ಸರ್ವಧರ್ಮದ ಭಾವೈಕ್ಯತೆಯ ಸ್ಥಳದಲ್ಲಿ ಪವಾಡ
1 min readಸರ್ವಧರ್ಮದ ಭಾವೈಕ್ಯತೆಯ ಸ್ಥಳದಲ್ಲಿ ಪವಾಡ
ರಾಜ್ಯಕ್ಕೆ ಮಾದರಿಯಾದ ಬೆಳಲೆ ಗ್ರಾಮದ ದರ್ಗಾ
ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವ ದರ್ಗಾ
ದಿನನಿತ್ಯ ಬೆಳಗಾಗುವುದೇ ತಡ ಧರ್ಮ ಮತ್ತು ವರ್ಗಗಳ ನಡುವೆ ಟೀಕೆ ಟಿಪ್ಪಣಿಗಳು, ಕೋಮು ಗಲಭೆಗಳು ಕಾಣುತ್ತಿದ್ದೇವೆ. ಧರ್ಮ ಮತ್ತು ವರ್ಗದ ಕದನಗಳಿಗೆ ಸೆಡ್ಡು ಹೊಡೆದು ಜಗತ್ತಿನಲ್ಲಿ ಮಾನವ ಧರ್ಮ ಒಂದೇ ಎಂದು ಸಾರಿ ಹೇಳುವ ಸರ್ವಧರ್ಮೀಯರ ಭಾವೈಕ್ಯತೆಯ ತಾಣವೊಂದಿದೆ. ಅದು ಮೈಸೂರು ಜಿಲ್ಲೆಯಲ್ಲಿದೆ ಎಂಬುದು ವಿಶೇಷ. ಹಾಗಾದರೆ ಯಾವುದು ಆ ಸ್ಥಳ ಅಂತೀರಾ, ಈ ಸ್ಟೋರಿ ನಡೋಇ.
ಪ್ರತಿ ಗುರುವಾರ ಎಲ್ಲಾ ವರ್ಗದವರು ಸೇರಿ ಪೂಜಾ ಕೈಂ ಕಾರ್ಯಗಳನ್ನು ನಡೆಸಿ ಮಾನವ ಧರ್ಮದ ಬಗ್ಗೆ ಸಂದೇಶ ಸಾರುವ ಪುಣ್ಯ ಕ್ಷೇತ್ರವಾಗಿದೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಮುಖ್ಯರಸ್ತೆಯ ಬೆಳಲೆ ಗ್ರಾಮದ ಬಳಿ ಸಾಕಷ್ಟು ವರ್ಷಗಳಿಂದ ನೂರಾರು ಹಳ್ಳಿಗಳ ಜನರ ಕಷ್ಟ ನಿವಾರಣೆ ಮಾಡುವ ಪವಾಡ ಪುರುಷರ ಪುಣ್ಯ ಧಾಮ ಎಂದು ಪ್ರಸಿದ್ಧಿಗೊಂಡಿರುವ ಹಜರತ್ ಸೈದಾನಿ ಬಿ ದರ್ಗಾ ಸರ್ವ ಧರ್ಮೀಯರ ಭಾವೈಕ್ಯತೆಯ ತಾಣವಾಗಿದೆ.
ರಾಜ್ಯದ ಮೂಲೆ ಮೂಲೆಗಳಿಂದ ತಾವು ಬೇಡಿದ ಕಾರ್ಯ ಈಡೇರಿಕೆ ಮತ್ತು ಕಷ್ಟ ಪರಿಹಾರಕ್ಕಾಗಿ ಪ್ರತಿ ಗುರುವಾರ ತಂಡೋಪ ತಂಡವಾಗಿ ಭಕ್ತ ಸಾಗರವೇ ಇಲ್ಲಿಗೆ ಹರಿದು ಬರುತ್ತದೆ. ಈ ಪುಣ್ಯಕ್ಷೇತ್ರಕ್ಕೆ ಭಾವಿಸುವ ಜನ ದೊಡ್ಡ ಕಾಯಿಲೆಗಳಿಂದ ನರಳಿ ಆಸ್ಪತ್ರೆಗಳಲ್ಲಿ ಗುಣಮುಖವಾಗದ ಲೆಕ್ಕವಿಲ್ಲದಷ್ಟು ರೋಗಿಗಳು ಈ ಧಾರ್ಮಿಕ ಪವಾಡ ತಾಣಕ್ಕೆ ಒಂದೇ ಒಂದು ಬಾರಿ ಭೇಟಿ ನೀಡಿ ಪೂಜಾ ಕಾರ್ಯ ನಡೆಸಿ ಪ್ರಾರ್ಥನೆ ಸಲ್ಲಿಸಿದರೆ ಎಂತಹ ಕಟುವಾದ ಕಾಯಿಲೆಯಾದರೂ ಗುಣಮುಖವಾಗುತ್ತದೆ ಎನ್ನುತ್ತಾರೆ ಭಕ್ತ ಸಮೂಹ.
ಇನ್ನು ಮಾಟ ಮಂತ್ರ, ಕುಟುಂಬದಲ್ಲಿ ಬಿರುಕು, ಹಣಕಾಸಿನ ಸಮಸ್ಯೆ ಎಂತಹ ಕಟು ಸಮಸ್ಯೆಗಳಿಂದ ನರಳುತ್ತಿದ್ದರೂ ಈ ಕ್ಷೇತ್ರಕ್ಕೆ ಬಂದು ಒಂದೇ ಒಂದು ಬಾರಿ ದರ್ಶನ ಮಾಡಿದರೆ ನಿವಾರಣೆಯಾಗುತ್ತದೆ ಎನ್ನುತ್ತಾರೆ ಸೇವೆ ಮಾಡಿ ಒಳಿತು ಪಡೆದಿರುವ ಭಕ್ತರು. ಇಲ್ಲಿಗೆ ಪ್ರತಿ ಗುರುವಾರ ಸೇರಿ ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಎಲ್ಲಾ ವರ್ಗದ ಜನರು ವರ್ಗ ಭೇದವಿಲ್ಲದೆ ದಾವಿಸಿ ಪ್ರಾರ್ಥನೆ ಸಲ್ಲಿಸುವ ಜೊತೆಗೆ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಾರೆ.
ಪ್ರತಿ ವರ್ಷ ಅದ್ದೂರಿಯಾಗಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಇಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಧಾರ್ಮಿಕ ಪುಣ್ಯಧಾಮದಲ್ಲಿ ಪ್ರಮುಖ ವಿಷಯದರೆ ಸ್ಪಷ್ಟವಾಗಿ ಅಚ್ಚ ಕನ್ನಡದಲ್ಲಿಯೇ ಪ್ರಾರ್ಥನೆ ಮತ್ತು ಪೂಜಾ ಕೈಂ ಕಾರ್ಯಗಳು ನಡೆಯಲಿವೆ. ನಂಜನಗೂಡು ಕ್ಷೇತ್ರದ ಆಳಿದ ಆಳುವ ಜನಪ್ರತಿನಿಧಿಗಳು ಚುನಾವಣೆಗಳ ಸಂದರ್ಭದಲ್ಲಿ ಈ ಪುಣ್ಯಧಾಮಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದು ರೂಢಿ.