ಜನ್ಮದಿನದಂದೇ ಮಸಣ ಸೇರಿದ ಬಿಕಾಂ ವಿದ್ಯಾರ್ಥಿನಿ
1 min readಜನ್ಮದಿನದಂದೇ ಮಸಣ ಸೇರಿದ ಬಿಕಾಂ ವಿದ್ಯಾರ್ಥಿನಿ
ಹುಟ್ಟುಹಬ್ಬಕ್ಕಾಗಿ ಮನೆಗೆ ಬರುತ್ತಿದ್ದ ಯುವತಿ ದುರಂತ ಸಾವು
ಹೆದ್ದಾರಿಯಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿ
ಆ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು, ವಿಶೇಷ ಅಂದ್ರೆ ಇಂದು ಕಿರಿಮಗಳ ಹುಟ್ಟು ಹಬ್ಬ, ಹಾಗಾಗಿ ಕಾಲೇಜಿಗೆ ಹೋಗಿ ಬರ್ತೇನೆ ಅಂತಾ ಅಮ್ಮನಿಗೆ ಬಾಯ್ ಹೇಳಿ ಹೋದ ಮಗಳು ಕತ್ತಲಾಗುವಷ್ಟರಲ್ಲಿ ಶವವಾಗಿದ್ದಾಳೆ. ಇತ್ತ ಮಗಳ ಬರ್ತಡೇ ಸೆಲಬ್ರೇಷನ್ ಮಾಡಲು ಕಾಯುತಿದ್ದ ತಂದೆತಾಯಿ ಮಗಳ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ ಅಷ್ಟಕ್ಕೂ ಅದೇನಾಯಿತು ಅಂತೀರಾ ಈ ಸ್ಟೋರಿ ನೋಡಿ
ಹೀಗೆ ನುಜ್ಜು ಗುಜ್ಜಾಗಿರುವ ಇಂಡಿಕಾ ಕಾರು, ರಕ್ತ ಮಡುವಿನಲ್ಲಿ ಉಸಿರು ಚೆಲ್ಲಿರುವ ವಿದ್ಯಾರ್ಥಿನಿ, ಆಸ್ಪತ್ರೆ ಶವಗಾರದ ಬಳಿ ಕಣ್ನೀರು ಹಾಕುತ್ತಿರೋ ಕುಟುಂಬ ಸದಸ್ಯರು ಈ ದೃಶ್ಯಗಳು ಕಂಡುಬoದಿದ್ದು ಚಿಕ್ಕಬಳ್ಳಾಪುರ ನಗರದ ಜಿಲ್ಲಾಸ್ಪತ್ರೆಯ ಬಳಿ ಇರುವ ಶವಗಾರದ ಮುಂದೆ. ಹೀಗೆ ತಮ್ಮ ಪ್ರೀತಿಯ ತಂದೆಯೊದಿಗೆ ಕ್ಯೂಟ್ ಆಗಿ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿರೋ ಮುದ್ದಿನ ಹೆಣ್ಣುಮಕ್ಕಳು, ಹಿರಿಮಗಳ ಹೆಸರು ದೀಪಿಕಾ, ಕಿರಿ ಮಗಳ ಹೆಸರು ರಕ್ಷಿತಾ. ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ನಿವಾಸಿಗಳು.
ದೀಪಿಕಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಸಲ ಮಾಡ್ತಿದ್ರೆ, ರಕ್ಷಿತಾ ಬೆಂಗಳೂರಿನ ಪ್ರತಿಷ್ಠಿತ ನಿಟ್ಟೇ ಮೀನಾಕ್ಷಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡ್ತಿದ್ಲು. ನೆನ್ನೆ ದೀಪಿಕಾಳ ಹುಟ್ಟುಹಬ್ಬ, ಹುಟ್ಟು ಹಬ್ಬ ಇದ್ದಿದ್ರಿಂದ ಬೆಳಗ್ಗೆ ಕಾಲೇಜಿಗೆ ಹೋಗಿ ಬರ್ತೇನೆ ಎಂದು ಅಮ್ಮನಿಗೆ ಬಾಯ್ ಹೇಳಿ ಹೋದವಳು ರಾತ್ರಿ ಶವವಾಗಿದ್ದಾಳೆ. ಆದ್ರೆ ಸಂಜೆ ಬಸ್ ಸಿಗಲಿಲ್ಲ ಅಂತ ಸ್ನೇಹಿತನ ಕಾರಿನಲ್ಲಿ ಡ್ರಾಪ್ ಮಾಡಿಸಿಕೊಂಡಿದ್ದಾಳೆ. ಸ್ನೇಹಿತನ ಇಂಡಿಕಾ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಬರುವಾಗ ನಾಗಾರರ್ಜುನ ಕಾಲೇಜು ಬಳಿ ಡಿವೈಡರ್‌ಗೆ ಡಿಕ್ಕಿಯಾಗಿ ದೀಪಿಕಾ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾಳೆ. ಇತ್ತ ಮನೆಯಲ್ಲಿ ಮಗಳ ಬರ್ತಡೇ ಮಾಡೋಣ ಅಂತ ಕಾಯುತಿದ್ದ ತಂದೆತಾಯಿಗೆ ಮಗಳ ಸಾವಿನ ಸುದ್ದಿ ಬರ ಸಿಡಿಲಿನಂತೆ ಬಡಿದಿದೆ.
ರಕ್ಷಿತಾ ಬೆಂಗಳೂರಿನ ನಿಟ್ಟೇ ಮೀನಾಕ್ಷಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತಿದ್ಲು, ಕಾಲೇಜಿನಲ್ಲಿ ಲವಲವಿಕೆಯಿಂದ ಇರುತಿದ್ಲು, ಸಿಎ ಮುಗಿಸಿಕೊಂಡು ಉನ್ನತ ಹುದ್ದೆಗೆ ಸೇರುವ ಆಸೆ ಹೊಂದಿದ್ಲು. ನಿನ್ನೆ ಹಬ್ಬ ಆಗಿದ್ರಿಂದ ಸ್ನೇಹಿತರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡು ಸಂಜೆ ಮಳೆ ಮತ್ತು ಟ್ರಾಫಿಕ್ ಜಾಮ್ ಆಗಿದ್ರಿಂದ ಸ್ನೇಹಿತನ ಇಂಡಿಕಾ ಕಾರಿನಲ್ಲಿ ಡ್ರಾಪ್ ಮಾಡಿಸಿಕೊಳ್ಳುವ ವೇಳೆ ಅಪಘಾತ ಸಂಭವಿಸಿದೆ. ಇಂದು ಪರೀಕ್ಷೆ ಬರೆದು ಪಾಸಾಗಬೇಕಾಗಿದ್ದ ರಕ್ಷಿತಾ ತನ್ನ ಜೀವನದ ಅದ್ಯಾಯವನ್ನೇ ಮುಗಿಸಿ ಇಹಲಕೋಕ ಸೇರಿದ್ದಾಳೆ. ಕುಟುಂಬಸ್ಥರು ಶೋಕ ಸಾಗರಲ್ಲಿ ಕೈ ತೊಳೆಯುಂತಾಗಿದೆ.
ಒಟ್ಟಾರೆ ಇಬ್ಬರು ಹೆಣ್ಣುಮಕ್ಕಳ ಮೇಲೆ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದ ತಂದೆ ತಾಯಿ ಒಬ್ಬ ಮಗಳನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದಾರೆ. ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ಮಾಡಿ, ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.