ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯುತ್ ಪೂರೈಕೆ ಚರ್ಚೆ
1 min readಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯುತ್ ಪೂರೈಕೆ ಚರ್ಚೆ
ಇಂದಿನ ಸಚಿವರು, ಆಹಾರ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯುತ್ ಪೂರೈಕೆ ಕುರಿತು ಇಂದಿನ ಸಚಿವ ಕೆ.ಜೆ. ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಇಂದು ನಡೆಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯುತ್ ಪೂರೈಕೆ ಕುರಿತು ನಡೆದ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದಿನ ಸಚಿವ ಕೆ.ಜೆ.ಜಾರ್ಜ್, ಕಳೆಚ ವರ್ಷ ಬರ ಬಂದಾಗ ವಿದ್ಯುತ್ ಬೇಡಿಕೆ ಹೆಚ್ಚಾಗಿತ್ತು. ಹಿಂದಿನ ಸರ್ಕಾರ ನಾಲ್ಕು ವರ್ಷಗಳು ವಿದ್ಯುತ್ ಉತ್ಪಾದನೆ ಮಾಡದಿರುವುದು ಪ್ರಮುಖ ಕಾರಣ, ನಮ್ಮ ಸರ್ಕಾರದಲ್ಲಿ ಬರದಲ್ಲೂ ವಿದ್ಯುತ್ ಕಡಿತ ಮಾಡಿಲ್ಲ. ಈ ವರ್ಷ ಉತ್ತಮ ಮಳೆಯಾಗಿದೆ. ೧೭ ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದ್ದೇವೆ. ೧೨ ಸಾವಿರ ಮೆಗಾ ವ್ಯಾಟ್ ಬೇಡಿಕೆ ಬರಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಈ ಬಾರಿ ೧೮ ಸಾವಿರ ಮೆಗಾ ವ್ಯಾಟ್ ವಿದ್ಯುತ್ ಸಬ್ಸಿಡಿ ನೀಡಬೇಕಾಗಬಹುದು. ಗ್ಯಾರಂಟಿ ಯೋಜನೆಯಡಿ ಮನೆಗಳಿಗೆ ಉಚಿತವಾಗಿ ನೀಡುತ್ತಿದ್ದೇವೆ ಎಂದರು.
ಕಳೆದ ವರ್ಷ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಿರಲಿಲ್ಲ. ಈ ಬಾರಿ ಹೆಚ್ಚಿನ ಬೇಡಿಕೆ ಬಂದರೆ ಲೋಡ್ ಶೆಡ್ಡಿಂಗ್ ಮಾಡುವ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ. ಕೋವಿಡ್ ನಂತರ ಜನರು ಕಷ್ಟದಲ್ಲಿರುವುದರಿಂದ ಒಂದೊAದು ಮನೆಗೆ ೫ ಸಾವಿರ ತಲುಪುತ್ತಿದೆ. ಮಾರುಕಟ್ಟೆಯಲ್ಲೂ ವ್ಯವಹಾರ ವೃದ್ಧಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಭಿವೃದ್ಧಿಯಾಗುತ್ತಿದೆ. ಲೇ ಔಟ್ ಗಳ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಸಬ್ ಸ್ಟೇಷನ್ಸ್ ಮಾಡಬೇಕಾಗಿದೆ. ದೇವನಹಳ್ಳಿಯಲ್ಲಿ ೧೦೦ ಕೋಟಿ ವೆಚ್ಚದಲ್ಲಿ ಅಂಡರ್ ಕೇಬಲ್ ಅಳವಡಿಕೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಮಾತನಾಡಿ, ನಾಲ್ಕೂ ತಾಲ್ಲೂಕುಗಳಿಗೆ ಕೈಗಾರಿಕೆಗಳು ಬರುತ್ತಿರುವುದರಿಂದ ಮುಂದಿನ ದೂರದೃಷ್ಟಿ ಇಟ್ಟುಕೊಂಡು ವಿದ್ಯುತ್ ಕೊರತೆ ಬಾರದಂತೆ ಮೊದಲೇ ಯೋಜನೆ ಮಾಡಿದ್ದೇವೆ. ರೈತರಿಗೆ ನೀಡುವ ವಿದ್ಯುತ್ ಕುರಿತು ಸೌಲಭ್ಯಗಳು ಟ್ರಾರ್ನ್ಸ್ಮರ್, ಕಂಬಗಳು ಸೇರಿದಂತೆ ಸೌಲಭ್ಯಗಳು ನೀಡುವುದಕ್ಕೆ ಸುಲಭವಾಗಬೇಕು. ಈಗ ಜಿಲ್ಲೆಯಲ್ಲಿ ವಿದ್ಯುತ್ ಕೊರತೆಯಿಲ್ಲ. ಎತ್ತಿನಹೊಳೆ ಯೋಜನೆಯಡಿ ಬಯಲುಸೀಮೆ ಭಾಗಗಳಿಗೆ ನೀರು ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟನೆ ಮಾಡಿದ ನಂತರ ನಂಬಿಕೆ ಬಂದಿದೆ ಎಂದರು.
ವೈe್ಞÁನಿಕವಾಗಿ ಮೂರು ಜಿಲ್ಲೆಗಳಿಗೆ ಅಗತ್ಯವಿರುವ ನೀರಿನ ಪ್ರಮಾಣ ಕುಡಿಯುವ ನೀರಿಗಾಗಿ ೧೬ ಟಿಎಂಸಿ ಚಾಲನೆ ನೀಡುವ ಹೊತ್ತಿಗೆ ೨೨ ಟಿಎಂಸಿ ನೀರು ಲಭ್ಯವಿತ್ತು. ಕೆಲ ರೈತರು ತಡೆ ಮಾಡಿದ್ದರಿಂದ ಸ್ವಲ್ಪ ತಡವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸಮಸ್ಯೆ ಬಗೆಹರಿಸಿದ್ದಾರೆ. ಮುಂದಿನ ಒಂದೂವರೆ ವರ್ಷದಲ್ಲಿ ನೀರು ಹರಿಯಲಿದೆ ಎಂದರು.
ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, ಎತ್ತಿನಹೊಳೆ ಯೋಜನೆಯಡಿ ಮಳೆಗಾಲದಲ್ಲಿ ಹೆಚ್ಚುವರಿ ನೀರು ಸಂಗ್ರಹಿಸಿ ಹರಿಸುವ ಯೋಜನೆಯಡಿ ಕಾಲುವೆ ಕೆಲಸ ನಡೆಯುತ್ತಿದೆ. ಗ್ರಾಮಾಂತರ ಜಿಲ್ಲೆಯ ಲಕ್ಕೇನಹಳ್ಳಿ ಬಳಿ ಜಲಾಶಯ ನಿರ್ಮಿಸಲು ಭೂಸ್ವಾಧೀನ ಮಾಡುವ ಪ್ರಕ್ರಿಯೆಗೆ ಸರ್ವೆ ಮಾಡಿಸಿದ್ದು, ಇದರ ಕ್ರಿಯಾಯೋಜನೆ ನೀರಾವರಿ ಇಲಾಖೆಗೆ ತಲುಪಿದೆ. ನೀರು ಪಂಪು ಮಾಡುವುದಕ್ಕೆ ಸ್ಟೇಷನ್ ಮಾಡಬೇಕಾಗಿದೆ. ಮುಂದಿನ ವರ್ಷದಲ್ಲಿ ಈ ಭಾಗಕ್ಕೆ ನೀರು ತಲುಪುವ ಸಾಧ್ಯತೆ ಇದೆ. ವಿಶ್ವೇಶ್ವರಯ್ಯ ಜಲ ನಿಗಮ ಕೆಲಸ ಮಾಡುತ್ತಿದೆ ಎಂದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ನೆಲಮಂಗಲ ಶಾಸಕ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಅನುರಾಧ, ವಿ. ಶಾಂತಕುಮಾರ್, ಬಿ. ರಾಜಣ್ಣ, ಜಗನ್ನಾಥ್ ಇದ್ದರು.