ಬೆಳ್ಳಂ ಬೆಳಗ್ಗೆ ಹೆದ್ದಾರಿಯಲ್ಲಿ ಬೀಕರ ಸರಣಿ ಅಪಘಾತ
1 min readಬೆಳ್ಳಂ ಬೆಳಗ್ಗೆ ಹೆದ್ದಾರಿಯಲ್ಲಿ ಬೀಕರ ಸರಣಿ ಅಪಘಾತ
ಮೂರು ಲಾರಿ, ಒಂದು ಬಸ್, ಒಂದು ಕಾರು ಅಪಘಾತ
ಬೆಳ್ಳಂ ಬೆಳಗ್ಗೆ ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿದೆ. ಮೂರು ಲಾರಿ ಮತ್ತು ಸ್ಲೀಪರ್ ಕೋಚ್ ಬಸ್ ನಡುವೆ ಸರಣಿ ಅಫಘಾತ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಬಳಿ ಘಟನೆ ನಡೆದಿದೆ.
ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದು, ಅಫಘಾತದ ರಬಸಕ್ಕೆ ಸ್ಲೀಪರ್ ಕೋಚ್ ಬಸ್ ಮುಂಬಾಗ ನುಜ್ಜುಗುಜ್ಜಾಗಿದೆ. ಬಸ್ ನಲ್ಲಿ ನಿದ್ದೆಯಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೋಂದಿಗೆ ಪಾರಾಗಿದ್ದಾರೆ. ಅಪಘಾತಕ್ಕೀಡಾದ ಲಾರಿಗೆ ಹಿಂದಿನಿ0ದ ಡಿಕ್ಕಿ ಹೊಡೆದ ಸ್ಲೀಪರ್ ಕೋಚ್ ಬಸ್, ಇದರಿಂದ ಸರಣಿ ಅಪಘಾತ ಸಂಭವಿಸಿದ್ದು, ಇದರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಟ್ರಾಫಿಕ್ ಜಾಮ್‌ನಿಂದ ಏಕಾಏಕಿ ಬ್ರೇಕ್ ಹಾಕಿದ ಕಾರಣಕ್ಕೆ ಕ್ಯಾಂಟರ್ ಪಲ್ಟಿಯಾಗಿದೆ. ಪಲ್ಟಿಯಾದ ಕ್ಯಾಂಟರ್‌ಗೆ ಹಿಂದಿನಿ0ದ ಬಂದ ಮತ್ತೊಂದು ಲಾರಿ ಡಿಕ್ಕಿಯಾಗಿದೆ. ಒಟ್ಟು ಮೂರು ಲಾರಿ, ಒಂದು ಬಸ್ಸು, ಒಂದು ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತ ಹಿನ್ನೆಲೆ ಹೆದ್ದಾರಿಯಲ್ಲಿ ಒಂದು ಬದಿಯ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಇದರಿಂದಾಗಿ ಒಂದೇ ರಸ್ತೆಯಲ್ಲಿ ಎರಡು ಕಡೆಯ ವಾಹನಗಳ ಸಂಚಾರ ಮಾಡಬೇಕಾದ ಸ್ಥಿತಿ ಎದುರಾಗಿ ವಾಹನ ಸಂಚಾರಕ್ಕೆ ಕೆಲ ಕಾಲ ತೀವ್ರ ಸಂಕಷ್ಟ ಎದುರಾಗಿತ್ತು.
ಕ್ರೇನ್ ಮೂಲಕ ಅಫಘಾತಕ್ಕೀಡಾದ ವಾಹನಗಳ ತೆರವು ಮಾಡಲಾಯಿತು. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಅಪಘಾತ ನಡೆದಿದ್ದು, ಈ ಸಂಬ0ಧ ಪ್ರಕರಣ ದಾಖಲಿಸಿಕೊಡಂಇರುವ ಪೊಲೀಸರು, ಹೆದಗ್ದಾರಿಯಲ್ಲಿ ಸಂಚಾರ ಸುಗಮಗೊಳಿಸಲು ತೀವ್ರ ಹರಸಾಹಸ ಪಟ್ಟರು.