ಬಳ್ಳಿಯಲ್ಲಿ ಆಲೂಗಡ್ಡೆ ಬೆಳೆದ ರೈತ
1 min readದ್ರಾಕ್ಷಿ ಚಪ್ಪರದಂತೆ ಸುಂದರವಾಗಿ ಕಾಣುತ್ತಿರುವ ಬಳ್ಳಿಗಳು. ಬಳ್ಳಿಗಳ ತುಂಬ ಕಾಣುತ್ತಿರುವ ಆಲುಗಡ್ಡೆಗಳು.. ಅರೇರೇ ಇದೆನಪ್ಪಾ ಆಲುಗಡ್ಡೆ ಭೂಮಿಯ ಕೆಳಗೆ ಬೆಳೆಯುತ್ತಾರೆ ಅಲ್ವಾ, ಇದೇನಿದು ಬಳ್ಳಿಗಳಲ್ಲಿ ಬೆಳೆದಿದೆ ಎಂದು ಎಲ್ಲರು ಅಚ್ಚರಿಯಾಗಬಹುದು, ಹೌದು . ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ರೈತ ಕುಟುಂಬದ ನಿವಾಸಿ ಎ ಎಂ ತ್ಯಾಗರಾಜು ಎಂಬ ರೈತ ಈ ಹಿಂದೆ ಮೈಸೂರಿನಲ್ಲಿ ನಡೆದ ಗಡ್ಡೆ ಗೆಣಸು ಮೇಳದಲ್ಲಿ ೧ ಕೆಜಿ ಗೆ ೨೦೦ ರೂ ನೀಡಿ ೫ ಕೆಜಿ ತಂದಿದ್ದ ಬಳ್ಳಿ ಆಲೂಗಡ್ಡೆ, ಈಗ ಚಿಕ್ಕಬಳ್ಳಾಪುರದಲ್ಲಿ ಕೈತುಂಬಾ ಆದಾಯ ತರುವಷ್ಟು ಬೆಳೆಯುವಲ್ಲಿ ರೈತ ಯಶಸ್ವಿಯಾಗಿದ್ದಾರೆ. ಕಾಡು ಪ್ರದೇಶದ ಜನ ಪ್ರತಿನಿತ್ಯ ಬಳಸುವ ಬಳ್ಳಿ ಆಲುಗಡ್ಡೆಯನ್ನು ಬೆಳೆಯಲು ಯಾವುದೇ ನೀರಿನ ಅಗತ್ಯವಿಲ್ಲ. ಜೊತೆಗೆ ಯಾವುದೇ ರಾಸಾಯನಿಕ ಇಲ್ಲದೆ ಕೇವಲ ಸ್ವಲ್ಪ ನೀರಿದ್ದರೆ ಸಾಕು, ಉತ್ತಮ ಇಳುವರಿ ಪಡೆಯಲು ಮುಂದಾಗಬಹುದು. ಇದೇ ವಿಚಾರವಾಗಿ ರೈತ ತ್ಯಾಗರಾಜು ಸಾಕಷ್ಟು ಮಾದರಿ ಕೃಷಿಯನ್ನು ಮಾಡಲು ಮುಂದಾಗುತ್ತಿದ್ದಾರೆ. ಈಗಾಗಲೇ ವಿವಿಧ ಬಗೆಯ ಗಡ್ಡೆ ಗೆಣಸು ಬೆಳೆದು ಸೈ ಎನಿಸಿಕೊಂಡಿದ್ದಾರೆ.