ಸುರಂಗದಿಂದ ಹೊರಬಂದ ರುದ್ರ, ನಮ್ಮ ಮೆಟ್ರೋಗೆ ಮತ್ತೊಂದು ಯಶಸ್ಸು!
1 min read
1 year ago
ಎರಡನೇ ಹಂತದ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ನಮ್ಮ ಮೆಟ್ರೋ ಮತ್ತೊಂದು ಟಿಬಿಎಂ ಮಿಷನ್ ನಿಂದ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
100 ದಿನಗಳ ಕಾಲ ಭೂಗರ್ಭದಲ್ಲಿ ಸುರಂಗ ಕೊರೆದು ಇಂದು ಯಶಸ್ವಿಯಾಗಿ ಹೊರಬಂದ ರುದ್ರ ಹೆಸರಿನ ಟಿಬಿಎಂ. ಮೆಟ್ರೋ ಎರಡನೇ ಹಂತದಲ್ಲಿ ಸುರಂಗ ಪ್ರವೇಶಿಸಿದ್ದ ರುದ್ರ ಟಿಬಿಎಂ ಮಿಷಿನ್. ಜು.14 ರಂದು ಸುರಂಗ ಕೊರೆಯುವ ಕಾಮಗಾರಿ ಆರಂಭಿಸಿದ್ದ ಟಿಬಿಎಂ ರುದ್ರ. ಜು.14 ರಿಂದ ಅ.26ರವರೆಗೆ ಒಟ್ಟು ನೂರು ದಿನಗಳ ಕಾಲ ಸುರಂಗ ಕೊರೆದು ಯಶಸ್ವಿ ಕಾರ್ಯಾಚರಣೆ ನಡೆಸಿ ಹೊರಬಂದಿದೆ. ಈ ನೂರು ದಿನಗಳಲ್ಲಿ ಬರೋಬ್ಬರಿ 718 ಮೀಟರ್ ಸುರಂಗ ಕೊರೆದು ಇಂದು ಮಧ್ಯಾಹ್ನ ಲ್ಯಾಂಗ್ ಪೋರ್ಡ್ ನಿಲ್ದಾಣದ ಬಳಿ ಹೊರ ಬಂದ ಟಿಬಿಎಂ ಮಿಷಿನ್.
ಲಕ್ಕಸಂದ್ರದಿಂದ ಲ್ಯಾಂಗ್ ಫೋರ್ಡ್ ವರೆಗೆ ನಡೆಯುತ್ತಿರುವ ಎರಡನೇ ಹಂತದ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ. ಎರಡನೇ ಹಂತದ ಕಾಮಗಾರಿಯಲ್ಲಿ ಇದು ಏಳನೇ ಟಿಬಿಎಂ ಕಾರ್ಯಾಚರಣೆಯಾಗಿದೆ.
ಕಳೆದ ತಿಂಗಳು ಆಗಸ್ಟ್‌ನಲ್ಲಿ ವಮಿಕಾ ಹೆಸರಿನ ಯಂತ್ರ ಕಾಳೇನಅಗ್ರಹಾರ-ನಾಗವಾರ ‘ಗುಲಾಬಿ’ ಮಾರ್ಗದ (21.30 ಕಿಲೋ ಮೀಟರ್) ಸುರಂಗ ಕಾಮಗಾರಿಯಲ್ಲಿ 721 ಮೀಟರ್ ಮೆಟ್ರೋ ಸುರಂಗ ಕೊರೆದು ಹೊರ ಬಂದಿತ್ತು.