ಉದ್ಘಾಟನೆಗೊಂಡ ಕಳಪೆ ಶೌಚಾಲಯ
1 min readಉದ್ಘಾಟನೆಗೊಂಡ ಕಳಪೆ ಶೌಚಾಲಯ
ಶಾಸಕ ದರ್ಶನ್ ಧ್ರುವನಾರಾಯಣ್ ಗರಂ
ಕೈ ಮತ್ತು ಕಾಲಿನಲ್ಲಿ ಟಚ್ ಮಾಡಿದ್ರೆ ಪೈಪ್ ಗಳು ಕಿತ್ತು ಬರುತ್ತಿವೆ. ಏನ್ರೀ ಇದು ಎಲ್ಲರೂ ಸೇರಿಕೊಂಡು ಆಟ ಆಡ್ತಾ ಇದ್ದೀರಾ ಎಂದು ಅಧಿಕಾರಿಗಳ ವಿರುದ್ಧ ಶಾಸಕ ದರ್ಶನ್ ಧ್ರುವನಾರಾಯಣ್ ಗರಂ ಆದ ಘಟನೆ ಇಂದು ನಡೆಯಿತು.
ನಂಜನಗೂಡು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿತಿ ಕೇಂದ್ರದಿ0ದ ನಿರ್ಮಾಣ ಮಾಡಿರುವ ಸುಮಾರು ಒಂದು ಕೋಟಿ ವೆಚ್ಚದಲ್ಲಿ 4 ಕೊಠಡಿಗಳು ಮತ್ತು 3 ಶೌಚಾಲಯ ಕಟ್ಟಡ ಉದ್ಘಾಟನೆ ಮಾಡಲು ಬಂದ ಶಾಸಕ ದರ್ಶನ್ ಧ್ರುವನಾರಾಯಣ್, ಶೌಚಾಲಯದ ಕಳಪೆ ಕಾಮಗಾರಿ ನೋಡಿ ಶಾಕ್ ಆದ ಘಟನೆ ಇಂದು ನಡೆಯಿತು.
ಟೇಪ್ ಕತ್ತರಿಸಿದ ಬಳಿಕ ಪರಿಶೀಲನೆ ನಡೆಸಿದ ಶಾಸಕರು, ಶೌಚಾಲಯಕ್ಕೆ ಅಳವಡಿಸಿರುವ ವಸ್ತುಗಳು ಕ್ವಾಲಿಟಿ ಇಲ್ಲ, ಕಳಪೆ ಗುಣಮಟ್ಟದ ಕಾಮಗಾರಿ ನಡೆಸಲಾಗಿದೆ. ಸರಿಯಾಗಿ ಕೆಲಸ ಮಾಡದೆ ಎಲ್ಲರೂ ಸೇರಿ ಆಟ ಆಡ್ತಾ ಇದ್ದೀರಾ ಏನ್ರೀ ಇದು ಕಾಮಗಾರಿ, ಇಂತಹ ಕಾಮಗಾರಿಗೆ ಟೇಪ್ ಕಟ್ ಮಾಡಲು ಏಕೆ ಕರೆದ್ರೀ ಎಂದು ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಕೂಡಲೇ ಗುಣಮಟ್ಟದ ವಸ್ತುಗಳನ್ನು ಅಳವಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.