ದೇಶ ಸೇವೆ ಸಲ್ಲಿಸಿ ನಿವೃತ್ತಯಾಗಿ ಸ್ವಾಗ್ರಾಮಕ್ಕೆ ಆಗಮಿಸಿದ ಯೋಧ
1 min read
ದೇಶ ಸೇವೆ ಸಲ್ಲಿಸಿ ನಿವೃತ್ತಯಾಗಿ ಸ್ವಾಗ್ರಾಮಕ್ಕೆ ಆಗಮಿಸಿದ ಯೋಧ
ಯೋಧ ರಾಚಪ್ಪ ಇಸ್ಲಾಂಪೂರೆ ಅವರಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ
ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಸ್ವಗ್ರಾಮ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್‌ಗೆ ಆಗಮಿಸಿದ ವೀರಯೋಧ ರಾಚಪ್ಪ ಇಸ್ಲಾಂಪೂರೆ ಅವರಿಗೆ ಹುಟ್ಟೂರಿನಲ್ಲಿ ಜನ್ಮಭೂಮಿ ಸೇವಾ ಸಂಸ್ಥೆ ಮತ್ತು ಮಸ್ಕಲ್ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಕೋರಲಾಯಿತು.
ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಸ್ವಗ್ರಾಮ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್‌ಗೆ ಆಗಮಿಸಿದ ವೀರಯೋಧ ರಾಚಪ್ಪ ಇಸ್ಲಾಂಪೂರೆ ಅವರಿಗೆ ಹುಟ್ಟೂರಿನಲ್ಲಿ ಜನ್ಮಭೂಮಿ ಸೇವಾ ಸಂಸ್ಥೆ ಮತ್ತು ಮಸ್ಕಲ್ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಔರಾದ್ ತಾಲೂಕಿನ ಮಸ್ಕಲ್ ಗ್ರಾಮದ ಯೋಧ ರಾಚಪ್ಪ ಇಸ್ಲಾಂಪೂರೆ ಅವರು ನಾಗಮ್ಮ, ನಾಗಶೆಟ್ಟಿ ದಂಪತಿಗಳ ಪುತ್ರನಾಗಿದ್ದು, 2002 ರಲ್ಲಿ ಸೇವೆಗೆ ಸೇರಿದ್ದರು.
ದೇಶದ ವಿವಿಧ ಪ್ರದೇಶಗಳಾದ ಅಸ್ಸಾಂ, ಹಿಮಾಚಲ ಪ್ರದೇಶ, ಪಂಜಾಬ್, ಅರುಣಾಚಲ ಪ್ರದೇಶ, ಶ್ರೀನಗರ್, ಲೇಹ್, ಲಡಾಖ್ ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ, ವಿವಿಧ ಯುದ್ಧಗಳಲ್ಲಿ ಭಾಗಿಯಾಗಿ ದಿಟ್ಟತನದಿಂದ ಹೋರಾಟ ಮಾಡಿ. ಇದೀಗ 22 ವರ್ಷದ ಭಾರತೀಯ ಸೇನೆಯ ಸೇವೆ ನಂತರ ನಿವೃತಿ ಹೊಂದಿ, ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದ್ದೂರಿ ಸನ್ಮಾನ ಮಾಡಿ ಸ್ವಾಗತಿಸಿದರು.
ಇದಕ್ಕೂ ಮುನ್ನ ಗ್ರಾಮದ ಯುವಕರು, ಹಳೆ ವಿದ್ಯಾರ್ಥಿಗಳ ಬಳಗ, ದೇಶಾಭಿ ಮಾನಿಗಳ ಬಳಗದವರು ಔರಾದ್ ತಾಲೂಕಿನ ಸಂತಪುರ ಬಸವೇಶ್ವರ ವೃತ್ತದಲ್ಲಿ ಅದ್ದೂರಿಯಾಗಿ ಯೋಧನನ್ನು ಬರಮಾಡಿಕೊಂಡು, ಸುಮಾರು ಮೂರು ಕಿಲೋಮೀಟರ್ ದೂರದ ಮಸ್ಕಲ್ ಗ್ರಾಮದವರೆಗೆ ಬೈಕ್ ರ್ಯಾಲಿ ಮೂಲಕ ನಿವೃತ ಯೋಧನಿಗೆ ಭವ್ಯ ಮೆರವಣಿಗೆ ಮಾಡಿದರು. ಮೇರವಣಿಗೆ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ತಾಯಂದಿರು ಮತ್ತು ಗ್ರಾಮಸ್ಥರು ತಲೆಯ ಮೇಲೆ ಕಳಸಗಳನ್ನು ಹೊತ್ತು ಮಂಗಳ ವಾಧ್ಯಗಳೊಂದಿಗೆ ಗ್ರಾಮದ ಮಗನಿಗೆ ಭವ್ಯವಾಗಿ ಬರಮಾಡಿಕೊಂಡು ಅಪ್ಪಿಕೊಂಡು ಸನ್ಮಾನಿಸಿದರು.
ದೇಶದ ಜನರ ಸುರಕ್ಷತೆಗಾಗಿ ತನ್ನ ಪ್ರಾಣ ಒತ್ತೆಯಿಟ್ಟು ಗಡಿಯಲ್ಲಿ ದೇಶ ಕಾಯುವ ಯೋಧರ ಸೇವೆಗೆ ಸರಿಸಾಟಿ ಯಾವುದು ಇಲ್ಲ. ಅಂಥವರನ್ನು ಸನ್ಮಾನಿಸುವುದು ನಾವು ತೋರಿಸುವ ಅಳಿಲು ಸೇವೆಯಾಗಿದೆ. ಮುಂದಿನ ಪೀಳಿಗೆಯೂ ದೇಶ ಸೇವೆ ಮಾಡಲು ಮುಂದೆ ಬರಬೇಕಾದರೇ ಇಂತಹ ಮಹಾನ್ ಯೋಧರ ಪೇರಣೆ ಅತ್ಯಂತ ಮಹತ್ವ ಎಂದು ಭಾಲ್ಕಿ ಹೀರೆಮಠ ಸಂಸ್ಥಾನದ ಗುರು ಬಸವ ಪಟ್ಟದೇವರು ಹೇಳಿದರು.