ಗೊಂದಲದ ಗೂಡಾದ ದೇವರಸನಹಳ್ಳಿ ಗ್ರಾಪಂ ಗ್ರಾಮ ಸಭೆ
1 min readಗೊಂದಲದ ಗೂಡಾದ ದೇವರಸನಹಳ್ಳಿ ಗ್ರಾಪಂ ಗ್ರಾಮ ಸಭೆ
ಸಭೆಗೆ ಬಾರದ ಅಧಿಕಾರಿಗಳು, ರದ್ದು ಮಾಡಿ ಸಭೆ ಮುಂದೂಡಿಕೆ
ನ0ಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಮೈಸೂರು, ತಾಲ್ಲೂಕು ಪಂಚಾಯಿತಿ ನಂಜನಗೂಡು, ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಗೊಂದಲದ ಗೂಡಾಗಿ ಅರಚಾಟ, ಕೂಗಾಟದ ನಡುವೆ ಸಭೆ ಮುಂದೂಡಿದ ಘಟನೆ ನಡೆಯಿತು.
ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ನಂಜು0ಡಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು ಗ್ರಾಮ ಸಭೆ ನಡೆಸಲಾಯಿತು. ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಸಭೆಗಳಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಬಂದು ಸಮಸ್ಯೆ ಆಲಿಸಿ ಪರಿಹಾರ ನೀಡಬೇಕು ಎಂಬ ನಿಯಮ ಇದ್ದರೂ ಅಧಿಕಾರಿಗಳು ಸಭೆಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಚೈತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳಿಲ್ಲದೆ ಗ್ರಾಮ ಸಭೆ ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು. ಗ್ರಾಮ ಸಭೆಯನ್ನು ಮುಂದೂಡುವ0ತೆ ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮ ಸಭೆ ರದ್ದು ಮಾಡಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಗ್ರಾಮಸಭೆ ಮಾಡುವುದಾಗಿ ಸಭೆ ಮುಂದೂಡಲಾಯಿತು.
ದ್ದಾ ದ್ದೇ ದ್ದೆ ಕ್ಷ ಧ್ಯಕ್ಷ ರ್ಭ ಭ್ಯ ಭೇ ಭೆ ರ್ಧ ಧಾ ಭಾ ಧ್ಯ ಧೆ ಧೇ ಲ್ಲಾ ಲ್ಲೆ