ಒಂದು ಸಮುದಾಯದ ಓಲೈಕೆ ಮಾಡುತ್ತಿರುವ ರಾಜ್ಯ ಸರ್ಕಾರ
1 min readಒಂದು ಸಮುದಾಯದ ಓಲೈಕೆ ಮಾಡುತ್ತಿರುವ ರಾಜ್ಯ ಸರ್ಕಾರ
ವಕ್ಫ್ ಹೆಸರಿನಲ್ಲಿ ಹಿಂದೂ ರೈತರ ಜಮೀನು ಕಸಿಯುವ ಹುನ್ನಾರ
ರಾಜ್ಯ ಸರ್ಕಾರದ ಓಲೈಕೆ ನೀತಿ ವಿರೋಧಿಸಿ ನ.೪ಕ್ಕೆ ಪ್ರತಿಭಟನೆ
ಜಮೀರ್ ಅಹ್ಮದ್‌ರನ್ನು ಕಲ್ಲಿನಿಂದ ಹೊಡೆಯುವ ಕಾಲ ದುರವಿಲ್ಲ
ವಕ್ಫ್ ಬೋರ್ಡಿನ ಹೆಸರಿನಲ್ಲಿ ರೈತರಿಗೆ ನೋಟಿಸ್ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಜಿಲ್ಲಾ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಕೋಮಿನ ಓಲೈಕೆಗೆ ಮುಂದಾಗಿದೆ ಎಂದು ಆರೋಪಿಸಿದೆ. ಅಲ್ಲದೆ ಹಿಂದೂಗಳ ಜಮೀನು ಕಸಿಯುತ್ತಿರುವ ಸಚಿವ ಜಮೀರ್ ಅಹ್ಮದ್ ಅವರು ಬೀದಿಯಲ್ಲಿ ಕಾಣಿಸಿದರೆ ಕಲ್ಲಿನಲ್ಲಿ ಹೊಡೆಯುತ್ತಾರೆ ಎಂದು ಎಚ್ಚರಿಕೆಯನ್ನೂ ನೀಡಿದೆ. ಹಾಗಾದರೆ ಬಿಜೆಪಿಯವರ ಆಕ್ರೋ ಏನು ಅನ್ನೋದನ್ನ ನೋಡೋಣ ಬನ್ನಿ.
ಉತ್ತರ ಕ್ರನಾಟಕದ ಹಲವು ಜಿಲ್ಲೆಗಳಲ್ಲಿ ಹಿಂದೂಗಳಿಗೆ ಸೇರಿದ ಮಠಗಳು, ದೇವಾಲಯಗಳು, ರೈತರ ಜಮೀನು ತಮಗೆ ಸೇರಿದ್ದು ಎಂದು ವಕ್ಫ್ ಬೋರ್ಡ್ ನೋಟಿಸ್ ನೀಡಿರುವುದನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಜಮೀರ್ ಅಹ್ಮದ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿ ರಾಮಲಿಂಗಪ್ಪ, ಕ್ರಿಸ್ತ ಶಕ 610ರಲ್ಲಿ ಬಂದ ಇಸ್ಲಾಂ ಧರ್ಮಕ್ಕೆ ಸೇರಿದ ಆಸ್ತಿ ಎಂದು ಹಿಂದೂಗಳ ಮಠಗಳು, ದೇವಾಲಯಗಳು ಮತ್ತು ಪಿತ್ರಾರ್ಜಡಿತವಾಗಿ ಉಳುಮೆ ಮಾಡುತ್ತಿರುವ ರೈತರ ಜಮೀನುಗಳಿಗೆ ನೋಟಿಸ್ ನೀಡಿದ್ದಾರೆ. ಯಾದಗಿರಿ ಜಿಲ್ಲಾಧಿಕಾರಿಗಳೇ ಖುದ್ದು ಹೇಳಿದಂತೆ ಸಚಿವ ಜಮೀರ್ ಅಹ್ಮದ್ ಅವರ ಸೂಚನೆಯ ಮೇರೆಗೆ ಪಹಣಿಗೆ ಸೇರಿಸಲಾಗಿದೆ ಎಂದಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರ ಸೂಚನೆಯ ಮೇರೆಗೆ ಹಿಂದೂಗಳ ಸಾವಿರಾರು ವರ್ಷಗಳ ಆಸ್ತಿ ವಕ್ಫ್ ಆಸ್ತಿ ಎಂದುಧಾರೆ ಎರೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.
ವಕ್ಫ್ ಬೋರ್ಡಿನ ಹೆಸರಿನಲ್ಲಿ ಹಿಂದೂ ರೈತರ ಆಸ್ತಿಗಳನ್ನು ಕಬಳಿಸಲು ಯಾವುದೇ ಕಾರಣಕ್ಕೂ ಬಿಜೆಪಿ ಬಿಡೋದಿಲ್ಲ. ಹಾಗಾಗಿ ನವೆಂಬರ್ ೪ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದು, ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ಸೂಚನೆಯಂತೆ ಸೋಮವಾರ ಚಿಕ್ಕಬಳ್ಳಾಪುರದಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಅಲ್ಲದೆ ಹಿಂದೂಗಳ ಒಂದು ಇಂಚುಮಿಯನ್ನೂ ವಕ್ಫ್ಗೆ ನೀಡಲು ಸಾಧ್ಯವಿಲ್ಲ. ಈ ಸಂಬ0ಧ ರಾಜ್ಯಸ`ೆ ಮತ್ತು ಲೋಕಸಭೆಯಲ್ಲಿ ಮಸೂದೆ ತಂದು ವಕ್ಫ್ ಆಸ್ತಿಗಳನ್ನು ರಾಷ್ಟಿಕರಣ ಮಾಡಲು ಪ್ರಧಾನಿ ನರೇದ್ರಮೋದಿಯವರು ಕ್ರಮ ಜರುಗಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಮುಖಂಡ ಮುನಿರಾಜು ಮಾತನಾಡಿ, ರಾಜ್ಯ ಕಾಂಗ್ರೆಸ್ ಕೇವಲ ಒಂದು ಸಮುದಾಯವನ್ನ ಓಲೈಕೆ ಮಾಡಲು ಮುಂದಾಗಿ ಹಿಂದೂ ರೈತರನ್ನು ಬಲಿ ನೀಡಲು ಮುಂದಾಗಿದೆ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕತುಮಾರ್ ಅವರು ಸೂಚನೆಯಂತೆ ರೈತರಿಗೆ ನೋಟಿಸ್ ನೀಡಲಾಗಿದೆ. ಮಾತ್ರವಲ್ಲ, ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲೂ ಇದೇ ಕಾರಣವಾಗಿದೆ. ಆದರೆ ಸರ್ಕಾರದ ಈ ಕ್ರಮವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದ್ದು, ಈ ಹೋರಾಟಕ್ಕೆ ಪಕ್ಷಾತೀತವಾಗಿ ಹಿಂದೂಗಳು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಅಲ್ಲದೆ ಜಿಲ್ಲೆಯಲ್ಲಿಯೂ ಇಂತಹ ಪ್ರರರಣಗಳು ನಡೆದಿರುವ ಆತಂಕ ಇದ್ದು, ಜಿಲ್ಲೆಯ ಪ್ರತಿಯೊಬ್ಬ ರೈತರೂ ತಮ್ಮ ಜಮೀನಿನ ಬಗ್ಗೆ ಪರಿಶೀಲಿಸಿಕೊಳ್ಳಲು ಬಿಜೆಪಿ ಕಚೇರಿಯಲ್ಲಿಯೇ ಸಹಾಯವಾಣಿ ತೆರೆಯಲಾಗುವುದು ಎಂದರು. ಅಳ್ಲದೆ ಹಿಂದೂಗಳ ಆಸ್ತಿ ಕಬಳಿಸಲು ಸಚಿವ ಜಮೀರ್ ಅಹ್ಮದ್ ಹುನ್ನಾರ ನಡೆಸಿದ್ದು, ಜಮೀರ್ ಅಹ್ಮದ್ ಅರು ಸಾರ್ವಜನಿಕವಾಗಿ ಕಾಣಿಸಿದರೆ ಜನರು ಕಲ್ಲಿನಲ್ಲಿ ಹೊಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಸೋಮವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಹೆಚ್ಚಿನ ಜನರು ಭಾಗವಹಿಸಬೇಕು. ಆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಬೇಕು. ಆರಂಭದಿ0ದಲೂ ಹಿಂದೂ ವಿರೋಧಿಯಾಗಿಯೇ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಇದೀಗ ಹಿಂದೂ ರೈತರು, ಮಠಗಳು, ದೇವಾಲಯಗಳನ್ನು ಕಬಳಿಸಲು ಮುಂದಾಗಿದೆ. ಇಂತಹ ನೀಚ ಕ್ರಮದ ವಿರುದ್ಧ ಸೋಮವಾರ ಉಗ್ರ ಪ್ರತಿಭಟನೆ ನಡೆಯುತ್ತಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.