ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ 78ನೇ ಸ್ವಾತಂತ್ರ್ಯ ದಿನಾಚರಣೆ

1 min read

ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ 78ನೇ ಸ್ವಾತಂತ್ರ್ಯ ದಿನಾಚರಣೆ
ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ
ಪೊಲೀಸ್ ಇಲಾಖೆ, ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ
ಸರ್ಕಾರದ ಸಾಧನೆಗಳನ್ನು ಸಾರಿದ ಸಚಿವ ಸುಧಾಕರ್

ಆಕರ್ಷಕ ಮಕ್ಕಳ ಪಥಸಂಚಲನ, ಗಮನ ಸೆಳೆದ ಪೊಲೀಸ್ ಕವಾಯಿತು, ಶಾಸಕರ ಗೈರು, ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣದ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆ ಇಂದು ಕಳೆಗಟ್ಟಿತು. ಚಿಕ್ಕಬಳ್ಳಾಪುರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮುಗಿಲು ಮುಟ್ಟಿದ್ದರೆ, ಸಚಿವರಿಂದ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸುದೀರ್ಘ ಭಾಷಣ ನೆರೆದಿದ್ದವರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಭಾರತಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 78 ವರ್ಷಗಳಾಯಿತು. ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಹಿರಿಯ ಸೇನಾನಿಗಳನ್ನು ನೆನೆಯುವ ಉದ್ಧೇಶದಿಂದ ಶಾಲಾ ಮಕ್ಕಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದಲ್ಲಿ ಕಂಗೊಳಿಸಿದರು. ಸುಡುವ ಬಿಸಿಲಿನ ನಡುವೆಯೂ ಜಗ್ಗದ ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸುವ ಮೂಲಕ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರೆ, ಪೊಲೀಸ್ ಇಲಾಖೆ, ಗೃಹರಕ್ಷಕ ದಳ ಸೇರಿದಂತೆ ಇತರೆ ಇಲಾಖೆಗಳು ಶಿಸ್ತು ಬದ್ಧವಾಗಿ ಕವಾಯಿತು ನಡೆಸಿ ಧ್ವಜ ವಂದನೆ ಸಲ್ಲಿಸಿದವು.

ನಂತರ ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ದೇಶಕ್ಕೆ ಸ್ವಾತಂತ್ರ್ಯತರಲು ಮಹಾತ್ಮಗಾಂಧೀಜಿ, ನೇತಾಜಿ ಸುಭಾಷ್‌ಚಂದ್ರಬೋಸ್, ಬಾಲಗಂಗಾಧರತಿಲಕ್, ಲಾಲಾ ಲಜಪತ್‌ರಾಯ್, ಭಗತ್‌ಸಿಂಗ್, ಚಂದ್ರಶೇಖರ್‌ಅಜಾದ್ ಮುಂತಾದವರು ತಮ್ಮ ತನು, ಮನ, ಧನಗಳನ್ನು ಮಾತ್ರವಲ್ಲದೆ ಇಡೀ ಜೀವನವನ್ನೇ ಅರ್ಪಿಸಿದ್ದಾರೆ ಎಂದರು.

ಬ್ರಿಟೀಷ್ ಸಾಮ್ರಾಜ್ಯಶಾಹಿ ವಿರುದ್ಧ ರಾಜ ಮಹಾರಾಜರು ಹೋರಾಟ ನಡೆಸಿದ್ದಾರೆ. ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿಚೆನ್ನಮ್ಮ, ಉಲ್ಲಾಳದ ರಾಣಿ ಅಬ್ಬಕ್ಕದೇವಿ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ ಮುಂತಾದ ಅಸಂಖ್ಯಾತ ಅಪ್ಪಟ ದೇಶಪ್ರೇಮಿಗಳು, ಮಹಿಳಾ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕೆ ತಮ್ಮ ಪ್ರಾಣ ನೀಡಿದ್ದಾರೆ. ಅವರೆಲ್ಲರ ಶ್ರಮದಿಂದಾಗಿ ಇಂದು ಗುಲಾಮಗಿರಿ ಸಂಸ್ಕೃತಿಯಿ0ದ ಹೊರಬಂದಿದ್ದೇವೆ ಎಂದರು.

ಸ್ವಾತಂತ್ರ್ಯ ಸಂಗ್ರಾಮದ ಆಂದೋಲನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ್ದು, ಕರ್ನಾಟಕದ ಜಲಿಯನ್ ವಾಲಾಬಾಗ್ ಎಂಬ ಖ್ಯಾತಿಯ ವಿದುರಾಶ್ವತ್ಥದಲ್ಲಿ 1938ರ ಏಪ್ರಿಲ್ 25 ರಂದು ನಡೆದ ಧ್ವಜ ಸತ್ಯಾಗ್ರಹ ಹೋರಾಟದಲ್ಲಿ ಜಿಲ್ಲೆಯ 48ಮಂದಿ ಗಾಯಗೊಂಡರು. 32ಕ್ಕೂ ಹೆಚ್ಚು ಜನ ಸ್ವಾತಂತ್ರ್ಯ ಸೇನಾನಿಗಳು ಪೊಲೀಸರಗುಂಡಿಗೆ ಬಲಿಯಾಗಿ ಹುತಾತ್ಮರಾಗಿರುವುದು ಚರಿತ್ರೆಯ ಪುಟಗಳಲ್ಲಿ ದಾಖಲೆಯಾಗಿದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆ ಅನೇಕ ಧೀಮಂತ ವ್ಯಕ್ತಿಗಳಿಗೆ ಜನ್ಮ ನೀಡಿದ್ದು, ಸರ್ ಎಂ. ವಿಶ್ವೇಶ್ವರಯ, ಡಾ. ಸಿಎನ್‌ಆರ್ ರಾವ್ ಅವರು ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿರುವುದು ಜಿಲ್ಲೆಯೇ ಹೆಮ್ಮೆ. ಗೂಳೂರಿನ ಡಾ.ಜ.ಚ.ನಿ ಮತ್ತು ಕೈವಾರದ ಯೋಗಿ ನಾರೇಯಣ ಯತೀಂದ್ರರು ಜನಪರ ಸಂತರಾಗಿದ್ದರು. ವಿಶ್ವ ವಿಖ್ಯಾತ ಎಂಜಿನಿಯರ್ ಸರ್. ಎಂ ಶ್ವೇಶ್ವರಯ್ಯ, ಖ್ಯಾತ ಶ್ರೇಷ್ಠ ರಸಾಯನ ಶಾಸ್ತ ಜ್ಞಾನಿ ಡಾ. ಸಿ.ಎನ್.ಆರ್.ರಾವ್, ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ ಜಿಲ್ಲೆಯ ಪ್ರತಿಭೆ`ೆಗಳಾಗಿದ್ದಾರೆ ಎಂದರು.

ನ0ದಿಬೆಟ್ಟದಲ್ಲಿ ಪ್ರವಾಸಿಗರ ಆಕರ್ಷಣೆ ಮತ್ತು ಅನುಕೂಲಕ್ಕಾಗಿ ರೋಪ್ ವೇ ನಿರ್ಮಾಣ ಯೋಜನೆ ಕೈಗೊಳ್ಳಲು ಐಡೆಕ್ ಸಂಸ್ಥೆಗೆ ಹೊಣೆಗಾರಿಕೆ ನೀಡಿದ್ದು, ಇದಕ್ಕೆ ಪೂರಕವಾದ ಮೂಲ ಸೌಕರ್ಯಗಳ ಕಾಮಗಾರಿಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಮೂಡಲಿದೆ ಎಂದು ಭರವಸೆ ನೀಡಿದರು.

ಜಿಲ್ಲೆ ಅಭಿವೃದ್ಧಿಯಲ್ಲಿ ಕೈಗಾರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಕೆಐಎಡಿಬಿಯಿಂದ ಗೌರಿಬಿದನೂರು ತಾಲ್ಲೂಕಿನಲ್ಲಿ 474.18 ಎಕರೆ, ಚಿಂತಾಮಣಿ ತಾಲ್ಲೂಕಿನಲ್ಲಿ 564.14 ಎಕರೆ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2823.04 ಎಕರೆ ಸೇರಿ ಒಟ್ಟು 3861.36 ಎಕರೆ ವಿಸ್ತೀರ್ಣದ ಜಮೀನು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲು ಭೂ-ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ ಈ ಹಿಂದೆ ಪ್ರಾಥಮಿಕ ಅಧಿಸೂಚನೆಯಾಗಿದ್ದ 809.31 ಎಕರೆ ಸ್ತೀರ್ಣದ ಜಮೀನು ಅಂತಿಮ ಅಧಿಸೂಚನೆ ಹೊರಡಿಸಲು ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ 471.27 ಎಕರೆ ವಿಸ್ತೀರ್ಣದಲ್ಲಿ ಶೀಘ್ರದಲ್ಲಿಯೇ ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಬೆ0ಗಳೂರು ನಗರದ ಹೆಬ್ಬಾಳ- ನಾಗವಾರ ವ್ಯಾಲಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯಿಂದ ಪ್ರಸ್ತುತ ಜಿಲ್ಲೆಯ ೪೪ ಕೆರೆಗಳಿಗೆ ನೀರು ಹರಿಸಲಾಗಿದೆ. ಬಾಗೇಪಲ್ಲಿ ತಾಲ್ಲೂಕಿನ 24 ಕೆರೆಗಳಿಗೆ ನೀರು ಹರಿಸಲು ಪೈಪ್ ಲೈನ್ ಅಳವಡಿಸುವ ಕಾಮಗಾರಿ ಹಾಗೂ ಪಂಪ್‌ಹೌಸ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

 

About The Author

Leave a Reply

Your email address will not be published. Required fields are marked *