ಮುರಿಯಿತಾ ಮೈತ್ರಿ? ನನ್ನ ಕುಟುಂಬಕ್ಕೆ ವಿಷ ಹಾಕಿದವರ ಜೊತೆಗೆ ನಾನು ಹೋಗಬೇಕೇ ಎಂದ ಹೆಚ್‌ಡಿಕೆ
1 min readರಾಜ್ಯದಲ್ಲಿ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಬೆಳವಣಿಗಗಳು ನಡೆಯುತ್ತಿವೆ. ಅದರಲ್ಲೂ ಸಿಎಂ ಸಿದ್ದಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ಜೊತೆ ರಾಜ್ಯ ರಾಜಕೀಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಈಗ ನಾವೆಲ್ಲಾ ಒಂದೇ ಎನ್ನುತ್ತಿದ್ದ ಹೆಚ್‌ಡಿ ಕುಮಾರಸ್ವಾಮಿ (HD Kumaraswamy)ಬಿಜೆಪಿಯ ಈ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.
ಹೌದು, ರಾಜ್ಯ ರಾಜಕಾರಣ ತೀವ್ರ ಕುತೂಹಲ ಮೂಡಿಸಿದ್ದು, ಇದರ ಭಾಗವಾಗಿ ಈಗ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ನನ್ನ ಕುಟುಂಬಕ್ಕೆ ವಿಷ ಹಾಕಿದವರ ಜೊತೆಗೆ ನಾನು ಹೋಗಬೇಕೆ ಅನ್ನೋ ಆಕ್ರೋಶದ ಮಾತುಗಳನ್ನು ಆಡಿದ್ದಾರೆ. ಈ ಮೂಲಕ ತೆನೆ ಹಾಗೂ ಕಮಲದಲ್ಲಿ ಆಂತರಿಕ ಕಲಹ ಆರಂಭ ಆಗಿದೆಯಾ ಅನ್ನೋ ಅನುಮಾನ ಮೂಡುವಂತೆ ಆಗಿದೆ. ಹಾಗಿದ್ರೆ ಕುಮಾರಸ್ವಾಮಿ ಯಾಕೆ ಈ ಹೇಳಿಕೆ ನೀಡಿದ್ದಾರೆ?, ಇದರ ಹಿನ್ನೆಲೆ ಏನು ಅನ್ನೋ ಮಾಹಿತಿ ಇಲ್ಲಿದೆ.
ಹಾಸನದಲ್ಲಿ ಕೆಲವು ತಿಂಗಳಿಂದ ಏನೆಲ್ಲಾ ಆಗಿದೆ ಅನ್ನೋದು ನಿಮ್ಮೆಲ್ಲರಿಗೂ ತಿಳಿದ ವಿಚಾರ. ಇದರಿಂದ ಭಾರೀ ಮನನೊಂದಿರುವ ಕುಮಾರಸ್ವಾಮಿ ಇದೀಗ ಬಿಜೆಪಿಯ ಈ ಮುಖಂಡರ ವಿರುದ್ಧ ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ವಿರುದ್ಧ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ನಾನು ಬರುವುದಿಲ್ಲ ಅನ್ನೋ ಹೇಳಿಕೆ ನೀಡಿದ್ದಾರೆ. ಇದರಿಂದ ಬಿಜೆಪಿ ಮುಖಂಡರಿಗೆ ಶಾಕ್ ಹೊಡೆದಂತೆ ಆಗಿದೆ.
ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ (BJP and JDS alliance) ಈ ಬಾರಿ ಹಲವು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಈ ಕಾರಣಕ್ಕೆ ಮೋದಿ ಅವರು ಹೆಚ್‌ಡಿಕೆಗೆ ಕೇಂದ್ರದಲ್ಲಿ ಉತ್ತಮ ಸ್ಥಾನ ನೀಡಿದ್ದಾರೆ. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ದಿಢೀರನೆ ವಯಕ್ತಿಕ ಹೇಳಿಕೆಯನ್ನು ನೀಡಿರುವುದು ಎಲ್ಲರಲ್ಲೂ ದಿಗಿಲು ಉಂಟಾಗುವಂತೆ ಮಾಡಿದೆ.
ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಹೋರಾಟ ನಡೆಸಲು ಈಗಾಗಲೇ ದಿನಾಂಕ ನಿಗದಿ ಮಾಡಿಕೊಳ್ಳಲಾಗಿದೆ. ಅದರಂತೆ ಬಿಜೆಪಿ ಪಾದಯಾತ್ರೆಗೆ ಮುಂದಾಗಿದ್ದು, ಈ ಪಾದಯಾತ್ರೆಗೆ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಮಾತು ಈಗ ಹೆಚ್‌ಡಿಕೆ ಮಾತಿನಿಂದ ತಿಳಿದುಬಂದಿದೆ. ಪಾದಯಾತ್ರೆಗೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಮ್ಮ ಶಕ್ತಿ ಇರೋದು ಬೆಂಗಳೂರಿಂದ ಮೈಸೂರುವರೆಗೆ. ಹೀಗಾಗಿ ನಾವು ಹೇಗೆ ತಾನೆ ಪಾದಯಾತ್ರೆಗೆ ಬೆಂಬಲ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಜೆ.ಟಿ ದೇವಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರು ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಪಾದಯಾತ್ರೆ ಮಾಡಬೇಕು ಎಂದು ಬಿಜೆಪಿ ನಾಯಕರು ಈ ಮುಂಚೆ ನಿರ್ಧಾರ ಮಾಡಿದ್ದರು. ನಮಗೆ ಮಾಹಿತಿಗಾಗಿ ಹೇಳಿದ್ದಾರೆ ಅಷ್ಟೇ, ಬಿಜೆಪಿ ನಿಲುವಿನಲ್ಲಿ ತಿರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಸೂಕ್ತವಾದ ಸಂದರ್ಭವಲ್ಲ ಅಂತಾ ನಾವು ಹಿಂದೆ ಸರಿದಿದ್ದೇವೆ. ಜನರ ಟೀಕೆ ವ್ಯಕ್ತವಾಗುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.
ಈ ಹಿನ್ನಲೆ ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ. ಅಲ್ಲಿನ ಜನರ ಸಮಸ್ಯೆ ಏನು ಅದು ಮುಖ್ಯ. ಪಾದಯಾತ್ರೆಯಿಂದ ಲಾಭ ಏನು ? ಕಾನೂನು ಹೋರಾಟವು ಮುಖ್ಯ. ಆದರೆ, ರಾಜಕೀಯವೇ ನಮಗೆ ಪ್ರಾಮುಖ್ಯವಲ್ಲ. ನಾವು ನೈತಿಕ ಬೆಂಬಲವನ್ನೂ ಸಹ ಕೊಡಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಪ್ರೀತಂಗೌಡ ಯಾರು? ಪೆನ್ ಡ್ರೈವ್ ಹಂಚಿಕೆಗೆ ಯಾರು ಕಾರಣ ಎಂದ ಅವರು, ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟುವನು ಅವನು. ಅಂತವರ ಜೊತೆಗೆ ವೇದಿಕೆ ಮೇಲೆ ಕೂರಿಸ್ತಾರೆ. ಇಂತವರ ಜೊತೆಗೆ ಪಾದಯಾತ್ರೆ ಮಾಡೋದು ಎಷ್ಟು ಸರಿ ಎಂದು ಹೇಳಿದ್ದಾರೆ.
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday #ctv -news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday #rtodaybreakingnews #chikkaballapuranews #flashnews #liveupdatenews @ctv-news