ಬೆಂಗಳೂರು ಗ್ರಾಮಾಂತರದ 10 ಸಾವಿರ ಮಂದಿಗಿಲ್ಲಅನ್ನ ಭಾಗ್ಯದ ಹಣ:
1 min read
1 year ago
ಅನ್ನ ಭಾಗ್ಯ ಯೋಜನೆ ಪ್ರಾರಂಭವಾಗಿ ಕೆಲವು ತಿಂಗಳುಗಳೇ ಕಳೆದಿದ್ದರೂ ಇನ್ನೂ ಹಲವರ ಖಾತೆಗೆ ಯೋಜನೆಯ ಹಣ ಸಂದಾಯವಾಗಿಲ್ಲ. ಆಧಾರ್ ಜೋಡಣೆ, ಇ ಕೆವೈಸಿ , ಪಡಿತರ ಚೀಟಿ ತಿದ್ದುಪಡಿ ಆಗದಿರುವುದೇ ಈ ಹಣ ಬಾರದಿರಲು ಕಾರಣವಾಗಿದೆ. ಪೋಸ್ಟ್ ಆಫೀಸ್ ಗಳಲ್ಲಿ ಹೊಸ ಬ್ಯಾಂಕ್ ಅಕೌಂಟ್ ತೆರೆಯಲು ಪ್ರಯತ್ನಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಒಂದು ಜಿಲ್ಲೆಯಲ್ಲೇ ಬಿಪಿಎಲ್ ಕಾರ್ಡ್ ಹೊಂದಿರುವ 10 ಸಾವಿರಕ್ಕೂ ಹೆಚ್ಚು ಜನರಿಗೆ ಹಣ ಸಂದಾಯವಾಗಿಲ್ಲ.
ಬೆಂಗಳೂರು ಗ್ರಾಮಾಂತರ: ಸರಕಾರದ 5 ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಗೆ ಸಮಸ್ಯೆಯಾದ ಬೆನ್ನಲ್ಲೇ ಸರಕಾರ 5 ಕೆಜಿ ಪಡಿತರ ಅಕ್ಕಿಗೆ ಬದಲಾಗಿ ಹಣ ನೀಡಲು ಮುಂದಾಗಿತ್ತು. ಅರ್ಹರಿಗೆ ನೇರವಾಗಿ ನಗದು ಪಾವತಿ (ಡಿಡಿಟಿ) ಮೂಲಕ ಹಣ ಪಾವತಿಯಾಗಲು ಕ್ರಮವಹಿಸಲಾಗಿತ್ತು. ಆದರೆ, ಕೆಲ ತಾಂತ್ರಿಕ ಸಮಸ್ಯೆಗಳ ಕಾರಣ ಜಿಲ್ಲೆಯ 10 ಸಾವಿರಕ್ಕೂ ಅಧಿಕ ಪಡಿತರದಾರರಿಗೆ ಈವರೆಗೂ ಹಣ ಸಂದಾಯವಾಗಿಲ್ಲ.
ಧಾರ್ ಲಿಂಕ್ ಮಾಡಿಸದಿರುವುದು,ಇ ಕೆವೈಸಿ ಸೇರಿದಂತೆ ಹಲವು ತಾಂತ್ರಿಕ ಕಾರಣಗಳಿಂದ ಅನ್ನಭಾಗ್ಯದ ಹಣ ತಲುಪಿಲ್ಲ. ಕೆಲವರು ಬ್ಯಾಂಕ್ ಖಾತೆ ತೆರೆಯಲು, ಇ ಕೆವೈಸಿ ಲಿಂಕ್ ಮಾಡಿಸಲು ನಿತ್ಯ ಬ್ಯಾಂಕ್ ಮತ್ತು ಇಂಟರ್‌ನೆಟ್ ಸೆಂಟರ್‌ಗಳಿಗೆ ತೆರಳುತ್ತಿದ್ದಾರೆ. ಬ್ಯಾಂಕ್ ಜತೆಗೆ ಅಂಚೆ ಕಚೇರಿಗಳಲ್ಲಿಯೂ ಖಾತೆ ಪ್ರಾರಂಭಿಸಬಹುದು. ಆ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಹಣ ಡಿಬಿಟಿ ಆಗುತ್ತದೆ. ಅಂಚೆ ಕಚೇರಿಯಲ್ಲಿ ಫಲಾನುಭವಿಗಳಿಗೆ ಖಾತೆ ತೆರೆಯಲು ಆಹಾರ ಇಲಾಖೆ ಕೂಡ ಸಾಕಷ್ಟು ಪ್ರಯತ್ನಿಸುತ್ತಿದೆ.