ಚಿಕ್ಕಬಳ್ಳಾಪುರದಲ್ಲಿ ಅದ್ದೂರಿ ಕನ್ನಡ ರಾಜೋತ್ಸವ
1 min readಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ
ಜಿಲ್ಲಾ ಮಟ್ಟದ ಪ್ರಶಸ್ತಿ ವಿತರಣೆಯಲ್ಲಿ ಲೋಪ ಸರಿಪಡಿಸಲು ಕ್ರಮ
ಮುಂದಿನ ವರ್ಷದಿಂದ ಸಮಿತಿ ರಚಿಸಲು ನಿರ್ಧರ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಭರವಸೆ
69ನೇ ಕನ್ನಡ ರಾಜ್ಯೋತ್ಸವವನ್ನು ಇಂದು ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ನುಡಿಗಳನ್ನು ಆಡಿದರು. ಅಲ್ಲದೆ ಜಿಲ್ಲಾ ಮಟ್ಟದ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಲೋಪ ಆಗುತ್ತಿರುವುದನ್ನು ಒಪ್ಪಿಕೊಂಡ ಸಚಿವರು ಮುಂದಿನ ವರ್ಷದಿಂದ ಸಮಿತಿ ರಚಿಸಿ, ಲೋಪ ಸರಿಪಡಿಸುವ ಭರವಸೆ ನೀಡಿದರು.
ಹೌದು, 69ನೇ ಕನ್ನಡ ರಾಜ್ಯೋತ್ಸವ ಗಡಿ ಜಿಲ್ಲೆ ಚಿಕ್ಕಬಳ್ಳಾಪುರದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನೆರವೇರಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ `ಧ್ವಜಾರೋಹಣ ನೆರವೇರಿಸಿ `ಧ್ವಜ ವಂದನೆ ಸ್ವೀಕರಿಸಿದರು. ಗೃಹ ರಕ್ಷಕ ದಳ, ಜಿಲ್ಲಾ ಪೊಲೀಸ್ ಇಲಾಖೆ, ವಿವಿಧ ಶಾಲಾ ಮಕ್ಕಳಿಂದ ಕಾರ್ಯಕ್ರಮದಲ್ಲಿ ಪಥ ಸಂಚಲನ ಆಯೋಜಿಸಲಾಗಿತ್ತು. ಕನ್ನಡ ನಾಡಿನ ಹಿರಿಮೆಯ ಬಗ್ಗೆ ಗಣ್ಯರು ವೇದಿಕೆಯಲ್ಲಿ ಹಂಚಿಕೊ0ಡರು.
ಕಾರ್ಯಕ್ರಮದ ನಂತರ ಮಾಧ್ಯಮದ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ರಾಜ್ಯದ ಹೆಮ್ಮೆಯ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರೋದು ಹೆಮ್ಮೆಯ ವಿಚಾರವಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾಗಿರುವ ರಂಗಮ0ದಿರವನ್ನು ಕನ್ನಡ ಭವನವಾಗಿ ಮರು ನಾಮಕರಣ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆ ಸ್ಥಗಿತಗೊಳಿಸುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉಥ್ತರಿಸಿದ ಸಚಿವರು, ಲೋಕಸಭೆ ಚುನಾವಣೆ ವೇಳೆ ಕೆಲವರು ತಾವು ಟಿಕೆಟ್ ಖರೀದಿಸುವ ಶಕ್ತಿ ಇದೆ. ಹಾಗಾಗಿ ಈ ಉಚಿತ ಬಸ್ ಸೇವೆಯ ಅಗತ್ಯವಿಲ್ಲ ಎಂದು ಹೇಳಿದ್ದರು. ಅದನ್ನು ಉಳ್ಲೇಖ ಮಾಡಿ ಡಿಸಿಎಂ ಡಿ,ಕೆ. ಶಿವಕುಮಾರ್ ಅವರು ಹೇಳಿದ್ದಾರೆ ಹೊರತು ಶಕ್ತಿ ಯೋಜನೆ ಕೈ ಬಿಡುವುದಾಗಿ ಹೇಳಿಲ್ಲ ಎಂದು ಸಮರ್ಥಿಸಿಕೊಂಡರು.
ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ವಿರೋಧ ಪಕ್ಷದಿಂದ ಮಾಡಲಾಗುತ್ತಿದೆ, ಉಪ ಮುಖ್ಯಮಂತ್ರಿಗಳ ಹೇಳಿಕೆಯನ್ನು ತಿರುಚಲಾಗಿದೆ. ಸರ್ಕಾರದ ಮುಂದೆ ಯಾವುದೇ ಗ್ಯಾರೆಂಟಿ ಸ್ಥಗಿತಗೊಳಿಸುವ ಯೋಚನೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ತಾಂತ್ರಿಕ ಶಿಕ್ಷಣ ಕನ್ನಡದಲ್ಲಿ ಪಡೆಯಲು ವಿದ್ಯಾರ್ಥಿಗಳ ಆಸಕ್ತಿ ತೋರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಾಗತಿಕ ವಿಚಾರದಲ್ಲಿ ಕನ್ನಡದಲ್ಲಿ ಉನ್ನತ ಶಿಕ್ಷಣ ಮಾಡಿದರೆ ಅವಕಾಶ ಕಡಿಮೆ ಎಂಬ ಆತಂಕವಿದೆ, ಹಾಗಾಗಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕಡಿಮೆ ಆಗಿದೆ ಎಂದು ಹೇಳಿದರು.
ಇನ್ನು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಲೋಪಗಳಾಗಿವೆ. ಮಹಿಳೆಯರಿಗೆ ಅವಕಾಶ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿರುವ ಬಗ್ಗೆ ಸಚಿವರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ವಿಚಾರದಲ್ಲಿ ಲೋಪಗಳಾಗಿರುವ ಬಗ್ಗೆ ಕಳೆದ ವರ್ಷವೇ ಆರೋಪಗಳು ಕೇಳಿಬಂದಿತ್ತು. ಈ ಬಾರಿ ಮಹಿಳೆಯರಿಗೂ ಅವಕಾಶವಾಗಿಲ್ಲ, ಅರ್ಜಿ ಹಾಕಿದವರನ್ನು ಮಾತ್ರ ಆಯ್ಕೆ ಮಾಡುವ ಸ್ಥಿತಿ ಈಗ ಇದೆ. ಕೆಲವರು ಬೇರೆ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗಾಗಿ ಇತರರಿಗೆ ಅವಕಾಶ ಸಿಗುತ್ತಿಲ್ಲ ಎಂದು ಸಚಿವರು ಒಪ್ಪಿಕೊಂಡರು.
ಹಾಗಾಗಿ ಮುಂದಿನ ವರ್ಷದಿಂದ ಇಂತಹ ಸಮಸ್ಯೆ ಆಗದಂತೆ ಪ್ರಶಸ್ತಿ ಸಮಿತಿಯೊಂದನ್ನು ರಚಿಸಿ, ರಾಜ್ಯ ಪ್ರಶಸ್ತಿ ಮಾದರಿಯಲ್ಲಿಯೇ ಎಲ್ಲ ಕ್ಷೇತ್ರಗಳನ್ನು ನಿಗಧಿ ಮಾಡಲು ಕ್ರಮ ವಹಿಸುವುದಾಗಿ ಹೇಳಿದರು. ಇದರಿಂದ ಎಲ್ಲ ಕ್ಷೇತ್ರಗಳ ಸಾಧಕರಿಗೆ ಅವಕಾಶ ಸಿಗಲಿದ್ದು, ಇಂತಹ ಆರೋಪಗಳಿಗೂ ಅಂತ್ಯ ಹಾಡಿದಂತಾಗುತ್ತದೆ ಎಂದು ಹೇಳಿದರು.
ಇನ್ನು ಕ್ರೀಡಾಂಗಣ ಅಭಿವೃದ್ಧಿಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇಡೀ ರಾಜ್ಯದಲ್ಲಿ ಕ್ರೀಡಾ ಇಲಾಖೆಗೆ ಮೀಸಲಾಗಿರುವ ಅನುದಾನ ಕೇವಲ 100 ಕೋಟಿ ಮಾತ್ರ, ಚಿಕ್ಕಬಳ್ಳಾಪುರ ಕ್ರೀಡಾಂಗಣ ಅಭಿವೃದ್ಧಿಗೆ 70 ಕೋಟಿ ಅನುದಾನದ ಅಗತ್ಯವಿದ್ದು, ಕ್ರೀಡಾ ಇಲಾಖೆಗೆ ಮೀಸಲಾದ ಒಟ್ಟು ಅನುದಾನ 100 ಕೋಟಿಯಲ್ಲಿ 70 ಕೋಟಿ ಕೇಳಲು ಸಾಧ್ಯವಿಲ್ಲ. ಹಾಗಾಗಿ ಅನುದಾನ ಕಡಿಮೆ ಸಿಗಲಿದೆ, ಮುಂದಿನ ದಿನಗಳಲ್ಲಿ ಈ ಕುರಿತು ಚಿಂತನೆ ನಡೆಸಲಾಗುವುದು ಎಂದರು.