ಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಅಸಂಕಾರ
1 min readಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಅಸಂಕಾರ
ಜಾಲಾರಿ ಗಂಗಮ್ಮ ದೇವಾಲಯಕ್ಕೆ ವಿಶೇಷ ಅಲಂಕಾರ
ಗAಗಮ್ಮ ದರ್ಶನ ಪಡೆದ ಸಹಸ್ರಾರು ಭಕ್ತರು
ಕಾರ್ತಿಕ ಮಾಸದ ಪ್ರಯುಕ್ತ ಲಕ್ಷದೀಪೋತ್ಸವ
ಚಿಕ್ಕಬಳ್ಳಾಪುರ ನಗರ ದೇವತೆ ಎಂದೇ ಖ್ಯಾತಿ ಪಡೆದಿರುವ ಜಾಲಾರಿ ಗಂಗಮ್ಮ ದೇವಾಲಯದಲ್ಲಿ ೩ನೇ ಸೋಮವಾರದ ಪ್ರಯುಕ್ತ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಹಸ್ರಾರು ಭಕ್ತರು ಆಗಮಿಸಿ, ದೀಪ ಹಚ್ಚುವ ಜೊತೆಗೆ ದೇವರ ದರ್ಶನ ಪಡೆದರು.
ಚಿಕ್ಕಬಳ್ಳಾಪುರ ನಗರ ದೇವತೆಯಾಗಿ ಖ್ಯಾತಿ ಪಡೆದಿರುವ ಜಾಲಾರಿ ಗಂಗಮ್ಮ ದೇವಾಲಯದಲ್ಲಿ ಕಾರ್ತಿಕ ಮಾಸದ ೩ನೇ ಸೋಮವಾರದ ಪ್ರಯುಕ್ತ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಪ್ರತಿ ವರ್ಷ ಕಾರ್ತಿಕ ಮಾಸದ ೩ನೇ ಸೋಮವಾರ ಅಮ್ಮನವರ ದೇವಾಲಯದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಈ ವರ್ಷವೂ ಲಕ್ಷ ದೀಪೋತ್ಸವ ಆಚರಿಸಲಾಯಿತು. ಸಾವಿರಾರು ಭಕ್ತರು ಆಗಮಿಸಿ, ಸೋಮವಾರ ರಾತ್ರಿ ದೀಪಗಳನ್ನು ಹಚ್ಚಿದರು.
ಕಾರ್ತಿಕ ಮಾಸದ ಸೋಮವಾರ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮ ಇದ್ದ ಕಾರಣ ಗಂಗಮ್ಮ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲ್ಲದೆ ಗಂಗಮ್ಮ ಗುಡಿ ರಸ್ತೆ ಸದಾ ವಾಹನಗಳಿಂದ ಗಿಜಿಗೊಡುತ್ತಿದ್ದು, ಸೋಮವಾರ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ, ದೇವಾಲಯದ ಮುಂದಿನ ರಸ್ತೆ ಮತ್ತು ದೇವಾಲಯದ ಎದುರಿನಲ್ಲಿಯೇ ಇರುವ ಗೊಡ್ಡಮ್ಮನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಇನ್ನು ರಸ್ತೆಯಲ್ಲಿ ಹೂವಿನ ಅಲಂಕಾರ ಆಕರ್ಷಣೀಯವಾಗಿತ್ತು.
ದೇವಾಲಯದಲ್ಲಿ ಅಯೋಧ್ಯಯ ರಾಮಮಂದಿರ ಮಾದರಿ ಇರಿಸಲಾಗಿದ್ದು, ಇದ್ದು, ದೇವಾಲಯಕ್ಕೆ ಬಂದ ಭಕ್ತರನ್ನು ಆಕರ್ಷಿಸುತ್ತಿತ್ತು. ಇನ್ನು ಸೋಮವಾರ ಬೆಳಗಿನಿಂದ ತಡರಾತ್ರಿಯವರೆಗೂ ಗಂಗಮ್ಮ ದೇವಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಸಾವಿರಾರು ಸಂಖಅಯೆಯಲ್ಲಿ ಆಗಕಮಿಸಿದ ಭಕ್ತರು ಸಾಲಿನಲ್ಲಿ ನಿಂತು ಅಮ್ಮನವರ ದರ್ಶನ ಪಡೆದರು.