ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್
1 min readಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್
ಪುರಸಭೆಯಲ್ಲಿ 25 ಸಾವಿರ ಲಂಚ ಸ್ವೀಕರಿಸುವಾಗ ಬಂಧನ
ಪುರಸಭೆ ವ್ಯಾಪ್ತಿಯ ನಿವೇಶನಕ್ಕೆ ಇ ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಪುರಸಭೆ ಬಿಲ್ ಕಲೆಕ್ಟರ್ ಆರುಣ್ ಕುಮಾರ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪುರಸಭೆ ವ್ಯಾಪ್ತಿಯ ನಿವೇಶನಕ್ಕೆ ಇ ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಲ್ ಕಲೆಕ್ಟರ್‌ವೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಪುರಸಭೆ ಕಚೇರಿಯಲ್ಲಿಯೇ ಲಂಚ ಸ್ವೀಕರಿಸುವಾಗ ಲೋಕಾ ಖೆಡ್ಡಾಗೆ ಬಿದ್ದಿದ್ದು, ಆರೋಪಿಯನ್ನು ಅರುಣ್ ಕುಮಾರ್ ಎಂದು ಗುರ್ತಿಸಲಾಗಿದೆ.
ಬಾಗೇಪಲ್ಲಿ ಪುರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅರುಣ್ ಕುಮಾರ್ ಎಂಬಾತ ನಿವೇಶನವೊಂದಕ್ಕೆ ಇ ಖಾತೆ ಮಾಡಿಕೊಡಲು ಅಂಜನ್ ಕುಮಾರ್ ಎಂಬುವವರಿ0ದ ೫೦ ಸಾವಿರ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾನೆ. ಅಂತಿಮವಾಗಿ 30 ಸಾವಿರಕ್ಕೆ ಒಪ್ಪಿಕೊಂಡು ಮುಂಗಡವಾಗಿ ೫ ಸಾವಿರ ರೂಪಾಯಿ ಪಡೆದುಕೊಂಡಿದ್ದು ಎನ್ನಲಾಗಿದೆ. ಉಳಿದ 25 ಸಾವಿರ ರೂಪಾಯಿಗಳನ್ನು ಇಂದು ಪುರಸಭೆ ಕಚೇರಿ ಆವರಣದಲ್ಲಿಯೇ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರ ಕುಮಾರ್ ಮತ್ತು ತಂಡ ಬಿಲ್ಕಲೆಕ್ಟರ್‌ನನ್ನು ಬಲೆಗೆ ಬೀಳಿಸಿದೆ.
ಈ ಘಟನೆ ಬೆಳಿಗ್ಗೆ 11 ಗಂಟೆಗೆ ನಡೆದಿದೆಯಾದರೂ ರಾತ್ರಿ 8 ಗಂಟೆಯವರೆಗೂ ಆರೋಪಿ ಅರುಣ್ ಕುಮಾರ್ ವಿಚಾರಣೆ ಮುಂದುವರೆದಿತ್ತು. ಅನೇಕ ಸಲ ಕಚೇರಿಗೆ ತಿರುಗಾಡಿದರೂ ಲಂಚಬಾಕ ಬಿಲ್ ಕಲೆಕ್ಟರ್ ಅಂಜನ್ ಕುಮಾರ್ ಎಂಬುವರನ್ನು ಹಣಕ್ಕೆ ಪೀಡಿಸುತ್ತಿದ್ದ. ಇದರಿಂದ ರೋಸಿಹೋಗಿದ್ದ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದ ಹಿನ್ನಲೆಯಲ್ಲಿ ಬಿಲ್ ಕಲೆಕ್ಟರ್‌ನನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.