ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಮುಖ್ಯಮಂತ್ರಿಗಳ ಆದೇಶಕ್ಕೂ ಪರಿಹಾರವಾಗದ ಸಮಸ್ಯೆ

1 min read

೯ನೇ ವಾರ್ಡಿನ ಸಮಸ್ಯೆಗೆ ಮುಕ್ತಿ ಸಿಗುವ ನಿರೀಕ್ಷೆ

ಮುಖ್ಯಮಂತ್ರಿಗಳ ಆದೇಶಕ್ಕೂ ಪರಿಹಾರವಾಗದ ಸಮಸ್ಯೆ

ಉಪಾಧ್ಯಕ್ಷರ ಮಧ್ಯಪ್ರವೇಶದಿಂದ ಪರಿಹಾರವಾಗಲಿದೆಯೇ

೮,೯ನೇ ವಾರ್ಡಿನ ಯುಜಿಡಿ ಸಮಸ್ಯೆಗೆ ಸಿಗಲಿದೆಯೇ ಪರಿಹಾರ

ಅದು ತಗ್ಗು ಪ್ರದೇಶ. ಅದಕ್ಕೆ ಕಾರಣ ಈ ಹಿಂದೆ ಅಲ್ಲಿ ಕೆರೆ ಇತ್ತು. ಕೆರೆಯನ್ನು ಮುಚ್ಚಿ ಕಟ್ಟಡ ಕಟ್ಟಿದರೆ ಏನಾಗಬೇಕೋ ಅದೇ ಆಗಿದೆ. ಹಾಗಂತ ಅಲ್ಲಿನ ಸಮಸ್ಯೆ ಹಾಗೆಯೇ ಬಿಡಲು ಸಾಧ್ಯವೇ, ಅದಕ್ಕೆ ಪರಿಹಾರ ಅಂತ ಬೇಡವೇ, ಆದರೆ ಖುದ್ದು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಈ ವಾರ್ಡುಗಳ ಯುಜಿಡಿ ಸಮಸ್ಯೆ ಪರಿಹಾರಕ್ಕೆ ಆದೇಶ ನೀಡಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗಿರಲಿಲ್ಲ. ಆದರೆ ಇದೀಗ ನಗರಸಭೆ ಸದಸ್ಯರು ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ಸಮಸ್ಯೆಗೆ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾದರೆ ಯಾವುದು ಆ ಸಮಸ್ಯೆ ಅಂತೀರಾ, ನೀವೇ ನೋಡಿ.

ಚಿಕ್ಕಬಳ್ಳಾಪುರ ನಗರದಲ್ಲಿ ಯಾವ ಮುಹೂರ್ತದಲ್ಲಿ ಯುಜಿಡಿ ಕಾಮಗಾರಿ ಆರಂಭಿಸಿದರೋ ಗೊತ್ತಿಲ್ಲ. ಆರಂಭವಾದ ದಿನದಿಂದಲೂ ಯುಜಿಡಿ ಸಮಸ್ಯೆ ಅನ್ನೋದು ನಿರಂತರವಾಗಿ ಕಾಡುತ್ತಲೇ ಇದೆ. ನಗರದ ೩೧ ವಾರ್ಡುಗಳಲ್ಲಿಯೂ ಒಳ ಚರಂಡಿ ಸಮಸ್ಯೆ ಕಾಡುತ್ತಿದ್ದು, ಇದಕ್ಕೆ ಅವೈನಿಕ ಕಾಮಗಾರಿಯೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ. ಇನ್ನು ೩೧ ವಾರ್ಡುಗಳ ಸಮಸ್ಯೆ ಒಂದು ಕಡೆಯಾದರೆ ೮ ಮತ್ತು ೯ನೇ ವಾರ್ಡುಗಳ ಸಮಸ್ಯೆ ಮಾತ್ರ ಗಂಭೀರವಾದುದು. ಇಲ್ಲಿ ಯುಜಿಡಿ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಹೊರತು ಅದು ಪರಿಹಾರವಾಗಿಲ್ಲ.

೮ ಮತ್ತು ೯ನೇ ವಾರ್ಡುಗಳು ಕೆರೆಯಿದ್ದ ಜಾಗದಲ್ಲಿ ನಿರ್ಮಾಣವಾಗಿರುವ ಬಡಾವಣೆಗಳಾಗಿವೆ. ಹಾಗಾಗಿ ಸಹಜವಾಗಿಯೇ ತಗ್ಗು ಪ್ರದೇಶದಲ್ಲಿ ಇರುವುದರಿಂದ ಇಲ್ಲಿನ ಯುಜಿಡಿ ನೀರು ಹೊರ ಸಾಗದೆ ಪದೇ ಪದೇ ಕಟ್ಟಿಕೊಂಡು, ಸಮಸ್ಯೆಯನ್ನು ನಿರಂತವಾಗಿಟ್ಟಿವೆ. ಜೈ ಭೀಮ್ ನಗರ, ಜಿಲ್ಲಾಸ್ಪತ್ರೆ ಪ್ರದೇಶದಲ್ಲಿ ಈ ಸಮಸ್ಯೆ ಕಾಡುತ್ತಿದ್ದು, ಇಲ್ಲಿನ ಸಮಸ್ಯೆ ನಿವಾರಿಸುವಂತೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಸೂಚಿಸಿದರೂ ಇಲ್ಲಿನ ಸಮಸ್ಯೆ ಪರಿಹಾರ ಮಾಡಲು ನಗರಸಭೆಗೆ ಸಾಧ್ಯವಾಗಿಲ್ಲ.

ಇನ್ನು ಇಲ್ಲಿ ಕಟ್ಟಿಕೊಂಡಿರುವ ಯುಜಿಡಿ ಸಮಸ್ಯೆ ನಿವಾರಣೆಗೆ ದಿಕ್ಕು ತೋಚದ ನಗರಸಭೆ ಅಧಿಕಾರಿಗಳು ಮೋಟರ್ ತಂದು ಮ್ಯಾನ್‌ಹೋಲ್‌ಗೆ ಇಳಿಬಿಟ್ಟು, ಅಲ್ಲಿ ಕಟ್ಟಿಕೊಂಡಿರುವ ಯುಜಿಡಿ ನೀರು ಮೋಟರ್ ಮೂಲಕ ಚರಂಡಿಗೆ ಹರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದರು. ಬಯಲು ಶೌಚ ಮುಕ್ತ ಮಾಡಿರೋ ಸರ್ಕಾರ ಮ್ಯಾನ್‌ಹೋಲ್‌ನಲ್ಲಿರೋ ಯುಜಿಡಿ ನೀರು ಚರಂಡಿಗೆ ಪಂಪ್ ಮಾಡುವುದು ಯಾವ ಸ್ವಚ್ಛ ಭಾರತ ಎಂಬುದಕ್ಕೆ ಪಾಪ ನಗರಸಭೆ ಅಧಿಕಾರಿಗಳಿಂದಲೂ ಉಥ್ತರ ಇಲ್ಲವಾಗಿದೆ.

ಹೀಗೆ ಯುಜಿಡಿ ನೀರು ಚರಂಡಿಗೆ ಹರಿಸುವ ಪರಿಣಾಮ ಈ ಪ್ರದೇಶದ ಜನರು ದುರ್ವಾಸನೆ ಧರಿಸಲಾರದೆ ಪರದಾಡುವ ಸ್ಥಿತಿ ಕಳೆದ ಹಲವು ತಿಂಗಳುಗಳಿAದಲೂ ಇಲ್ಲಿದೆ. ಇನ್ನು ಪದೇ ಪದೇ ಅನಾರೋಗ್ಯ ಪೀಡಿತರಾಗುತ್ತಿರುವ ಈ ಪ್ರದೇಶದಲ್ಲಿ ವಾಸಿಸುವ ಮಕ್ಕಳು, ದ್ಧರು ನಗರಸಭೆಗೆ ಶಾಪ ಹಾಕುವುದು ಸಾಮಾನ್ಯವಾಗಿತ್ತೇ ಹೊರತು ಅಧಕ್ಕೆ ಪರಿಹಾರ ಹುಡುಕುವ ಕೆಲಸವನ್ನು ನಗರಸಭೆ ಮಾಡಿರಲಿಲ್ಲ. ಈ ಯುಜಿಡಿ ಸಮಸ್ಯೆಯಿಂದಾಗಿ ೮ಮತ್ತು ೯ನೇ ವಾರ್ಡಿನ ನಗರಸಭಾ ಸದಸ್ಯರು ತಮ್ಮ ವಾರ್ಡುಗಳಿಗೆ ಹೋಗಲೂ ಹೆದರುವ ಸ್ಥಿತಿ ನಿರ್ಮಾಣವಾಗಿತ್ತು.

ಮಾತ್ರವಲ್ಲ, ಯುಜಿಡಿ ನೀರು ಸರಾಗವಾಗಿ ಮುಂದೆ ಹರಿಯದೆ, ನಿಂತಲ್ಲೇ ನಿಂತ ಪರಿಣಾಮ ಪಕ್ಕದಲ್ಲಿಯೇ ಹಾದುಹೋಗಿರುವ ಜಕ್ಕಲಮಡಗು ಜಲಾಶಯದ ನೀರಿನ ಪೈಪ್‌ಗಳಿಗೆ ಯುಜಿಡಿ ನೀರು ಮಿಶ್ರಣವಾಗಿ ಅದು ಸಾರ್ವಜನಿಕರ ಮನೆಗಳ ನೀರಿನ ಸಂಪುಗಳಿಗೆ ಸೇರಿ, ಜನ ಯುಜಿಡಿ ಮಿಶ್ರಿತ ನೀರು ಸೇವಿಸುವ ದಯನೀಯ ಸ್ಥಿತಿ ಎದುರಾಗಿತ್ತು. ಇದರಿಂದ ಸದಸ್ಯರಿಗೆ ಮತ್ತು ನಗರಸಭೆ ಅಧಿಕಾರಿಗಳಿಗೆ ನಾಗರಿಕರು ಪ್ರತಿನಿತ್ಯ ಶಾಪ ಹಾಕುವುದು ಸಾಮಾನ್ಯವಾಗಿತ್ತು.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರಸಭೆ ಉಪಾಧ್ಯಕ್ಷ ನಾಗರಾಜ್ ಅವರು ಇಂದು ೮ ಮತ್ತು ೯ನೇ ವಾರ್ಡಿನ ಯುಜಿಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದಾರೆ. ಈ ಪ್ರದೇಶ ತಗ್ಗು ಪ್ರದೇಶವಾಗಿರುವ ಕಾರಣ ಪೈಪ್‌ಲೈನ್ ಈ ಹಿಂದೆ ಹಾಕಿರುವುದು ತುಂಬಾ ಆಳದಲ್ಲಿದೆ. ಇದರಿಂದ ಮುಂದಿನ ಎತ್ತರದ ಪ್ರದೇಶಕ್ಕೆ ನೀರು ಹರಿಯದೆ ನಿಂತಲ್ಲೇ ನಿಲ್ಲುತ್ತದೆ. ಹಾಗಾಗಿ ಯುಜಿಡಿಗೆ ಪರ್ಯಾಯವಾಗಿ ಮತ್ತೊಂದು ಪೈಪ್ ಲೈನ್ ಹಾಕುವುದು ಮತ್ತು ಈ ಪ್ರದೇಶದಲ್ಲಿ ಕುಡಿಯುವ ನೀರಿಗೆ ಯುಜಿಡಿ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಬದಲಿಸುವುದು ಎರಡೂ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದಕ್ಕೆ ನಗರಸಭೆ ಪೌರಾಯುಕ್ತರೂ ಕೂಡಲೇ ಸ್ಪಂಧಿಸಿದ್ದು, ಇಂದು ಸೆಕ್ಕಿಂಗ್ ಮಷಿನ್ ತಂದು ಕಟ್ಟಿಕೊಂಡಿರುವ ಮ್ಯಾನ್‌ಹೋಲ್‌ಗಳನ್ನು ಸ್ವಚ್ಛ ಮಾಡಿ, ನಾಳೆಯಿಂದಲೇ ಪ್ರತ್ಯೇಕವಾಗಿ ಕುಡಿಯುವ ನೀರಿನ ಪೈಪ್‌ಲೈನ್ ಬದಲಿಸಲು ಸಂಬ0ಧಿಸಿದ ಅಧಿಕಾರಿಗಳು ಮುಂದಾಗಿದ್ದಾರೆ. ಜೊತೆಗೆ ಈ ಹಿಂದೆ ಹಿನ್ನೆ ಹೊಸಹಳ್ಳಿ ರಸ್ತೆಯಲ್ಲಿ ಪರಿಹಾರ ಮಾಡಿದಂತೆ ಇಲ್ಲಿಯೂ ಪ್ರತ್ಯೇಕವಾಗಿ ಯುಜಿಡಿ ಪೈಪ್‌ಲೈನ್ ಹಾಕಲು ಸೂಚಿಸಲಾಗಿದ್ದು, ಪ್ರತ್ಯೇಕ ಪೈಪ್‌ಲೈನ್ ಹಾಕಿದ್ದೇ ಆದಲ್ಲಿ ಈ ಎರಡೂ ವಾರ್ಡುಗಳ ಹಲವು ವರ್ಷಗಳ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಈ ನಿಟ್ಟಿನಲ್ಲಿ ಎರಡೂ ವಾರ್ಡುಗಳ ಸದಸ್ಯರು ಮತ್ತು ಉಪಾಧ್ಯಕ್ಷರು ಇಂದು ವಾರ್ಡಿನಲ್ಲಿ ಸಮಸ್ಯೆ ಇರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸುವ ಜೊತೆಗೆ ಸೆಕ್ಕಿಂಗ್ ಮಷಿನ್‌ನಿಂದ ಮ್ಯಾನ್‌ಹೋಲ್‌ಗಳ ಸ್ವಚ್ಛತೆಗೆ ಮುಂದಾಗಿದ್ದು, ಶೀಘ್ರದಲ್ಲಿಯೇ ೮ ಮತ್ತು ೯ನೇ ವಾರ್ಡುಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿ ಎಂದು ಹಾರೈಸೋಣ.

About The Author

Leave a Reply

Your email address will not be published. Required fields are marked *