ಬಾಗೇಪಲ್ಲಿಯಲ್ಲಿ ಹೋಬಳಿ ಮಟ್ಟದ ಪ್ರೇರಣಾ ಕಾರ್ಯಕ್ರಮ
1 min readಬಾಗೇಪಲ್ಲಿಯಲ್ಲಿ ಹೋಬಳಿ ಮಟ್ಟದ ಪ್ರೇರಣಾ ಕಾರ್ಯಕ್ರಮ
ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಲು ಶ್ರಮಿಸಲು ಶಾಸಕರ ಕರೆ
ಈ ಬಾರಿ ನಡೆಯುವ ಎಸ್‌ಎಸ್‌ಎಲ್ಸಿ ಪರೀಕ್ಷೆ ಫಲಿತಾಂಶ ಇಡೀ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಲು ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.
ಬಾಗೇಪಲ್ಲಿ ಪಟ್ಟಣದ ಸರಕಾರಿ ಶಾಲಾ ಬಾಲಕೀಯರ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ 2025-25 ನೇ ಸಾಲಿನ ಎಸ್‌ಎಸ್‌ಎಲ್ಸಿ ಫಲಿತಾಂಶ ಸುಧಾರಣೆಗಾಗಿ ಕೈಗೊಂಡಿರುವ ಹೋಬಳಿ ಮಟ್ಟದ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, 10ನೇ ತರಗತಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮೊದಲ ಬಾರಿಗೆ ಬದಲಾವಣೆಯಾಗುವ ಹಂತಾಗಿದ್ದು, ನಿಮ್ಮ ಗಮನ ಶಿಕ್ಷಣದ ಕಡೆ ಹೆಚ್ಚು ನೀಡುವ ನಿಟ್ಟಿನಲ್ಲಿ ಓದಬೇಕು ಸಾಧಕರಿಗೆ ಅಸಾಧ್ಯ ಎಂಬುದು ಗೊತ್ತಿರಬಾರದು ಎಂದರು.
ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಳ್ಳಬೇಕು. ಪರೀಕ್ಷಗೆ ಎರಡೂವರೆ ತಿಂಗಳು ಬಾಕಿ ಇದೆ. ಈ ಎರಡೂ ತಿಂಗಳು ಮೊಬೈಲ್ ಮತ್ತು ಟೀವಿ ಬದಿಗೊತ್ತಿ ಕೇವಲ ಓದಿನ ಕಡೆ ಗಮನ ಕೊಡಬೇಕು. ಪೋಷಕರು ಸಂಜೆ ಸಮಯದಲ್ಲಿ ಸೀರಿಯಲ್ ನೋಡಲು ಹೋಗಬೇಡಿ, ನೀವು ಟೀವಿ ನೋಡಿದರೆ ನಿಮ್ಮ ಮಕ್ಕಳು ಟೀವಿ ನೋಡಲು ಮುಂದಾಗುತ್ತಾರೆ, ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಪಾಸಾಗಲು ನಮ್ಮ ಕಡೆಯಿಂದ 40 ರಷ್ಟು ಪಾತ್ರ ಇದ್ದರೆ ಪೋಷಕರ ಪಾತ್ರ ಶೇ.60 ರಷ್ಟು ಇರುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಪಾಸಾಗಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ, ಸ್ಥಾಯಿ ಸಮಿತಿ ಅಧ್ಯಕ್ಷ ಎ. ನಂಜು0ಡಪ್ಪ, ತಹಶೀಲ್ದಾರ್ ಮನೀಷ್ ಎನ್ ಪತ್ರಿ, ಬಿಇಒ ಎನ್. ವೆಂಕಟೇಶಪ್ಪ, ಕ್ಷೇತ್ರ ಸಮನ್ವಾಧಿಕಾರಿ ಆರ್. ವೆಂಕಟರಾಮಪ್ಪ, ಮಂಜುನಾಥರೆಡ್ಡಿ ಇದ್ದರು.