ಚೇಳೂರಿನಲ್ಲಿ ವೈಕುಂಠ ಏಕಾದಶಿ ಸಂಭ್ರಮ
1 min readಚೇಳೂರಿನಲ್ಲಿ ವೈಕುಂಠ ಏಕಾದಶಿ ಸಂಭ್ರಮ
ವೈಕು0ಠ ದ್ವಾರದ ಮೂಲಕ ದೇವರ ದರ್ಶನ
ಎಲ್ಲೆಲ್ಲೂ ಮುಗಿಲು ಮುಟ್ಟಿದ ಗೋವಿಂದ ನಾಮ ಸ್ಮರಣೆ
ಚೇಳೂರು ತಾಲೂಕಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿತ್ತು. ಭಕ್ತರು ಮುಂಜಾನೆಯಿ0ದಲೇ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.
ವೈಕುಂಠ ಏಕಾದಶಿ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.ವೈಕುಂಠ ದ್ವಾರಗಳನ್ನು ನಿರ್ಮಿಸಿ, ದೇವರ ಮೂರ್ತಿಗಳಿಗೆ ಹೂವು ಹಾಗೂ ಆಭರಣಗಳಿಂದ ಸಿಂಗರಿಸಿ, ಲಡ್ಡು, ಪಾಯಸ ಇನ್ನಿತರ ಅನ್ನ ಪ್ರಸಾದ ವಿತರಿಸಲಾಯಿತು. ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವೈಕುಂಠ ದ್ವಾರದ ಪೂಜೆ, ಅಷ್ಟೋತ್ತರ ಶತನಾಮಾವಳಿ ಸೇವೆ, ಮಂತ್ರ ಪುಷ್ಪ ಸೇವೆ, ಅಷ್ಟಾವಧಾನ ಸೇವೆಗಳನ್ನು ಮಾಡಲಾಯಿತು.
ಚೋಳೂರು ತಾಲ್ಲೂಕಿನ ಏನಿಗದಲೆ, ಚೀಗಟೀಗಲಗುಟ್ಟ ಹಾಗೂ ಚೇಳೂರು ಕನ್ನಿಕಾ ಪರಮೇಶ್ವರ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿತ್ತು. ದೇಗುಲದಲ್ಲಿ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದ್ದು, ಭಕ್ತರು ವೈಕುಂಠ ದ್ವಾರದ ಮೂಲಕ ಆಗಮಿಸಿ ಗೋವಿಂದ ನಾಮ ಸ್ಮರಣೆ ಯೊಂದಿಗೆ ದೇವರ ದರ್ಶನ ಮಾಡಿದರು.
ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದರೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ವೈಕುಂಠ ಏಕಾದಶಿಯ ದಿನ ಬಹಳಷ್ಟು ಭಕ್ತರು ಉಪವಾಸವಿದ್ದು, ದೇವರ ಪೂಜೆ ಕೈಗೊಳ್ಳುತ್ತಾರೆ. ಸಾಲು ಸಾಲಾಗಿ ನೂರಾರು ಭಕ್ತರು ವಿವಿಧ ದೇವಾಲಯಗಳಲ್ಲಿ ಸಾಲುಗಟ್ಟಿ ದೇವರ ದರ್ಶನ ಪಡೆಯುತ್ತಿರುವುದು ಸಾಮಾನ್ಯವಾಗಿ ಕಂಡು ಬಂತು.