ರಿಲ್ಯಾಕ್ಸ್ ಮೂಡ್‌ನಲ್ಲಿ ಮೈಸೂರು ಗಜಪಡೆ:
1 min readಕೊಟ್ಟ ತಾಲೀಮಿನಂತೆ ಆನೆಗಳ ಕ್ಯಾಪ್ಟನ್ ಅಭಿಮನ್ಯು ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಿದೆ. ಅಭಿಮನ್ಯು ಇನ್ನೂ ಎರಡು ಕಿ,ಮೀ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿತ್ತು ಎಂದು ಮಾವುತ ತಿಳಿಸಿದ್ದಾರೆ. ಅಲ್ಲದೆ ಅಂಬಾರಿ ಕಟ್ಟುವಾಗ ಸಣ್ಣ ವ್ಯತ್ಯಾಸವಾಗಿದ್ದರೂ ಅಭಿಮನ್ಯುವೇ ಅದನ್ನು ಸರಿಪರಿಸಿಕೊಂಡು ಮುನ್ನಡೆದಿದ್ದು ವಿಶೇಷವಾಗಿತ್ತು.
ದಸರಾ ಜಂಬೂ ಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗಜಪಡೆ ಬುಧವಾರ ವಿಶ್ರಾಂತಿ ಮೂಡ್‌ನಲ್ಲಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರು, ಕಾವಾಡಿಗರು ವಿಜಯದಶಮಿ ಮೆರವಣಿಗೆ ಸಾಗಿದ ಬಗ್ಗೆ ಚರ್ಚೆಯಲ್ಲಿ ತೊಡಗಿಸಿದ್ದರು. ತಮ್ಮ ಕೆಲಸವನ್ನು ಯಶಸ್ವಿಗೊಳಿಸಿದ ಧನ್ಯತಾ ಭಾವವಿತ್ತು. ಮಾವುತರು, ಕಾವಾಡಿಗಳಿಗೆ ಆಸರೆಯಾಗಿ ಆನೆ ಶಿಬಿರದಲ್ಲಿ ಬೀಡುಬಿಟ್ಟಿದ್ದ ಅವರ ಕುಟುಂಬದ ಸದಸ್ಯರೂ ಆನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ನಿರಾಳ ಭಾವದಲ್ಲಿದ್ದರು.