ಕಾಯಿಲೆ ಬಂದ ಹಸುವಿಗೆ ಚಿಕಿತ್ಸೆ ನೀಡಲು ವೈದ್ಯರ ತಾತ್ಸಾರ
1 min readಕಾಯಿಲೆ ಬಂದ ಹಸುವಿಗೆ ಚಿಕಿತ್ಸೆ ನೀಡಲು ವೈದ್ಯರ ತಾತ್ಸಾರ
ನಡೆಯಲಾರದ ಹಸುವನ್ನು ಆಂಬ್ಯುಲೆನ್ಸ್ ವೈದ್ಯರಿಗೆ ತೋರಿಸಲು ಸಲಹೆ
ಕುಪಿತಗೊಂಡ ರೈತನಿಂದ ಹಸುವಿನೊಂದಿಗೆ ಆಸ್ಪತ್ರೆಯಲ್ಲಿಯೇ ಪ್ರತಿಭಟನೆ
ಪ್ರತಿಭಟನೆ ಮಾಡಿದ ಕಾರಣಕ್ಕೆ ತನ್ನ ಜಾನುವಾರುಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ, ಜಾನುವಾರು ಕಾಲು ಸರಿ ಹೋಗುವವರಿಗೂ ಪಶು ಆಸ್ಪತ್ರೆ ಆವರಣದಲ್ಲಿಯೇ ಹಗಲುರಾತ್ರಿ ಇರುವುದಾಗಿ ಪ್ರಗತಿಪರ ರೈತ ನೀಲಕಂಠ ಅಗ್ರಹಾರ ಶ್ಯಾಮಣ್ಣ ಮಾಲೂರು ಪಶುವೈದ್ಯ ಸಹಾಯಕ ನಿರ್ದೇಶಕಿ ವೀಣಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಮಾಡಿದ ಕಾರಣಕ್ಕೆ ತನ್ನ ಜಾನುವಾರುಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ, ಜಾನುವಾರು ಕಾಲು ಸರಿ ಹೋಗುವವರಿಗೂ ಪಶು ಆಸ್ಪತ್ರೆ ಆವರಣದಲ್ಲಿಯೇ ಹಗಲುರಾತ್ರಿ ಇರುವುದಾಗಿ ಪ್ರಗತಿಪರ ರೈತ ನೀಲಕಂಠ ಅಗ್ರಹಾರ ಶ್ಯಾಮಣ್ಣ ಮಾಲೂರು ಪಶುವೈದ್ಯ ಸಹಾಯಕ ನಿರ್ದೇಶಕಿ ವೀಣಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಲೂರು ತಾಲ್ಲೂಕಿನ ಅರಳೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೀಲಕಂಠ ಅಗ್ರಹಾರ ಗ್ರಾಮದ ಪ್ರಗತಿ ಪರ ರೈತ ಶ್ಯಾಮಣ್ಣ ಎಂಬುವರ ಹಸು ಒಂದು ವಾರದ ಹಿಂದೆ ಕಾಲಿಗೆ ಗಾಯವಾಗಿ ನೆಡಯಲು ಅಗದ ಸ್ಥಿತಿಯಲ್ಲಿದೆ.
ಹಾಗಾಗಿ ಪಶು ವೈಧ್ಯರ ಬಳಿ ಹೇಳಿದಾಗ ತಕ್ಷಣಕ್ಕೆ ಯಾವುದೋ ಇಂಜೆಕ್ಷನ್ ಹಾಕಿದ್ದು, ರಾಸುಗೆ ಇರುವ ರೋಗ ಯಾವುದು ಎಂಬ ಬಗ್ಗೆ ಪರಿಶೀಲನೆ ನಡೆಸಿಲ್ಲ. ಅಲ್ಲದೆ ಯಾವ ಚಿಕಿತ್ಸೆ ನೀಡಿದ್ದಾರೆ ಎಂಬುದನ್ನೂ ತಿಳಿಸಿಲ್ಲ. ಚಿಕಿತ್ಸೆ ನೀಡಿ ಒಂದು ವಾರ ಕಳೆದರೂ ಗಾಯ ವಾಸಿಯಾಗಿಲ್ಲ ಪಶುವೈದ್ಯರ ಬಳಿ ಬಂದು ಹಸು ನಡೆಯಲು ಸಾಧ್ಯವಾಗುತ್ತಿಲ್ಲ. ಹಾಗೂ ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇರುವುದಾಗಿ ದಲಿತ ಸಂಘಟನೆ ಮುಖಾಂತರ ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ಚಿಕಿತ್ಸೆ ಕೇಳಿದರೆ ಅಂಬುಲೆನ್ಸ್ ವೈಧ್ಯರ ಬಳಿ ತೋರಿಸಿಕೋ ಎಂದು ನಿರ್ಲಕ್ಷ ತೋರಿದ್ದಾರೆ. ಎಂದು ರೈತ ಆರೋಪಿಸಿದ್ದಾರೆ.
ಹಸು ಕರತಬೇಕಾದರೆ 2 ಕೀ.ಮಿ ನಡೆಯಲು ಸಾಧ್ಯ ಅಗುತ್ತಿಲ್ಲ ಎಂದು ಹೇಳಿದರೂ ಅಂಬುಲೇನ್ಸ್ ವೈದ್ಯರ ಬಳಿ ತೋರಿಸುವಂತೆ ತಾತ್ಸಾರ ಮಾಡಿದ್ದಾರೆ. ರೈತರ ಕಷ್ಟಗಳಿಗೆ ಸ್ಪಂದಿಸದ ವೈಧ್ಯರು ಅಗತ್ಯವಿಲ್ಲ. ಹಸುವಿನ ಕಾಲು ಸರಿಹೋಗುವವರಿಗೆ ಪಶು ಆಸ್ಪತ್ರೆಯ ಆವರಣದಲ್ಲಿ ಕಟ್ಟಿ ಹಾಕಿ ರಾತ್ರಿ ಹಗಲು ನಾನೂ ಆಸ್ಪತ್ರೆಯಲ್ಲೆ ವಾಸ ಮಾಡಿ ಪ್ರತಿಭಟಿಸುವುದಾಗಿ ರೈತ ಹೇಳಿದರು.