ನಮೋ ಭಾರತ್ ಸ್ಟೇಷನ್ ಗಳಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಟ್ರಾನ್ಸಿಟ್ ಕಾರ್ಡ್ ಬಳಕೆಗೆ ಚಾಲನೆ ನೀಡಿದ ಪ್ರಧಾನಿ
1 min read
1 year ago
ಎನ್ ಸಿಆರ್ ಭಾಗದ ನಮೋ ಭಾರತ್ ಸ್ಟೇಷನ್ ಗಳಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಾಲೆಟ್ ಹಾಗೂ ಟ್ರಾನ್ಸಿಟ್ ಕಾರ್ಡ್ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ.
ರಾಷ್ಟ್ರೀಯ ರಾಜಧಾನಿ ಪ್ರದೇಶದ ಸಾರಿಗೆ ನಿಗಮ (ಎನ್ ಸಿಆರ್ ಟಿಸಿ) ನಮೋ ಭಾರತ್ ಸ್ಟೇಷನ್ ಗಳಲ್ಲಿ ಪರಿಚಯಿಸಲು ಸಿದ್ಧಗೊಳಿಸಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಾಲೆಟ್ ಹಾಗೂ ಟ್ರಾನ್ಸಿಟ್ ಕಾರ್ಡ್ ಅನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಅ.26) ಬಿಡುಗಡೆಗೊಳಿಸಿದರು. ಈ ಹೊಸ ಡಿಜಿಟಲ್ ವಿಧಾನದಿಂದ ದೆಹಲಿ-ಎನ್ ಸಿಆರ್ ಭಾಗದ ಪ್ರಯಾಣಿಕರಿಗೆ ತಮ್ಮ ದೈನಂದಿನ ಎಲ್ಲ ಪಾವತಿಗಳಿಗೆ ರಾಷ್ಟ್ರೀಯ ಸಾಮಾನ್ಯ ಚಲನಾ ಕಾರ್ಡ್ (ಎನ್ ಸಿಎಂಸಿ) ಬಳಸಿ ಪಾವತಿ ಮಾಡಲು ಸಾಧ್ಯವಾಗಲಿದೆ. ರಾಷ್ಟ್ರೀಯ ಸಾಮಾನ್ಯ ಚಲನಾ ಕಾರ್ಡ್ (ಎನ್ ಸಿಎಂಸಿ) ವಿತರಣೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಎನ್ ಸಿಆರ್ ಟಿಸಿ ಜೊತೆಗೆ ಸಹಭಾಗಿತ್ವ ಹೊಂದಿದೆ. ಉತ್ತರ ಪ್ರದೇಶದ ಶಹಿಬಬಾದ್ ಸ್ಟೇಷನ್ ನಲ್ಲಿ ಬಿಡುಗಡೆಗೊಳಿಸಿರುವ ಕಾರ್ಡ್ ಪ್ರಸಿದ್ಧ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಾಲೆಟ್ಗೆ ಲಿಂಕ್ ಆಗಿದೆ. ಹಾಗೆಯೇ ಈ ಕಾರ್ಡ್ ಅನ್ನು ಮೆಟ್ರೋ, ಬಸ್ ಗಳು ಹಾಗೂ ಟ್ರೇನ್ ಗಳಲ್ಲಿ ಪ್ರಯಾಣಿಸಲು, ಶಾಪಿಂಗ್ ನಡೆಸಲು ಹಾಗೂ ಇನ್ನೂ ಹಲವು ಕೆಲಸಗಳಿಗೆ ಬಳಸಬಹುದು. ಈ ಕಾರ್ಡ್ ದೆಹಲಿ-ಎನ್ ಸಿಆರ್ ಎಲ್ಲ ಎನ್ ಸಿಆರ್ ಟಿಸಿ ನಮೋ ಭಾರತ್ ಪ್ರಾದೇಶಿಕ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ (ಆರ್ ಆರ್ ಟಿಎಸ್) ಸ್ಟೇಷನ್ ಗಳಲ್ಲಿ ಲಭ್ಯವಿದೆ. ಹಾಗೆಯೇ ಇದನ್ನು ದೇಶದ ಎಲ್ಲ ಎನ್ ಸಿಎಂಸಿ ಆಧಾರಿತ ವರ್ತಕರು ಹಾಗೂ ನಿರ್ವಾಹಕರಲ್ಲಿ ಬಳಸಬಹುದು.
ಹೊಸ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಾಲೆಟ್ ಹಾಗೂ ಟ್ರಾನ್ಸಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಳಕೆದಾರರಿಗೆ ನೆರವು ನೀಡಲು ಪಿಪಿಬಿಎಲ್ ಡಿಜಿಟಲ್ ಪ್ರಕ್ರಿಯೆಯೊಂದನ್ನು ಅಭಿವೃದ್ಧಿಪಡಿಸಿದೆ. ‘ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ನಗರ ಪ್ರದೇಶದಲ್ಲಿ ಸಂಚರಿಸುವಾಗ ಎದುರಾಗುವ ಸಮಸ್ಯೆಗಳನ್ನು ನಾವು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವ್ಯಾಲೆಟ್ ಹಾಗೂ ಟ್ರಾನ್ಸಿಟ್ ಕಾರ್ಡ್ ಮೂಲಕ ಬಗೆಹರಿಸುತ್ತಿದ್ದೇವೆ. ಎನ್ ಸಿಆರ್ ಪ್ರದೇಶಾದ್ಯಂತ ಈ ಕಾರ್ಡ್ ಪ್ರಯಾಣಿಕರಿಗೆ ಅವರ ದೈನಂದಿನ ಎಲ್ಲ ಪಾವತಿ ಅಗತ್ಯಗಳನ್ನು ಪೂರ್ಣಗೊಳಿಸಲು ನೆರವು ನೀಡುತ್ತದೆ’ ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ಎಂಡಿ ಹಾಗೂ ಸಿಇಒ ಸುರೇಂದ್ರ ಚಾವ್ಲಾ ತಿಳಿಸಿದ್ದಾರೆ.