ವೃದ್ಧೆಗೆ ಮಗುವನ್ನು ನೀಡಿ ನಾಪತ್ತೆಯಾದ ತಾಯಿ
1 min readವೃದ್ಧೆಗೆ ಮಗುವನ್ನು ನೀಡಿ ನಾಪತ್ತೆಯಾದ ತಾಯಿ ಹೆಣ್ಣು ಮಗುವಾದ ಕಾರಣ ಬಿಟ್ಟುಹೋಗಿರುವ ಶಂಕೆ ಗುಂಡ್ಲುಪೇಟೆಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಘಟನೆ
ತಾಯಿಯೊಬ್ಬಳು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ವೃದ್ದೆಯ ಕೈಗೆ ಮಗುವನ್ನು ನೀಡಿ ಪರಾರಿಯಾಗಿರುವ ಘಟನೆ ಗುಂಡ್ಲುಪೇಟೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸುಮಾರು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಬಿಟ್ಟು ತಾಯಿ ನಾಪತ್ತೆಯಾಗಿದ್ದಾಳೆ. ಕಲಿಗೌಡನಹಳ್ಳಿಯ ಮಹದೇವಮ್ಮ ಎಂಬ ವೃದ್ಧೆ ಬಸ್ ಗಾಗಿ ಕಾಯುತ್ತಿದ್ದಳು. ಈ ವೇಳೆ ಮಗುವನ್ನು ಎತ್ತಿಕೊಂಡು ಬಂದ ತಾಯಿ ವೃದ್ಧೆ ಕೈಗೆ ಮಗು ಕೊಟ್ಟು ಶೌಚಾಲಯಕ್ಕೆ ಹೋಗಿ ಬರುತ್ತೇನೆ ಮಗು ನೋಡಿಕೊಳ್ಳುತ್ತಿರಿ ಎಂದು ಹೇಳಿದ್ದಾಳೆ. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ಹೆಣ್ಣು ಮಗು ಹಿನ್ನೆಲೆ ಮಗುವನ್ನು ತಾಯಿ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಗುಂಡ್ಲುಪೇಟೆ ಪೊಲೀಸರು ಪರಾರಿಯಾದ ಮಹಿಳೆ ಪತ್ತೆಗೆ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ವೀಡಿಯೋ ವೈರಲ್ ಆಗುತ್ತಿದೆ.