ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ. 11 ದಿನದಲ್ಲಿ 7ನೇ ಪ್ರಕರಣ
1 min readಚಿರತೆ ದಾಳಿಗೆ ರಾಜಸ್ಥಾನದ ಉದಯಪುರದಳ್ಳಿ ಚಿರತೆ ದಾಳಿ ಮತ್ತೆ ಮುಂದುವರೆದಿದೆ, ಸೋಮವಾರ (ಸೆ.30) ಮುಂಜಾನೆ ಇಲ್ಲಿನ ದೇವಾಲಯದ ಅರ್ಚಕರೊಬ್ಬರನ್ನು ಚಿರತೆ ಹೊತ್ತೊಯ್ದಿದೆ ಎಂದು ಹೇಳಲಾಗಿದ್ದು ಅವರ ಮೃತದೇಹ ಪಕ್ಕದ ಕಾಡಿನಲ್ಲಿ ಪತ್ತೆಯಾಗಿದೆ.
ಇದರೊಂದಿಗೆ ಕಳೆದ ಹನ್ನೊಂದು ದಿನದಲ್ಲಿ ಏಳು ಜನರ ಮೇಲೆ ಚಿರತೆ ದಾಳಿ ನಡೆಸಿರುವುದಾಗಿ ವರದಿಯಾಗಿದ್ದು ಗ್ರಾಮದ ಜನ ಭಯಭೀತರಾಗಿದ್ದಾರೆ.
ಗ್ರಾಮದಲ್ಲಿ ಚಿರತೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೆ.24ರಂದು ಚಿರತೆ ಹಿಡಿಯುವ ಅಭಿಯಾನ ಆರಂಭಿಸಿದ್ದು ಇಲ್ಲಿಯವರೆಗೆ ನಾಲ್ಕು ಚಿರತೆಗಳನ್ನು ಸೆರೆ ಹಿಡಿಯಲಾಗಿದ್ದು, ಅವುಗಳನ್ನು ಉದಯಪುರದ ಸಜ್ಜನ್ಗಢ ಜೈವಿಕ ಉದ್ಯಾನವನಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಆದರೆ ಈ ನಡುವೆ ಮತ್ತೆ ಗ್ರಾಮದಲ್ಲಿ ದಾಳಿ ಮುಂದುವರಿದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಿದ್ದಾರೆ.
ಹೆಚ್ಚುತ್ತಿರುವ ಚಿರತೆ ದಾಳಿಯಿಂದ ಸ್ಥಳೀಯರು ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಇದೇ ಕಾರಣದಿಂದ ಈ ಪ್ರದೇಶದ ಕೆಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ, ಜನರು ಸಂಜೆಯ ಬಳಿಕ ಮನೆಯಿಂದ ಹೊರಬರದಂತೆ ಒಂದು ವೇಳೆ ಬರುವುದಿದ್ದರೂ ಗುಂಪು ಗುಂಪಾಗಿ ಹೊರಗೆ ಹೋಗುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಅರಣ್ಯ ಪ್ರ್ರದೇಶಕ್ಕೆ ಒಂಟಿಯಾಗಿ ಹೋಗಬೇಡಿ ಮತ್ತು ಜಾನುವಾರುಗಳನ್ನು ಮೇಯಿಸುವಾಗ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸ್ಥಳೀಯರಿಗೆ ಮನವಿ ಮಾಡಿದೆ..
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday