ಗೌರಿಬಿದನೂರು ತಾಲೂಕಿನಾಧ್ಯಂತ ಸಂಭ್ರಮದ ಕ್ರಿಸ್ಮಸ್
1 min readಗೌರಿಬಿದನೂರು ತಾಲೂಕಿನಾಧ್ಯಂತ ಸಂಭ್ರಮದ ಕ್ರಿಸ್ಮಸ್
ಚರ್ಚ್ಗಳಿಗೆ ವಿಶೇಷ ದೀಪಾಲಂಕಾರ
ಕ್ರಿಸ್ಮಸ್ ಹಬ್ಬವನ್ನು ಗೌರಿಬಿದನೂರು ತಾಲೂಕಿನ ಕ್ರೆಸ್ತರು ಸಂಭ್ರಮದೊ0ದಿಗೆ ಆಚರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಮು0ಜಾನೆಯಿ0ದಲೇ ಗೌರಿಬಿದನೂರು ನಗರದ ವಿವಿಧ ಕಡೆಗಳಲ್ಲಿನ ಚರ್ಚ್ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಸಲ್ಲಿಸಿದರು. ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿ ಸಂಭ್ರಮಿಸಿದರು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಗರದ ಸೇರಿದಂತೆ ತಾಲೂಕಿನ ವಿವಿಧ ಚರ್ಚ್ಗಳಿಗೆ ಜಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಚರ್ಚ್ ಆವರಣದಲ್ಲಿ ನಿರ್ಮಿಸಿರುವ ಗೋಧಲಿ ನೋಡುಗರ ಕಣ್ಮನ ಸೆಳಯುತ್ತಿದೆ.
ಅನ್ಯ ಧರ್ಮೀಯರೂ ಚರ್ಚ್ಗೆ ಆಗಮಿಸಿ ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂತು. ನಗರ ಸಮೀಪದ ಉಡಮಲೋಡು ಗ್ರಾಮದ ಬಳಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗೋದಲಿ ನೋಡಲು ನೆರೆಹೊರೆಯವರು ಆಗಮಿಸಿ ಶುಭ ಹಾರೈಸಿದರೆ ತಮ್ಮ ಮನೆಗೆ ಬಂದ ಅತಿಥಿಗಳಿಗೆ ಕೇಕ್ ವಿತರಿಸಿ ಶುಭಕೋರಿದರು. ಹಿಕ್ಲಿಂಗ್ ಸ್ಮಾರಕ ದೇವಾಲಯದ ಫಾದರ್ ಸಂವೇಲ್ ಪ್ರದೀಪ್ ಕುಮಾರ್ ಮಾತನಾಡಿ, ಹಿಂದೂ, ಮುಸ್ಲಿಂ, ಕ್ರೆಸ್ತ ಯಾವುದೇ ಧರ್ಮದ ಹಬ್ದ ಆಚರಣೆ ಕೇವಲ ಒಂದು ಧರ್ಮ ಜಾತಿಗೆ ಸೀಮಿತವಾಗಿದೆ ಪರಸ್ಪರ ನೆರೆಹೊರೆಯವರಲ್ಲ ಸೇರಿ ಆಚರಿಸುವುದರಿಂದ ಹಬ್ಬದ ಸಂಭ್ರಮಗಳು ಹಿಮ್ಮಡಿಗೊಳ್ಳುವುದರ ಜೊತೆಗೆ ಶಾಂತಿ ಸೌಹಾರ್ಧತೆಗೆ ಸಹಕಾರಿಯಾಗುತ್ತದೆ ಎಂದರು.
ಯೇಸು ಕ್ರಿಸ್ತ ಭೂಮಿಗೆ ಸಾಮಾನ್ಯ ಮಾನವನಾಗಿ ಅವತರಿಸಿ ಪ್ರೀತಿಯ ಸಂದೇಶ ಸಾರಿದರು, ಎಲ್ಲರೂ ಏಕಿರೀತಿಯಾಗಿ ಕ್ರಿಸ್ತನನ್ನು ಆರಾಧಿಸುವ ಮೂಲಕ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ತಿಳಿಸಿದರು. ಸಂಭ್ರಮದಲ್ಲಿ ಸಾಲೋಮನ್ ಥಾಮಸ್ ಫಾದರ್, ಕಾರ್ಯದರ್ಶಿ ಹೇಲನ್ ಕುಮಾರಿ, ಖಜಾಂಚಿ ಕಿರಣ್ ಕುಮಾರ್, ಅಭಿಷೇಕ್ ಇದ್ದರು.