ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ಚಿರತೆ ದಾಳಿ
1 min readತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ಚಿರತೆ ದಾಳಿ
ಇಬ್ಬರ ಮೇಲೆ ದಾಳಿ ನಡೆಸಿ, ತೀವ್ರ ಗಾಯಗೊಳಿಸಿದ ಚಿರತೆ
ಚಿರತೆ ದಾಳಿಯಿಂದ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ತೋಟದಲ್ಲಿ ಕೆಲಸ ಮಾಡುತತಿದ್ದ ರೈತರ ಮೇಲೆ ಎರಡು ಚಿರತೆಗಳು ಏಕಾಏಕಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ರೈತರಲ್ಲಿ ಒಬ್ಬರಿಗೆ ತೀವ್ರ ಗಾಯಗಳಾಗಿದ್ದರೆ ಮತ್ತೊಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಬೆಳ್ಳಂ ಬೆಳಗ್ಗೆ ನಡೆದ ಚಿರತೆಗಳ ದಾಳಿಯಿಂದ ಅರಸೀಕೆರೆ ವ್ಯಾಪ್ತಿಯ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಹಾಸನ ಜಿ¯್ಲೆ ಅರಸೀಕೆರೆ ತಾಲೂಕಿನ ಬೆಂಡೆಕೆರೆ ಗ್ರಾಮದ ಕರಿಕಲ್ ಗುಡ್ಡದ ಬಳಿ ರೈತರು ಬೆಳಗಿನ ಜಾವ ತೋಟದಲ್ಲಿ ಟೊಮೇಟೋ ಬೆಳೆಗೆ ಔಷಧಿ ಸಿಂಪಡಿಸಲು ಹೋದ ವೇಳೆ ಎರಡು ಚಿರತಿಗೆಳು ದಾಳಿ ನಡೆಸಿವೆ. ರೈತರಾದ ಮಂಜುನಾಥ್ ಹಾಗೂ ಬಸವರಾಜ್ ಎಂಬುವರ ಮೇಲೆ ಪೊದೆ ಗಳಲ್ಲಿ ಅಡಗಿ ಕುಳಿತಿದ್ದ ಎರಡು ಚಿರತೆಗಳು ಏಕಾಏಕಿ ದಾಳಿ ಮಾಡಿವೆ. ಮಂಜುನಾಥ್ ಎಂಬುವರ ತಲೆಗೆ ಹಾಗೂ ಕೈಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಬಸವರಾಜ್ ಎಂಬುವರಿಗೆ ಅಲ್ಪಸಲ್ಪ ಗಾಯಗಳಾಗಿವೆ.
ಕೈಯಲ್ಲಿದ್ದ ಔಷಧಿ ಸಿಂಪಡಿಸುವ ಪ್ಲಾಸ್ಟಿಕ್ ಕ್ಯಾನುಗಳಿಂದ ಚಿರತೆಗಳ ಮೇಲೆ ಬೀಸಿದ್ದು, ಚಿರತೆಗಳು ಇಬ್ಬರು ರೈತರಿಗೂ ಗಾಯಗೊಳಿಸಿ ಪರಾರಿಯಾಗಿವೆ. ನಂತರ ಇಬ್ಬರ ಅರಚಾಟ ಕೇಳಿದ ಅಕ್ಕಪಕ್ಕ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿಬಂದು ಗಾಯಗೊಂಡಿದ್ದವರನ್ನು ಜೈ ಚಾಮರಾಜೇಂದ್ರ ಸಾರ್ವಜನಿಕರ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.