ಹಬ್ಬ ಮಹತ್ವ ಮಕ್ಕಳಿಗೆ ಹೇಳುವಂತಾಗಬೇಕು
1 min read
ಹಬ್ಬ ಮಹತ್ವ ಮಕ್ಕಳಿಗೆ ಹೇಳುವಂತಾಗಬೇಕು
ಗುಡಿಬ0ಡೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಸಲಹೆ
ಆಚರಣೆ ಮಾಡುವ ಹಬ್ಬ ಹರಿದಿನಗಳ ಮೌಲ್ಯಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಪೋಷಕರು ಮಾಡಬೇಕಾಗಿದೆ ಎಂದು ಶಾಸಕ ಎಸ್‌ಎನ್ ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು.
ಗುಡಿಬಂಡೆ ತಾಲೂಕಿನ ಜೆ.ಪಿ ನಗರದಲ್ಲಿ 2025ನೇ ಸಾಲಿನ ಸಂಕ್ರಾ0ತಿ ಸಂಭ್ರಮದಲ್ಲಿ ಮಾತನಾಡಿದ ಶಾಸಕ ಸುಬ್ಬಾರೆಡಡಿ, ಸಂಕ್ರಾ0ತಿ ಹಬ್ಬ ಯಾಕೆ ಆಚರಣೆ ಮಾಡಬೇಕು, ಅದರ ಮಹತ್ವ ಏನು ಎಂಬುದನ್ನು ಮಕ್ಕಳಿಗೆ ಹೇಳಬೇಕಾದ ಅನಿವಾರ್ಯ ಇದೆ. ಸಂಕ್ರಾ0ತಿ ಹಬ್ಬಕ್ಕೆ ಎತ್ತುಗಳಿಗೆ ಪೂಜೆ ಮಾಡಿ ಸಂಕ್ರಾ0ತಿಯನ್ನು ಮಾಡುವವರು ಇದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಹಸುಗಳಿಂದ ಯಾವ ರೀತಿ ಹಾಲು ಬರುತ್ತಿತ್ತು ಎಂದು ಹೇಳುವ ಕಾಲವೂ ಬರಬಹುದು. ಹಾಗಾಗಿ ಮಕ್ಕಳಿಗೆ ಆಚಾರ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಬೇಕು ಎಂದರು.
ಈ ವೇಳೆ ಎತ್ತುಗಳಿಗೆ ಸಿಂಗಾರ ಮಾಡಿದವರಿಗೆ, ರಂಗೋಲಿ ಬಿಡಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸನ್ಮಾನ ಮಾಡಲಾಯಿತು. ಜೆಪಿ ನಗರದಲ್ಲಿ ಸಂಕ್ರಾ0ತಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗ್ರಾಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ನಾಗವೇಣಿ, ದನುರೇಣುಕ, ವರಲಕ್ಷ್ಮೀ , ಕೃಷ್ಣೇಗೌಡ , ಬೈರಾರೆಡ್ಡಿ , ತೇಜಾ ಆನಂದ್ ರೆಡ್ಡಿ ಇದ್ದರು.