ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಹೆತ್ತ ತಾಯಿಯನ್ನೇ ಹೊಡೆದು ಕೊಂದ ಕುಡುಕ ಮಗ

1 min read

ಹೆತ್ತ ತಾಯಿಯನ್ನೇ ಹೊಡೆದು ಕೊಂದ ಕುಡುಕ ಮಗ
ಅಕ್ರಮ ಸಂಭದ ಹಿನ್ನೆಲೆ ಕೊಲೆಯಾಗಿರುವ ಶಂಕೆ
ಆರೋಪಿಯನ್ನು ವಶಕ್ಕೆ ಪಡೆದ ಮಂಚೇನಹಳ್ಳಿ ಪೊಲೀಸರು

ಗೌರಿಬಿದನೂರು ತಾಲ್ಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಮಗ ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿನಿತ್ಯ ಮಗ ಕುಡಿದು ಬಂದು ತಾಯಿ ಜೊತೆ ಗಲಾಟೆ ಮಾಡುತ್ತಿದ್ದು, ತಾಯಿಯ ಅಕ್ರಮ ಸಂಬಧ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತ ಮಹಿಳೆ ರಾಮಾಂಜಿನಮ್ಮ (55) ಎಂದು ತಿಳಿದು ಬಂದಿದ್ದು, ಅವರ 27 ವರ್ಷದ ಮಗ ಚಂದ್ರಶೇಖನಿರ್ ಎಂಬಾತನಿ0ದ ಕೊಲೆಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರಶೇಖರ್ ಕುಡಿತಕ್ಕೆ ದಾಸನಾಗಿದ್ದು, ಗಂಡ ಕಳೆದುಕೊಂಡಿದ್ದ ತಾಯಿಯ ಅಕ್ರಮ ಸಂಬಧ ವಿಚಾರಕ್ಕೆ ಪ್ರತಿ ನಿತ್ಯ ತಾಯಿ-ಮಗನ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಕಳೆದ ರಾತ್ರಿ ಚಂದ್ರಶೇಖರ್ ಕುಡಿದ ಅಮಲಿನಲ್ಲಿ ತಾಯಿಗೆ ಹೊಡೆಯುವುದಾಗಿ ಬೆದರಿಸಿದ್ದು, ಇಬ್ಬರ ನಡುವೆ ಜಗಳ ಶುರುವಾಗಿದೆ. ಇದೇ ವೇಳೆ ಮಗ ಪಕ್ಕದಲ್ಲಿದ್ದ ಕಲ್ಲಿನಿಂದ ತಾಯಿಯ ತಲೆಗೆ ಬಾರಿಸಿದ್ದಾನೆ. ತಲೆಗೆ ಬಿದ್ದ ಗಂಭೀರ ಪೆಟ್ಟಿನಿಂದ ತಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಚಂದ್ರಶೇಖರ್ ಅವರಿಗೆ ಇಬ್ಬರು ಮಕ್ಕಳಿದ್ದು, ಈತನ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ಗಂಡನನ್ನು ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ತಾಯಿ ಮತ್ತು ಮಗನ ನಡುವಿನ ಗಲಾಟೆಗೆ ಅಕ್ರಮ ಸಂಬದ ವಿಚಾರ ಕಾರಣವಾಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ, ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಂದ್ರಶೇಖರ್‌ನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

About The Author

Leave a Reply

Your email address will not be published. Required fields are marked *