ಸಾವಯವ ಕೃಷಿಕ ವೆಂಕಟಸ್ವಾಮಿರೆಡ್ಡಿ ಜಮೀನಿನಲ್ಲಿ ಕ್ಷೇತ್ರೋತ್ಸವ
1 min readಸಾವಯವ ಕೃಷಿಕ ವೆಂಕಟಸ್ವಾಮಿರೆಡ್ಡಿ ಜಮೀನಿನಲ್ಲಿ ಕ್ಷೇತ್ರೋತ್ಸವ
ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದ ಜಮೀನು
ಆಹಾರ ಭದ್ರತೆ ಯಶಸ್ವಿಯಾಗಿ ಸಾಧಿಸಿರುವ ನಾವು ಪೌಷ್ಠಿಕ ಭದ್ರತೆ ಹೊಂದಿಲ್ಲ ಎಂದು ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆ, ಸಮರ್ಥ ಬೆಳೆಗಳ ವಿಭಾಗದ ವಿನಿ ಡಾ. ಆನಂದ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದ ಸಾವಯವ ಕೃಷಿಕ ವೆಂಕಟಸ್ವಾಮಿರೆಡ್ಡಿ ಅವರು ಬೆಳೆದಿರುವ ಬೀಜದ ದಂಟಿನ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಸಮರ್ಥ ಬೆಳೆಗಳ ವಿಭಾಗದ ಡಾ. ಆನಂದ್, ತಿನ್ನಲು ಯೋಗ್ಯವಾದ ೭ ಸಾವಿರ ಬೆಳೆಗಳಿದ್ದರೂ ದೇಶದಲ್ಲಿ ಬೆರಳೆಣಿಕೆಯಷ್ಟು ಬೆಳೆಗಳನ್ನು ಮಾತ್ರ ಅಂಟಿಕೊಡಿವೆ. ಬೆಳೆಗಳ ವೈವಿಧ್ಯತೆ ಕಡಿಮೆಯಾಗಿರುವುದರಿಂದ, ಪ್ರೊಟೀನ್ ಹಾಗೂ ಪೋಷಕಾಂಶಗಳು ಕೊರತೆಯಾಗಿವೆ. ಆಹಾರದ ಮೂಲಕ ಇವನ್ನು ಹೊಂದಲು ಕೆಲವಾರು ತಳಿಗಳನ್ನು ಪರಿಚಯಿಸಲಾಗುತ್ತಿದೆ ಎಂದರು.
ಭವಿಷ್ಯದ ಬೆಳೆಗಳು ಎಂದು ಕೆಲ ಸಮರ್ಥ ಬೆಳೆಗಳನ್ನು ಗುರುತಿಸಿ, ಜಿಕೆವಿಕೆ ಮೂಲಕ ಪ್ರಗತಿಪರ ರೈತರಿಗೆ ಪರಿಚಯಿಸುತ್ತಿದೆ. ಅದರ ಮೂಲಕ ವೆಂಕಟಸ್ವಾಮಿರೆಡ್ಡಿ ಅವರ ಒಂದೂವರೆ ಎಕರೆ ಹೊಲದಲ್ಲಿ ಬೀಜದ ದಂಟು ಎನ್ನುವ ಈ ಆಹಾರ ಧಾನ್ಯವನ್ನು ಬೆಳೆಯಲಾಗಿದೆ. ಹಿಂದಿಯಲ್ಲಿ ರಾಜಗೀರ, ರಾಮ್ ದಾನ್, ಇಂಗ್ಲಿಷಿನಲ್ಲಿ ಗ್ರೇನ್ ಅಮರಾಂಥ್ ಎನ್ನುತ್ತಾರೆ. ಸಾಮಾನ್ಯವಾಗಿ ದಂಟಿನ ಸೊಪ್ಪನ್ನು ತರಕಾರಿಯಾಗಿ ಬಳಕೆ ಮಾಡಲಾಗುತ್ತಿದೆ. ಆದರೆ, ಜಿಕೆವಿಕೆ ಬಿಡುಗಡೆಗೊಳಿಸಿರುವ ನೂತನ ದಂಟಿನ ತಳಿಯ ಬೀಜಗಳು ಆಹಾರ ಧಾನ್ಯವಾಗಿ ಬಳಕೆಯಾಗುತ್ತಿದೆ ಎಂದರು.
ಹೇರಳ ಪೌಷ್ಠಿಕಾಂಶ ಒಳಗೊಂಡಿರುವ ದಂಟಿನ ಸೊಪ್ಪಿನ ತಳಿ ರಾಗಿ, ಗೋಧಿ, ಸಿರಿಧಾನ್ಯಗಳಿಗಿಂತ ಶೇ ೧೫ರಷ್ಟು ಹೆಚ್ಚು ಪೌಷ್ಟಿಕಾಂಶವನ್ನ ಒಳಗೊಂಡಿದೆ. ೯೦ ರಿಂದ ೯೫ ದಿನಗಳಿಗೆ ಕೊಯ್ಲಿಗೆ ಬರುವ ಈ ದಂಟಿನ ಬೀಜದ ತಳಿ ಎಕರೆಗೆ ೬ ರಿಂದ ೭ ಕ್ವಿಂಟಲ್ ಇಳುವರಿ ಕೊಡುತ್ತೆ. ಮಿಶ್ರ ಹಾಗೂ ಅಂತರ ಬೆಳೆಯಾಗಿ ಬೆಳೆಯಬಹುದು ಎಂದು ವಿವರಿಸಿದರು.
ಹೂ ಗೊಂಚಲು ಗೋಳಾಕಾರದ ಕುಂಕುಮ ಮಿಶ್ರಿತ ಹಸಿರು ಬಣ್ಣ ಹೊಂದಿದ್ದು, ರೋಗಗಳು ಮತ್ತು ಕೀಟಗಳಿಗೆ ನಿರೋಧಕ ಶಕ್ತಿ ಹೊಂದಿರುವುದು ಈ ತಳಿಯ ವಿಶೇಷತೆ. ಪ್ರಮುಖ ಆಹಾರ ಧಾನ್ಯವಾಗಿ ಈ ದಂಟಿನ ಬೀಜದ ತಳಿ ಬಳಸಬಹುದು. ಕ್ಯಾಲ್ಸಿಯಂ, ಸತು, ಪೋಟ್ಯಾಶಿಯಂ ಮತ್ತು ರಂಜಕದ ಪ್ರಮಾಣ ಇದರಲ್ಲಿ ಹೇರಳವಾಗಿದೆ. ಯಾವುದೇ ಏಕದಳ ಧಾನ್ಯಗಳಲ್ಲಿ ಇರದ ಲೈಸಿನ್ ಎಂಬ ಅಮೈನೋ ಆಮ್ಲ ಈ ಬೀಜದ ದಂಟಿನಲ್ಲಿರುವುದು ವಿಶೇಷವಾಗಿದೆ ಎಂದರು.
ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆ ವಿನಿ ಡಾ. ಗೀತಾ ಎಂ. ಯಂಕAಚಿ ಮಾತನಾಡಿ, ಪೌಷ್ಠಿಕಯುಕ್ತ ಬೆಳೆಗಳನ್ನು ರೈತರು ಬೆಳೆದು ತಾವು ಉಪಯೋಗಿಸಿ, ಹೆಚ್ಚಿನವುಗಳನ್ನು ಮಾರಾಟ ಮಾಡುವ ಮೂಲಕ ಆರ್ಥಿಕ, ಆರೋಗ್ಯ ಮತ್ತು ಸಾಮಾಜಿಕ ಸುಧರಣೆ ಮಾಡಿಕೊಳ್ಳಬಹುದಾಗಿದೆ ಎಂದರು. ಗ್ರಾಮದ ಮಹಿಳೆಯರು ಬೀಜದ ದಂಟಿನಿAದ ತಾಯಾರಿಸಿರುವ ಮಿಕ್ಷರ್, ಲಡ್ಡು, ಚಿಕ್ಕಿ, ಪಕೋಡ, ಚಕ್ಕುಲಿ, ಕಜ್ಜಾಯ, ಶಾವಿಗೆ, ಪಾಯಸ, ಮಾಲ್ಟ್, ಚಟ್ನಿಪುಡಿ, ಚಪಾತಿ ಮಿಕ್ಸ್, ಅಕ್ಕಿ ದೋಸೆ ಮಿಕ್ಸ್, ಬರ್ಫಿ ತಯಾರಿಸಿ ಪ್ರದರ್ಶಿಸಿದರು. ಸಾವಯವ ಕೃಷಿಕ ವೆಂಕಟಸ್ವಾಮಿರೆಡ್ಡಿ, ರೈತರಾದ ಕುಚ್ಚಣ್ಣ ಅನಂತಪದ್ಮನಾ, ನಾಗೇಶ್, ರಾಮಮೂರ್ತಿ, ಮುನಿರಾಜು, ಬಾಲರಾಜು ಇದ್ದರು.