದಿದ್ದರೂ ಅಧಿಕಾರಿಗಳ ಗುತ್ತಿಗೆದಾರನಿಗೆ ಹಣ ಮಂಜೂರು ಮಾಡಿದ್ದಾರೆ ಎಂದು ದೂರುಗಳ ಸರಮಾಲೆಯನ್ನೇ ಹೇಳಿದರು. ೧೮ನೇ ವಾರ್ಡಿನ ರಸ್ತೆ ಕಾಮಗಾರಿ  85 ಲಕ್ಷ ವೆಚ್ಚದಲ್ಲಿ ಮಾಡಲು ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವುದಕ್ಕೂ ಮೊದಲೇ44 ಲಕ್ಷ ನೀಡಿರುವ ಕಾರಣ ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ ಎಂದು ಕಿಡಿ ಕಾರಿದರು.
೬ನೇ ವಾರ್ಡಡಿನ ಸದಸ್ಯೆ ರುಕ್ಮಿಣಿ ಮುನಿರಾಜು ಮಾತನಾಡಿ, ನಗರದಲ್ಲಿ ಗುಣಮಟ್ಟದ ರಸ್ತೆಗಳೇ ಇಲ್ಲ, ಯುಜಿಡಿ ನೀರು ರಸ್ತೆಗಳಿಗೆ ಹರಿದು ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟು ಬಾರಿ ದೂರು ನೀಡಿದರೂ ಉಪಯೋಗವಾಗಿಲ್ಲ ಎಂದು ಅಳವತ್ತುಕೊಂಡರು. ಕೊಳವೆ ಬಾವಿಗೆ ಕೇಸಿಂಗ್ ಸರಿಯಾಗಿ ಹಾಕದ ಕಾರಣ ನೀರು ತ್ಯಾಜ್ಯದಿಂದ ಕೂಡಿದ್ದು, ನಾಗರಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳಿಗೆ ದೂರು ನೀಡಿದರೂ ಉಪಯೋಗವಾಗುತ್ತಿಲ್ಲ ಎಂದು ಕಿಡಿ ಕಾರಿದರು.
೪ನೇ ವಾರ್ಡಿನ ಸದಸ್ಯ ಗಜೇಂದ್ರ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ನೂರಾರು ಮಣ್ಣಿನ ರಸ್ತೆಗಳಿದ್ದು, ಇನ್ನೂ ಸಿಸಿ ರಸ್ತೆಗಳಿರಲಿ, ಡಾಂಬರು ಕೂಡಾ ಕಂಡಿಲ್ಲ. ಇಂತಹ ಸ್ಥಿತಿಯಲ್ಲಿ ನಗರೋತ್ಥಾನ ಯೋಜನೆಯಡಿ ಬಂದಿರುವ ಹಣ ನಗರಕ್ಕೆ ನೀಡದೆ ಹೊರ ಭಾಗಕ್ಕೆ ಹಾಕಿ, ನಗರದ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂದರು. ಜೊತೆಗೆ ಕಳೆದ ಎರಡು ವರ್ಷಗಳ ಹಿಂದೆಯೇ ವಿದ್ಯುತ್ ಚಿತಾಗಾರ ನಿರ್ಮಾಣವಾಗಿದ್ದರೂ ಇನ್ನೂ ಯಾಕೆ ಅದನ್ನು ಚಾಲನೆ ಮಾಡಿಲ್ಲ, ವರ್ಷಗಳೇ ಕಳೆದರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
೯ನೇ ವಾರ್ಡಿನ ಸದಸ್ಯ ಮಟಮಪ್ಪ ಮಾತನಾಡಿ, ಕಳೆದ ೩೨ ತಿಂಗಳಿAದ ನಗರಸಭೆಗೆ ಅನುದಾನವೇ ಬಂದಿಲ್ಲ. 1 ವರ್ಷ 10 ತಿಂಗಳ ಹಿಂದಿನ ಅನುದಾನವೇ ನಗರದಲ್ಲಿ ಇನ್ನೂ ಕಾಮಗಾರಿಗಳು ನಡೆಯುತ್ತಿವೆ. ನಗರೋತ್ಥಾನ ಯೋಜನೆಯ ಅನುದಾನ ೩೪ ಕೋಟಿ ಬಂದು ೨ ವರ್ಷವಾದ್ದರೂ ಅದನ್ನು ಬಳಸಿಲ್ಲ, ಈ ರೀತಿಯಾದರೆ ನಗರ ಬೆಳವಣಿಗೆ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಕ್ರಮಾನುಸಾರ ನಗರೋತ್ಥಾನ ಹಣ ಬಳಕೆಯಾಗುತ್ತಿಲ್ಲ, ನಗರದಲ್ಲಿ ಅವೈe್ಞÁನಿಕ ಚರಂಡಿಗಳ ನಿರ್ಮಾಣ ಮಾಡಲಾಗಿದೆ. ಇದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಅಧ್ಯP್ಷÀ, ಉಪಾಧ್ಯP್ಷÀರ ಅವಧಿ ಮುಗಿದು ೧೦ ತಿಂಗಳಾದರೂ ನೇಮಕ ಮಾಡದಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ನಗರಸಭೆ ಮಾಜಿ ಅಧ್ಯP್ಷÀ ಆನಂದರೆಡ್ಡಿ ಬಾಬು ಮಾತನಾಡಿ, ನಗರೋತ್ಥಾನ ಯೋಜನೆಯಡಿ ೩೪ ಕೋಟಿ ಅನುದಾನ ಬಂದಿದ್ದು, ಆ ಹಣವನ್ನು ನಗರದ ೩೧ ವಾರ್ಡಿಗೂ ಸಮಾನವಾಗಿ ಹಂಚಿಕೆ ಮಾಡಬೇಕು. ಈ ಹಿಂದೆ ರಸ್ತೆಗಳಿಗೆ ಅನುದಾನ ನೀಡಲಾಗಿತ್ತು, ಸರ್ಕಾರ ಬದಲಾದ ಕಾರಣ ಅನುದಾನವನ್ನೂ ಬದಲಿಸಲಾಗಿದೆ. ಬಿಬಿ ರಸ್ತೆ ಅಭಿವೃದ್ಧಿಯಾಗಬೇಕಿದ್ದು, ರೈಲ್ವೇ ಗೇಟ್ ವರೆಗೂ ಡಿವೈಡರ್ ಮಾಡಿ, ಬೀದಿ ದೀಪಗಳನ್ನು ಹಾಕಬೇಕು. ಅಲ್ಲದೆ ನಗರದ ನಾಲ್ಕೂ ಕಡೆ ಸ್ವಾಗತ ಕಮಾನುಗಳ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಸದಸ್ಯರ ಸಮಸ್ಯೆಗಳನ್ನು ಆಲಿಸಿದ ನಗರಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಎಲ್ಲ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಿ, ಪ್ರತಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಅಲ್ಲದೆ ಮುಕ್ತಿಧಾಮಕ್ಕೆ ವಾಹನ, ಕಟ್ಟಡ ನಿರ್ಮಾಣಕ್ಕೆ ಪರವಾನಿಗೆಯಂತಹ ಸಮಸ್ಯೆಗಳಿಗೆ ಕೂಡಲೇ ಗಮನ ಹರಿಸುವಂತೆ ಆಯುಕ್ತರಿಗೆ ಸೂಚಿಸಿದರು. ಅಲ್ಲದೆ ಪರವಾನಿಗೆ ಇಳ್ಲದೆ ನಿರ್ಮಿಸಿದ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಉಳಿಕೆ ಹಣ ನೀಡದಂತೆ ಸೂಚಿಸಿದರು.

 

About The Author

Leave a Reply

Your email address will not be published. Required fields are marked *