ಬರೋಬ್ಬರಿ 46 ಲೀಟರ್ ಹಾಲು ಕೊಟ್ಟ ಹಸು!
1 min readದಸರಾ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ; ಬರೋಬ್ಬರಿ 46 ಲೀಟರ್ ಹಾಲು ಕೊಟ್ಟ ಹಸು!
ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಗೀತಾ ಚೌಡಯ್ಯ ಅವರ ಹಸು 46.690 ಲೀಟರ್ ಹಾಲು ನೀಡುವ ಮೂಲಕ ಪ್ರಥಮ ಸ್ಥಾನ ಗಳಿಸಿದೆ.
ದಸರಾ ಮಹೋತ್ಸವ ಅಂಗವಾಗಿ ರೈತ ದಸರಾ ಸಮಿತಿ ವತಿಯಿಂದ ಜೆ ಕೆ ಮೈದಾನದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಗೀತ ಚೌಡಯ್ಯ ಅವರು ಪ್ರಥಮ ಸ್ಥಾನ ಗಳಿಸಿ 50 ಸಾವಿರ ರೂ. ಚೆಕ್ ಹಾಗೂ ಟ್ರೋಫಿ ಪಡೆದರು.
2 ಮತ್ತು 3 ನೇ ಸ್ಥಾನ ಯಾವ ಹಸು?
ಮಂಡ್ಯ ಜಿಲ್ಲೆಯ ದುದ್ದಗ್ರಾಮದ ಶೀರ ಹೆಗಡೆ ಅವರ ಹಸು 36.450 ಕೆ.ಜಿ. ಹಾಲು ನೀಡಿದ್ದರಿಂದ ದ್ವಿತೀಯ ಸ್ಥಾನ ಪಡೆದು, 40 ಸಾವಿರ ಹಾಗೂ ಟ್ರೋಫಿ ಪಡೆದರು. ಮೈಸೂರಿನ ಕಾಟಪ್ಪ ಗರಡಿ ಸಮೀಪದ ನಿವಾಸಿ ಪಿ.ಸಾರವ್ ವಿನೋದ್ ರವೀಂದ್ರ ಅವರ ಹಸು 34.160 ಕೆ.ಜಿ. ಹಾಲು ನೀಡಿದ್ದರಿಂದ ತೃತೀಯ ಸ್ಥಾನ ಪಡೆದು 30 ಸಾವಿರ ರೂ. ಹಾಗೂ ಟ್ರೋಫಿ ಪಡೆದರು. ಅಲ್ಲದೇ, ಬೆಂಗಳೂರಿನ ಆನೇಕಲ್‌ನ ಪಿ.ಶ್ರೀನಿವಾಸ್ ಅವರ ಹಸು 34.070 ಕೆ.ಜಿ. ಹಾಲು ನೀಡಿದ್ದರಿಂದ ಸಮಾಧಾನಕರ ಬಹುಮಾನಕ್ಕೆ ಭಾಜನರಾದರು. ಇವರಿಗೆ 10 ಸಾವಿರ ರೂ. ಹಾಗೂ ಟ್ರೋಫಿ ನೀಡಲಾಯಿತು.