ಎಚ್ಚರ…! ಇಮೇಲ್‌ನಲ್ಲಿ ಬರುವ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಬೇಡಿ!
1 min read
1 year ago
ಸೈಬರ್ ಕ್ರೈಮ್ ಎನ್ನುವುದು ಈಗೀಗ ಹೆಚ್ಚಾಗುತ್ತಿದೆ. ಅಮಾಯಕರನ್ನು ವಂಚಿಸಲು ಕ್ರಿಮಿನಲ್‌ಗಳು ನಾನಾ ರೀತಿಯಲ್ಲಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ, ಅಂತೆಯೇ ಸೈಬರ್ ಸೆಕ್ಯುರಿಟಿ ಕಂಪನಿಗಳ ವರದಿಗಳ ಪ್ರಕಾರ ಇಮೇಲ್‌ಗಳ ಮೂಲಕ ಫಿಶಿಂಗ್ ದಾಳಿಯ ಸಂಖ್ಯೆ ಹೆಚ್ಚಳವಾಗುತ್ತಿದೆ. ಫಿಶಿಂಗ್ ಮತ್ತು ಸ್ಕ್ಯಾಮ್ ಪೇಜ್‌ಗಳಿಗೆ ಲಿಂಕ್‌ಗಳನ್ನು ಎನ್‌ಕೋಡ್ ಮಾಡಲು ವಂಚಕರು QR ಕೋಡ್‌ಗಳನ್ನು ಬಳಸುತ್ತಿದ್ದಾರೆ ಎಂಬುದು ಈಗ ಗಮನಕ್ಕೆ ಬಂದಿದೆ. ಹೀಗಾಗಿ ಬಳಕೆದಾರರು ಈ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ.