ಮಾವುತರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
1 min readಮತ್ತೆ ಬೆದರಿದ ದಸರಾ ಆನೆ!.
ಶ್ರೀರಂಗ ಪಟ್ಟಣದ ಬನ್ನಿ ಮಂಟಪದ ಬಳಿ ಘಟನೆ
ಮಾವುತರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಈ ಬಾರಿಯ ದಸರಾದಲ್ಲಿ ಭಾಗವಹಿಸಿರುವ ಆನೆ ಲಕ್ಷ್ಮೀ ಇಂದೂ ಬೆದರಿ ಅಡ್ಡಾದಿಡ್ಡಿಯಾಗಿ ಓಡಿದ ಘಟನೆ ನಡೆದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ದಸರಾ ಆನೆ ಆನೆ ಲಕ್ಷ್ಮೀ ಬೆದರಿ ಮನಸ್ಸೋ ಇಚ್ಛೆ ಅಡ್ಡಾದಿಡ್ಡಿ ಓಡಲು ಶುರು ಮಾಡಿದ ಪರಿಣಾಮ ದಸಾರದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಆನೆಯ ರಂಪಾಟಕ್ಕೆ ಜನ ದಿಕ್ಕಾಪಾಲಾಗಿ ಓಡಿದ ಘಟನೆಯೂ ನಡೆಯಿತು. ಮಾವುತರು, ಕಾವಾಡಿಗರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.
ಶ್ರೀರ0ಗಪಟ್ಟಣ ದಸರಾ ಮಹೋತ್ಸವಕ್ಕೆ 3 ದಸರಾ ಆನೆಗಳು ಆಗಮಿಸಿವೆ. ನಿನ್ನೆಯಷ್ಟೇ ಶ್ರೀರಂಗಪಟ್ಟಣಕ್ಕೆ ಆಗಮಿಸಿರುವ 3 ಆನೆಗಳನ್ನು ಶ್ರೀರಂಗ ಪಟ್ಟಣದ ದಸರಾ ಕಾರ್ಯಕ್ರಮದಲ್ಲಿ ನಿಯೋಜಿಸಲಾಗಿದೆ. ಇಂದು ಬನ್ನಿಮಂಟಪ ಬಳಿ ಆನೆಗಳು ತೆರಳುತ್ತಿರುವಾಗ ಲಕ್ಷ್ಮಿ ಆನೆ ಬೆದರಿದ ಪರಿಣಾಮ ತೀವ್ರ ಆತಂಕ ಲೃಷ್ಟಿಯಾಗಿತ್ತು.
ಶ್ರೀರಂಗಪಟ್ಟಣ ಮಿನಿ ವಿಧಾನಸೌದ ಬಳಿ ಲಕ್ಷ್ಮೀ ಆನೆ ಬೆದರಿದ ಕಾರಣ ಆತಂಕ ನಿರ್ಮಾಣವಾಗಿದ್ದು, ಬನ್ನಿಮಂಟಪದಿ0ದ ರಂಗನಾಥ ಮೈದಾನದವರೆಗೆ ಅಂಬಾರಿ ಜೊತೆ ಲಕ್ಷ್ಮಿ ಆನೆ ಹೆಜ್ಜೆ ಹಾಕಲಿದೆ. ಮರದ ಅಂಬಾರಿಯನ್ನು ಮಹೇಂದ್ರ ಆನೆ ಹೊರಲಿದೆ. ಮಹೇಂದ್ರ ಆನೆಗೆ ಕುಮ್ಕಿ ಆನೆಯಾಗಿ ಲಕ್ಷ್ಮೀ, ಹಿರಣ್ಯ ಆನೆಗಳು ಹೆಜ್ಜೆ ಹಾಕಲಿವೆ.
ಆನೆಗಳಿಗೆ ಚಿತ್ರಾಲಂಕಾರದ ಬಳಿಕ ಬೆದರಿದ ಹಿರಣ್ಯ ಆನೆ ಅಡ್ಡಾದಿಡ್ಡಿ ಓಡಾಡಿತು. ಇದನ್ನು ಕಂಡ ತಕ್ಷಣ ಎಚ್ಚೆತ್ತ ಮಾವುತರು, ಕಾವಾಡಿಗರು ಆನೆಯನ್ನು ನಿಯಂತ್ರಿಸುವ ಮೂಲಕ ಭಾರೀ ಅನಾಹುತ ತಪ್ಪಿದಂತಾಗಿದೆ. ಆನೆಯ ರಂಪಾಟಕ್ಕೆ ಜನರು ದಿಕ್ಕಾಪಾಲಾಗಿ ಓಡಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾವುತರ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ನಡೆದಿಲ್ಲ.