ದಲಿತರು ಒಂದಾಗುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ
1 min readದಲಿತರು ಒಂದಾಗುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ
ವಿಜಯಪುರದ ದೇವಾಲಯಕ್ಕೆ ಭೇಟಿ ನಡೀಇದ ನಾರಾಯಣಸ್ವಾಮಿ
ಸ್ವಾತಂತ್ರ ಬಂದಾಗಿನಿ0ದ ದಲಿತರು ಒಂದಾಗುವುದಕ್ಕೆ ಬಿಡದ ಕಾಂಗ್ರೆಸ್, ರಾಜ್ಯದಲ್ಲಿ ದಲಿತ ಶಾಸಕರು, ಒಂದಾಗುವುದಕ್ಕೆ ಈಗಲೂ ಅಡ್ಡಿಪಡಿಸುವ ಸಂಸ್ಕೃತಿ ಮುಂದುವರೆಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ವಿಜಯಪುರದ ದೇವಾಲಯಗಳಿಗೆ ಕುಟುಂಬ ಸಮೇತ ಭೇಟಿ ನೀಡಿ, ದರ್ಶನ ಪಡೆದ ನಂತರ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ದಲಿತರೆಲ್ಲರೂ ಒಟ್ಟಾಗಬೇಕಾದ ಅನಿವಾರ್ಯತೆ ಬಂದಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ. ದಲಿತರೂ ಅವರ ವಿರುದ್ಧವಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾಂಗ್ರೆಸ್ ಪಕ್ಷದವರಲ್ಲ. ಆದರೂ ಯಾರೋ ಶ್ರಮಪಟ್ಟು ಕಟ್ಟಿದ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಬೇರೆಯವರಿಗೂ ಅವಕಾಶ ಕೊಡಬೇಕಲ್ಲವೇ ಎಂದರು.
ಈ ಸರ್ಕಾರದಲ್ಲಿ ಡಿನ್ನರ್ ಮಾಡುವುದು ತಪ್ಪಾಗುತ್ತಿದೆ. ಯಾರೂ ಒಟ್ಟಿಗೆ ಸೇರಬಾರದೆಂಬ ಸಿದ್ಧಾಂತವನ್ನು ಕಾಂಗ್ರೆಸ್ ಜಾರಿಗೆ ತಂದಿದೆ. ದಿನಕ್ಕೊಂದು ಅವಾಂತರ ಸೃಷ್ಟಿ ಮಾಡುತ್ತಿದೆ. ರಾಜ್ಯದ ಜನರು ಆಶೀರ್ವಾದ ಮಾಡಿದ್ದಾರೆ. ಸರ್ಕಾರ ಸಂಪೂರ್ಣ ಅವಧಿ ಮುಗಿಸುವುದಿಲ್ಲ ಎಂದು ಅನಿಸುತ್ತಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಅವರು ಹೇಳಿದರು.
ಒಬ್ಬ ಶಾಸಕನನ್ನು ಕೇವಲವಾಗಿ ನಡೆಸಿಕೊಂಡಿದ್ದಾರೆ. ಸದನದಲ್ಲಿ ಅರೆಸ್ಟ್ ಮಾಡುವ ಅಧಿಕಾರ ಇರುವುದಿಲ್ಲ. ಅರ್ಧ ಗಂಟೆಯಲ್ಲಿ ಎಫ್‌ಐಆರ್ ಹಾಕುವುದಿಲ್ಲ. ಪ್ರಿಯಾಂಕ ಖರ್ಗೆ ಅವರನ್ನು ಹೇಗೆ ರಕ್ಷಣೆ ಮಾಡುತ್ತಿದ್ದಾರೆ ಎಂದು ಜನತೆಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ಕೊಡುತ್ತಾರೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ. ಎಲ್ಲಾ ಊಹಾಪೋಹ ಅಷ್ಟೇ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂದರು.
ವೆ0ಕಟರಮಣಸ್ವಾಮಿ ದೇವಾಲಯ ಸಮಿತಿಯಿಂದ ಛಲವಾದಿ ನಾರಾಯಣಸ್ವಾಮಿ ಅವರ ಕುಟುಂಬದವರನ್ನು ಅಭಿನಂದಿಸಿದರು. ನಾಯ್ಡು ತಂಡದಿ0ದ ಗೀತಗಾಯನ ಕಾರ್ಯಕ್ರಮ ನಡೆಯಿತು. ಬಿಜೆಪಿ ತಾಲ್ಲೂಕು ಕಾರ್ಯದರ್ಶಿ ರವಿಕುಮಾರ್, ಪಿ. ನಾರಾಯಣಪ್ಪ, ಬಲಮುರಿ ಶ್ರೀನಿವಾಸ್, ಪ್ರಕಾಶ್, ಅಜಿತ್ ಇದ್ದರು.