ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಚೆಂಡು ಹೂವು
1 min readಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಚೆಂಡು ಹೂವು
ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಪಡೆಯಲು ಸಹಕಾರಿ
ಕಡಿಮೆ ನೀರಿನಿಂದ ಹೆಚ್ಚು ಫಸಲು ಪಡೆಯಲು ಅನುಕೂಲ
ರೈತರು ಹೊಸ ಪ್ರಯೋಗಗಳಿಗೆ ಇಳಿಯುವ ಮುನ್ನ ಸಾವಿರ ಬಾರಿ ಯೋಚಿಸಬೇಕು. ಹೊಸದಾಗಿ ಹಾಕಿದ ಬೆಳೆ ಕೈ ಹಿಡಿದರೆ ಸರಿ, ಇಲ್ಲವಾದರೆ ರೈತನ ಸ್ಥಿತಿ ಚಿಂತಾಜನ. ಹೂವಿನ ಕೃಷಿಯೂ ಹಾಗೆಯೇ., ಸೇವಂತಿಗೆ ಹಾಗೂ ಚೆಂಡು ಹೂವು ಬೆಳೆಯಲು ಪ್ರಸಿದ್ದಿಯಾಗಿರುವ ಆಚೇಪಲ್ಲಿ ಗ್ರಾಮದಲ್ಲಿ ೩ ಎಕರೆಯಲ್ಲಿ ಚೆಂಡು ಹೂವು ಬೆಳೆದು ಆರಂಭದ ಹಂತದಲ್ಲಿಯೇ ಲಾಭ ಪಡೆಯುವಲ್ಲಿ ರೈತ ಯಶಸ್ವಿಯಾಗಿದ್ದಾನೆ.
ಸೇವಂತಿಗೆ ಹಾಗೂ ಚೆಂಡು ಹೂವು ಬೆಳೆಯಲು ಪ್ರಸಿದ್ದಿಯಾಗಿರುವ ಆಚೇಪಲ್ಲಿ ಗ್ರಾಮದಲ್ಲಿ ೩ ಎಕರೆಯಲ್ಲಿ ಚೆಂಡು ಹೂವು ಬೆಳೆದು ಆರಂಭದ ಹಂತದಲ್ಲಿಯೇ ಲಾಭ ಪಡೆಯುವಲ್ಲಿ ರೈತ ಯಶಸ್ವಿಯಾಗಿz್ದÁನೆ. ಈ ರೈತ ಎರಡು ವರ್ಷದ ಹಿಂದೆ ೫ ಎಕರೆಯಲ್ಲಿ ಸೇವಂತಿಗೆ ಹೂವು ಬೆಳೆದು ಅಧಿಕ ಲಾಭ ಪಡೆದು ಜಿ¯್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿದ್ದಾರೆ. ಆಚೇಪಲ್ಲಿ ರೈತ ಚಂದ್ರಪ್ಪ ಮಾತನಾಡಿ, ಆಯುಧ ಪೂಜೆ ಹಾಗೂ ವಿಜಯದಶಮಿ ಸಮೀಪಿಸುತ್ತಿದ್ದು, ಹೋಬಳಿಯ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿರುವ ಚೆಂಡು ಹೂವಿಗೆ ಬೇಡಿಕೆ ಹೆಚ್ಚಾಗಿದೆ.
ಸೇವಂತಿಗೆ ಹಾಗೂ ಚೆಂಡು ಹೂ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದು, ವಾಹನ, ಆಯುಧಗಳನ್ನು ಅಲಂಕರಿಸಲು ಚೆಂಡು ಹೂಗೆ ಭರ್ಜರಿ ಬೇಡಿಕೆ ಇದೆ. ಸೇವಂತಿಗೆ ಹೂವಿಗೆ ಹೋಲಿಸಿದರೆ ಚೆಂಡು ಹೂವು ತುಸು ಅಗ್ಗ. ಇದನ್ನರಿತ ಆಚೇಪಲ್ಲಿ ರೈತ ಚಂದ್ರಪ್ಪ ಹಬ್ಬದ ಸಂದರ್ಭದಲ್ಲಿ ದ್ವಿಗುಣ ಲಾಭ ಗಳಿಸಲು ಚೆಂಡು ಹೂ ಬೆಳೆಸಿದ್ದಾರೆ. ಕೇವಲ 60 ದಿನಗಳಲ್ಲಿ ಸಸಿ ಬೆಳೆದು ಭರ್ಜರಿ ಹೂಗಳಿಂದ ತೋಟ ಕಂಗೊಳಿಸುತ್ತದೆ.
ಹಬ್ಬಗಳನ್ನು ಗಮನದಲ್ಲಿರಿಸಿಕೊಂಡು ಚೆಂಡು ಹೂ ಸಸಿ ನಾಟಿ ಮಾಡಿದ್ದು, ಕೊಳವೆ ಬಾವಿ, ನೀರಾವರಿ ಸೌಲಭ್ಯವಿರುವ ರೈತರು ಅಲ್ಪ ನೀರಿನಲ್ಲಿಯೂ ಚೆಂಡು ಹೂ ಬೆಳೆಯಬಹುದು. ನರ್ಸರಿಗಳಲ್ಲಿ ಒಂದಕ್ಕೆ ೩ರಂತೆ ಸಸಿ ತಂದು ನಾಟಿ ಮಾಡಲಾಗಿದೆ. ೩೦ ದಿನಗಳಲ್ಲಿಯೇ ಹೂ ಬಿಡಲು ಆರಂಭವಾಗಿದೆ ಎಂದು ತಿಳಿಸಿದರು. ಬಾಗೇಪಲ್ಲಿ ತಾಲ್ಲೂಕು ಬರಡು ಭೂಮಿಯಾಗಿದ್ದು, ಕಡಿಮೆ ವೆಚ್ಚದಲ್ಲಿ ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ಹೈದರಾಬಾದ್‌ನಂತಹ ದೊಡ್ಡ ಮಾರುಕಟ್ಟೆಗೆ ಚಂಡು ಹೂ, ಸೇವಂತಿಗೆ ಸಾಗಿಸಲಾಗುತ್ತಿದೆ. ಹೂ ಕೀಳಲು ಕೂಲಿ ಮಹಿಳೆಯರಿಗೆ 300 ರಿಂದ 400 ಕೊಡಬೇಕಾಗಿದೆ.
ಹೈದರಾಬಾದ್ ಮಾರುಕಟ್ಟೆ ಯಲ್ಲಿ 1 ಕೆ.ಜಿ ಚೆಂಡು ಹೂಗೆ 40 ರಿಂದ ೫೦ರ ವರೆಗೆ ಮಾರಾಟ ಆಗುತ್ತದೆ. ಅಂದರೆ
ಒ0ದು ತಿಂಗಳಲ್ಲಿ ಒಂದು ಟನ್ ಚಂಡು ಹಾಗೂ ಸಂಪಿಗೆ ಹೂ ಹೈದರಾಬಾದ್ ಹೂವಿನ ಮಾರುಕಟ್ಟೆಯಲ್ಲಿ 30 ರಿಂದ 40 ಸಾವಿರ ಲಾಭ ಸಿಗುತ್ತದೆ ಎಂದರು.