ಡಿ.18 ರಿಂದ ಬೃಹತ್ ಮದ್ಯವರ್ಜನ ಶಿಬಿರ
1 min readಡಿ.18 ರಿಂದ ಬೃಹತ್ ಮದ್ಯವರ್ಜನ ಶಿಬಿರ
ನಂಜನಗೂಡಿನಲ್ಲಿ ಒಂದು ವಾರದ ಕಾಲ ಮದ್ಯವರ್ಜನ ಶಿಬಿರ
ನಂಜನಗೂಡಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ನಿಂದ ಡಿ.18 ರಿಂದ ಡಿ.25ರ ವರೆಗೆ ನಂಜನಗೂಡಿನಲ್ಲಿ ಬೃಹತ್ ಮಧ್ಯವರ್ಜನ ಶಿಬಿರ ಆಯೋಜಿಸಲಾಗಿದೆ ಎಂದು ಮಧ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಎನ್ ಶಿವಯ್ಯ ಅಳಗಂಚಿ ಹೇಳಿದರು.
ನಂಜನಗೂಡು ನಗರದ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಛೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿ ಮಾತನಾಡಿದ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಎನ್ ಶಿವಯ್ಯ ಅಳಗಂಚಿ, ಪ್ರತಿ ಗ್ರಾಮದಲ್ಲಿ ಮದ್ಯವ್ಯಸನಿಗಳಿದ್ದಾರೆ. ಅವರಿಗೆ ಶಿಬಿರ ಮಾಡಿ ಪಾನಮುಕ್ತರನ್ನಾಗಿ ಮಾಡುವುದು ಉದ್ದೇಶವಾಗಿದೆ. ಡಿ.18 ರಿಂದ ಡಿ.25 ರವರೆಗೆ 1901ನೇ ಮಧ್ಯವರ್ಜನ ಶಿಬಿರವನ್ನು ನಂಜನಗೂಡು ಪಟ್ಟಣದ ಜೆಎಸ್‌ಎಸ್ ಮಂಗಳ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದರು.
ಈ ಕಾರ್ಯಕ್ರಮಕ್ಕೆ ನಂಜನಗೂಡು ಶಾಸಕರಾದ ದರ್ಶನ್ ಧ್ರುವನಾರಾಯಣ್ , ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ನಂಜನಗೂಡಿನಲ್ಲಿ ಈಗಾಗಲೇ 6 ಮಧ್ಯವರ್ಜನ ಶಿಬಿರಗಳನ್ನು ಮಾಡಿದ್ದು, ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಬರುವ ನಿರೀಕ್ಷೆ ಇದೆ. ಸಲಹೆ ಸೂಚನೆಗಳನ್ನು ನೀಡಲು ವಿಶೇಷ ವೈದ್ಯರ ತಂಡ ಆಗಮಿಸುತ್ತಿದೆ. ಶಿಬಿರಕ್ಕೆ ಬರುವ ಎಲ್ಲರಿಗೂ ಒಂದು ವಾರ ಮೂಲಭೂತ ಸೌಕರ್ಯ ಸೇರಿದಂತೆ ಊಟ, ತಿಂಡಿ, ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಕೆ.ಧರ್ಮರಾಜ್, ಮೈಸೂರು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಡಿ.ಜಿ ಸೋಮಶೇಖರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಲತಾ ಮುದ್ದು ಮೋಹನ್, ಎನ್.ಶಶಿಕಲಾ ಗಿರೀಶ್, ವಲಯ ಮೇಲ್ವಿಚಾರಕಿ ಪ್ರತಿಮಾ, ಉದ್ಯಮಿ ಕೆ.ಎಸ್ ಮಣಿಕಂಠ ಇದ್ದರು.